More

  ಬಿಗ್​ಬಜೆಟ್​ ಕಣ್ಣಪ್ಪ ಟೀಸರ್​ ರಿಲೀಸ್​​; ಸಿನಿಮಾಟೋಗ್ರಫಿ ನೋಡಿ ಅಭಿಮಾನಿಗಳು ಥ್ರಿಲ್​​

  ಹೈದರಾಬಾದ್​​: ಟಾಲಿವುಡ್ ಹೀರೋ ಮಂಚು ವಿಷ್ಣು ಅಭಿನಯದ ಬಹು ತಾರಾಗಣವಿರುವ ಬಿಗ್​​ ಬಜೆಟ್​​ ಸಿನಿಮಾ ಕಣ್ಣಪ್ಪ. ಈ ಸಿನಿಮಾದ ಪ್ರಮುಖ ತಾರಾಗಣದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್​​, ಮೋಹನ್ ಲಾಲ್​, ನಯನತಾರಾ, ಶಿವರಾಜ್ ಕುಮಾರ್, ಶರತ್ ಕುಮಾರ್, ಮಧುಬಾಲಾ, ಬ್ರಹ್ಮಾನಂದಂ ಅಭಿನಯಿಸಿದ್ದಾರೆ. ಇತ್ತೀಚೆಗೆ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಚಿತ್ರದ ಟೀಸರ್ ಪ್ರದರ್ಶನಗೊಂಡಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡ ಶುಕ್ರವಾರ (ಜೂನ್​​ 14) ಹೈದರಾಬಾದ್​ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.

  ಇದನ್ನು ಓದಿ: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡ ಸ್ಪೈಮಾಸ್ಟರ್ ಅಜಿತ್​ ದೋವಲ್​ ಹಿನ್ನೆಲೆ ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

  ಓಂ ನಮಃ ಶಿವಾಯ ಎಂದು ಶುರುವಾದ ಟೀಸರ್ ಕುತೂಹಲದಿಂದ ಸಾಗಿದೆ. ಆ್ಯಕ್ಷನ್ ಭಾಗದ ಮೇಲೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಅದ್ಧೂರಿ ಸಾಹಸ ದೃಶ್ಯಗಳೊಂದಿಗೆ ಟೀಸರ್ ಗ್ರ್ಯಾಂಡ್ ಆಗಿದೆ. ಅಕ್ಷಯ್ ಕುಮಾರ್ ಭಗವಾನ್ ಶಿವನ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ, ಟೀಸರ್​ನಲ್ಲಿ ಪ್ರಭಾಸ್ ಅವರನ್ನು ಹೆಚ್ಚು ನೋಡಲಾಗುವುದಿಲ್ಲ. ಕೊನೆಯಲ್ಲಿ 1 ಸೆಕೆಂಡ್ ಪ್ರಭಾಸ್ ಅವರ ಶಾಟ್ ಟೀಸರ್​​ನ ಹೈಲೈಟ್ ಆಗಿದೆ. ಆದರೆ ಚಿತ್ರದಲ್ಲಿ ಮೋಹನ್ ಬಾಬು ಪಾತ್ರವೇನು? ಉತ್ತರ ತಿಳಿಯಲು ಇನ್ನೂ ಕೆಲವು ದಿನ ಕಾಯಲೇಬೇಕು.

  ಮಹಾಭಾರತ ಧಾರಾವಾಹಿಯನ್ನು ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸಿನಿಮಾ ಕಣ್ಣಪ್ಪದ ಟೀಸರ್​​ ಒಂದು ನಿಮಿಷ 39 ಸೆಕೆಂಡುಗಳಿದ್ದು, ಈ ವೀಡಿಯೊದಲ್ಲಿ ಸಿನಿಮಾಟೋಗ್ರಫಿ ಎಷ್ಟು ಸ್ಟ್ರಾಂಗ್​ ಇದೆ ಎಂಬುದು ತಿಳಿಯುತ್ತದೆ. ಟೀಸರ್​​ ನೋಡಿದ ನಂತರ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. (ಏಜೆನ್ಸೀಸ್​​)

  ಮೋದಿ ಸರ್ಕಾರ ನೀಟ್ ಹಗರಣವನ್ನು ಮುಚ್ಚಿಹಾಕಲು ಆರಂಭಿಸಿದೆ ಎಂದಿದ್ದೇಕೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

  See also  ಮಧುರ ಕಾವ್ಯ ಸಿನಿಮಾ 21ಕ್ಕೆ ತೆರೆಗೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts