More

    ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

    ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ನಿಜವಾದ ರೈತರ ಹೋರಾಟ ಹಾಗೂ ರೈತರ ಹೆಸರಿನಲ್ಲಿ ಹಲವು ಘಾತುಕ ಶಕ್ತಿಗಳ ಹಿಂಸಾಚಾರ ಹೆಚ್ಚಾಗಿರುವ ನಡುವೆಯೇ, ಈ ಕಾನೂನಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳೂ ಪರ-ವಿರೋಧ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.

    ಅಂಥದ್ದೇ ಒಂದು ಟ್ವೀಟ್​ ಮೈಸೂರು ರಾಜವಂಶಸ್ಥ ಯದುವಂಶದ ಯದುವೀರ್ ಹೆಸರಿನ ಟ್ವೀಟರ್​ ಖಾತೆಯಿಂದ ಪೋಸ್ಟ್​ ಆಗಿದೆ. ಇದರಲ್ಲಿ ನಾವು ರೈತರ ಪರವಾಗಿದ್ದೇವೆ. ರೈತರನ್ನು ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನ ಬಗೆಹರಿಸಿ ಎಂದು ಟ್ವೀಟ್ ಮಾಡಲಾಗಿದೆ.

    ಈ ಟ್ವೀಟ್​ ಅನ್ನು ಕೃಷಿ ಕಾಯ್ದೆ ವಿರೋಧಿಗಳು ಶೇರ್​ ಮಾಡಿಕೊಂಡು ತಮ್ಮ ಖಾತೆಗೆ ಲಗತ್ತಿಸುತ್ತಿದ್ದಾರೆ. ಕೃಷಿ ಕಾಯ್ದೆ ಪರವಾಗಿ ಇರುವವರು ಯದುವೀರ್ ಅವರ ಈ ನಡೆ ಸರಿಯಿಲ್ಲ ಎನ್ನುತ್ತಿದ್ದಾರೆ. ಹೀಗೆ ಯದುವೀರ್​ ಅವರ ಹೆಸರಿನಲ್ಲಿ ಇರುವ ಈ ಪೋಸ್ಟ್​ಗೆ ಸಹಸ್ರಾರು ಪರ-ವಿರೋಧ ಕಮೆಂಟ್​ಗಳು ಬಂದಿವೆ.

    ಆದರೆ ಅಸಲಿಯತ್ತೇ ಬೇರೆಯಾಗಿದೆ. ಈ ಟ್ವೀಟ್​ ಕಂಡು ಖುದ್ದು ಯದುವೀರ್ ಅವರೇ ದಂಗಾಗಿ ಹೋಗಿದ್ದಾರೆ. ಇದಕ್ಕೆ ಕಾರಣ, ಇದು ಅವರ ಟ್ವಿಟರ್​ ಖಾತೆ ಅಲ್ಲವೇ ಅಲ್ಲ. ಅವರ ಹೆಸರಿನಲ್ಲಿ, ಅವರ ಫೋಟೋ ಹಾಕಿಕೊಂಡು ಫೇಕ್​ ಐಡಿ ರಚನೆ ಮಾಡಲಾಗಿದೆ. ಈ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಯದುವೀರ್​ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ 'ಯದುವೀರ್​ ಒಡೆಯರ್'​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

    ಟ್ವಿಟ್ಟರ್ ಖಾತೆಯ ಸ್ಕ್ರೀನ್‍ಶಾಟ್ ಜತೆ ಇನ್‍ಸ್ಟಾಗ್ರಾಂನಲ್ಲಿ ಸ್ಪಷ್ಟನೆಯನ್ನು ನೀಡಿರುವ ಯದುವೀರ್, ಇದೊಂದು ಫೇಕ್ ಅಕೌಂಟ್ ಆಗಿದೆ. ಇದು ನನ್ನ ಅಥವಾ ಮೈಸೂರು ಅರಮನೆಯ ಅಭಿಪ್ರಾಯವಲ್ಲ. ಇದನ್ನು ಯಾರೂ ನಂಬಬಾರದು ಎಂದು ಪೋಸ್ಟ್ ಹಾಕಿ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲು ಈ ರೀತಿಯ ಕುತಂತ್ರಗಳನ್ನು ಮಾಡುತ್ತಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತದೆ.

    ಪಾಕಿಸ್ತಾನಕ್ಕೆ ಮರ್ಮಾಘಾತ! ನಡೆಯಿತು ಇನ್ನೊಂದು ಸರ್ಜಿಕಲ್​ ಸ್ಟ್ರೈಕ್​- ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿ

    ಭಾರತದ ವಿರುದ್ಧ ಷಡ್ಯಂತ್ರ ರಚಿಸಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರೇಟಾ ವಿರುದ್ಧ ಎಫ್​ಐಆರ್​

    ಅಣ್ಣಾಮಲೈ ಜೀವಕ್ಕೆ ಆಪತ್ತು- ವೈ ಪ್ಲಸ್​ ಭದ್ರತೆ ಒದಗಿಸಿದ ಸರ್ಕಾರ

    ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts