More

    ಕವಿತಾಳ ವಿವಿಧೆಡೆ ಮಳೆ

    ಕವಿತಾಳ: ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ. ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲಿ ಮಳೆ ನೀರು ರಭಸವಾಗಿ ಹರದಿದ್ದರಿಂದ ವಾಹನ ಸವಾರರು ಪರದಾಡಿದರು.

    ತೊರಣದಿನ್ನಿಯ ಮುಖ್ಯ ರಸ್ತೆಯಲ್ಲಿನ ತಗ್ಗುಗಳಲ್ಲಿ ಮಳೆ ನೀರು ನಿಂತಿರುವುದರಿಂದ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದರು. ಕವಿತಾಳ ಮಾರ್ಗವಾಗಿ ಚಿಂಚರಕಿಗೆ ಹೋಗುವ ಕಡ್ಡೋಣಿ ರಸ್ತೆಯಲ್ಲಿ ನೀರು ಹರಿಯುತ್ತಿರುವದರಿಂದ ರಸ್ತೆ ಸಂಚಾರಕ್ಕಾಗಿ ಪರದಾಡುವಂತಾಯಿತು. ವಟಗಲ್‌ನಲ್ಲಿ ರೈತರ ಒಡ್ಡು ಹಾಕಿದ ಹೊಲದಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಮಳೆಯಿಂದ ರೈತರು ಬಿತ್ತನೆಗಾಗಿ ತಯಾರಿ ನಡೆಸಿದ್ದಾರೆ. ಪಾಮನಕಲ್ಲೂರುನಲ್ಲಿ 11.4 ಎಂಎಂ, ಕವಿತಾಳದಲ್ಲಿ 52 ಎಂಎಂ ಮಳೆಯಾಗಿದೆ ಎಂದು ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts