More

  ಹೊಂದಾಣಿಕೆಯ ರಾಜಕಾರಣ ನಡೆದಿಲ್ಲ

  ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹೊಂದಾಣಿಕೆಯ ರಾಜಕಾರಣ ನಡೆದಿಲ್ಲ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
   ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಂದಾಣಿಕೆ ಆಗಿದ್ದರೆ ಲಕ್ಷಗಳ ಲೆಕ್ಕದಲ್ಲಿ ಮುನ್ನಡೆ ಆಗಬೇಕಿತ್ತು. ಬಿಜೆಪಿಯವರು ಸೋತ ನಂತರ ನಾನಾ ಕಾರಣ ಹೇಳುತ್ತಿರಬಹುದು ಎಂದು ಪ್ರತಿಕ್ರಿಯಿಸಿದರು.
   ಬಿಜೆಪಿಯವರು 25 ವರ್ಷಗಳಿಂದಲೂ ಗೆಲ್ಲುತ್ತ ಬಂದಿದ್ದರು. ಜನರು ಮೋದಿ ಅವರನ್ನು ನೋಡಿ ಮತ ಹಾಕುತ್ತಿದ್ದರು. ಈ ಬಾರಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿದರೆ ಇಷ್ಟು ವರ್ಷ ಆಗದಿರುವ ಅಭಿವೃದ್ಧಿ ಮಾಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಜನರು ಮತ ಚಲಾಯಿಸಿದ್ದಾರೆ ಎಂದರು.
   ಜಿಲ್ಲೆಗೆ ಐಟಿ, ಬಿಟಿ ಕಂಪನಿಗಳನ್ನು ತರಲು ಬದ್ಧವಾಗಿದ್ದೇನೆ. ಆ ವಿಚಾರ ಮನಸ್ಸಿನಲ್ಲಿದೆ. ಚುನಾವಣೆ ಸಮಯದಲ್ಲೂ ಸಚಿವ ಮಲ್ಲಿಕಾರ್ಜುನ್ ಅವರು ಇದನ್ನು ಹೇಳುತ್ತ ಬಂದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಶಾಸಕರು, ಸಚಿವರ ಬಲವಿದೆ. ನಾನು ಸಂಸದೆಯಾಗಿದ್ದೇನೆ. ಆ ಭರವಸೆಯನ್ನು ಈಡೇರಿಸಲು ನೂರಕ್ಕೆ ನೂರು ಪ್ರಯತ್ನ ಮಾಡುವೆ ಎಂದರು.
   ಕ್ಷೇತ್ರದ ಮತದಾರರು, ಶಾಸಕರು, ಕಾರ್ಯಕರ್ತರು ಗೆಲ್ಲಿಸಿದ್ದರಿಂದ ಸಂಸದೆಯಾಗಲು, ಪಾರ್ಲಿಮೆಂಟ್ ಪ್ರವೇಶಿಸಲು ನನಗೆ ಅವಕಾಶವಾಗಿದೆ ಎಂದು ತಿಳಿಸಿದರು.

  See also  ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ ನಿಧನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts