More

    ಪಾಕಿಸ್ತಾನಕ್ಕೆ ಮರ್ಮಾಘಾತ! ನಡೆಯಿತು ಇನ್ನೊಂದು ಸರ್ಜಿಕಲ್​ ಸ್ಟ್ರೈಕ್​- ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿ

    ಕರಾಚಿ: ಭಾರತ ನಡೆಸಿರುವ ಸರ್ಜಿಕಲ್​ ಸ್ಟ್ರೈಕ್​ನಿಂದ ಕಂಗೆಟ್ಟು ಹೋಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ ಎದುರಾಗಿದೆ. ಆದರೆ ಈ ಬಾರಿ ಇಂಥದ್ದೊಂದು ದಾಲಿ ನಡೆಸಿರುವುದು ಇರಾನ್​.

    ಬಲೂಚಿಸ್ತಾನದಲ್ಲಿ ಇರಾನ್​ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ತನ್ನ ಇಬ್ಬರು ಸೈನಿಕರನ್ನು ರಕ್ಷಿಸಲು ಇಂಥದ್ದೊಂದು ದಾಳಿ ನಡೆಸಿದೆ. ಪಾಕಿಸ್ತಾನದ ಅಬೋಟಾಬಾದ್ ಉಗ್ರರ ನೆಲೆ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ ಮಾದರಿಯಲ್ಲಿಯೇ ಇರಾನ್​ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ.

    ಜೈಷ್ ಉಲ್ ಅಡ್ಲ್ ಉಗ್ರರ ಮೇಲೆ ಈ ದಾಳಿ ನಡೆಸಿರುವ ಇರಾನ್​, ಉಗ್ರರ ವಶದಲ್ಲಿದ್ದ ನಮ್ಮ ಇಬ್ಬರು ಸೈನಿಕರನ್ನು ರಕ್ಷಣೆ ಮಾಡಿರುವುದಾಗಿ ಇರಾನ್ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

    ಈ ದಾಳಿಯಿಂದ ಪಾಕಿಸ್ತಾನ ಕಂಗೆಟ್ಟು ಹೋಗಿದೆ. ಬುಧವಾರ ತಡರಾತ್ರಿ ನಡೆದಿರುವ ಈ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸತ್ತಿರುವುದಾಗಿ ಇರಾನ್​ ಹೇಳಿದೆ. ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿದ್ದಾರೆ. ಸೈನಿಕರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್ ಘೋಷಣೆ ಮಾಡಿದೆ.

    ಎರಡೂವರೆ ವರ್ಷಗಳ ಹಿಂದೆ ಜೈಷ್ ಉಲ್ ಅಡ್ಲ್ ಸಂಘಟನೆಯು ಇರಾನ್​ನ ಗಡಿಭದ್ರತಾ ಪಡೆಯ ಕಾವಲುಗಾರರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಅವರನ್ನು ಬಿಡಿಸುವ ಉದ್ದೇಶದಿಂದ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ಎಲೈಟ್ ರೆವಲೂಷನರಿ ಗಾರ್ಡ್ಸ್(ಐ.ಆರ್.ಜಿ.ಸಿ.) ಮಾಹಿತಿ ನೀಡಿದೆ.

    ಭಾರತದ ವಿರುದ್ಧ ಷಡ್ಯಂತ್ರ ರಚಿಸಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರೇಟಾ ವಿರುದ್ಧ ಎಫ್​ಐಆರ್​

    ಅಣ್ಣಾಮಲೈ ಜೀವಕ್ಕೆ ಆಪತ್ತು- ವೈ ಪ್ಲಸ್​ ಭದ್ರತೆ ಒದಗಿಸಿದ ಸರ್ಕಾರ

    ಪ್ರೇಮಿಗಳ ದಿನ ಅದೃಷ್ಟಶಾಲಿ ಜೋಡಿಗೆ ಉಚಿತ ಡಿವೋರ್ಸ್​- ಹೊರಟಿದೆ ಸುತ್ತೋಲೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts