More

    ಸಂಶೋಧನಾ ಪ್ರಬಂಧದಲ್ಲಿ ಇರಲಿ ಸ್ಪಷ್ಟತೆ

    ದಾವಣಗೆರೆ : ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸುವಾಗ ಅವಸರ ಮಾಡದೆ ಸ್ಪಷ್ಟತೆ ಹಾಗೂ ನಿಖರತೆಯನ್ನು ಕಾಯ್ದುಕೊಳ್ಳಬೇಕು ಎಂದು ನಗರದ ಜೈನ್ ತಾಂತ್ರಿಕ ಕಾಲೇಜು ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್ ಹೇಳಿದರು.
     ಸಂಶೋಧನಾ ಪ್ರಬಂಧ ಬರವಣಿಗೆ ಹಾಗೂ ಪ್ರಕಟಣೆಯ ಕುರಿತು ನಗರದ ಯುಬಿಡಿಟಿ ಇಂಜಿನಿಯರಿಂಗ್
    ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     ನೀವು ಸಂಶೋಧನೆ ಮಾಡಲಿರುವ ವಿಷಯದ ಬಗ್ಗೆ ವಸ್ತುನಿಷ್ಠತೆ ಇರಬೇಕಾಗುತ್ತದೆ. ಸ್ಪಷ್ಟತೆಯೊಂದಿಗೆ ಮುಂದುವರಿಯಬೇಕು. ಅನುಸರಿಸುವ ವಿಧಾನವೂ ಅಷ್ಟೇ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
     ನಿಮ್ಮ ಪ್ರಬಂಧಗಳು ಉತ್ತಮವಾದ ಜರ್ನಲ್‌ಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಬೇಕು. ಇತರ ಸಂಶೋಧಕರೂ ಗಮನಿಸುವುದರಿಂದ ಅವರಿಗೆ ಮಾದರಿಯಾಗುವ ರೀತಿಯಲ್ಲಿ ನಮ್ಮ ಪ್ರಯತ್ನ ಇರಬೇಕು ಎಂದು ಹೇಳಿದರು.
     ಗುಣಮಟ್ಟದ ಸಂಶೋಧನೆ ಆಗಬೇಕಾದರೆ ಅದರ ತಳಹದಿ ಗಟ್ಟಿಯಾಗಿರಬೇಕು. ಅಂಕಿ ಅಂಶಗಳಲ್ಲಿ ನಿಖರತೆ ಅಗತ್ಯ. ಬೇಗನೆ ಪೂರೈಸಬೇಕು ಎpನ್ನುವ ಧಾವಂತ ಬೇಡ. ತಾಳ್ಮೆ ವಹಿಸಬೇಕು. ಸಮಯ ತೆಗೆದುಕೊಂಡು ಕೆಲಸ ಮಾಡಿದರೆ ಮುಂದೆ ಅದು ನಿಮಗೇ ಹೆಸರು ತಂದುಕೊಡುತ್ತದೆ. ನೈತಿಕತೆ ಪಾಲಿಸುವುದನ್ನು ಮರೆಯಬಾರದು ಎಂದು ತಿಳಿಸಿದರು. ತಾವು ಸಂಶೋಧನೆ ಮಾಡುವಾಗಿನ ಅನುಭವಗಳನ್ನು ವಿವರಿಸಿದರು.
     ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು, ಸಂಶೋಧಕರಿಗೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನದ ಆನ್‌ಲೈನ್ ಪುಸ್ತಕ, ಜರ್ನಲ್‌ಗಳು ಇರುವ ಕೇಂದ್ರ (ಕನ್‌ಸೋಟಿಯಂ)ವನ್ನು ಯುಬಿಡಿಟಿ ಕಾಲೇಜಿನಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
     ರಾಜ್ಯಾದ್ಯಂತ ಈ ರೀತಿಯ ಸೌಲಭ್ಯ ಕಲ್ಪಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವರ್ಷಕ್ಕೆ 30 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಲೈಬ್ರರಿಯನ್‌ಗಳಿಗಾಗಿ ರಾಜ್ಯಮಟ್ಟದ ಕಾರ್ಯಾಗಾರ ಮಾಡುವ ಉದ್ದೇಶವಿದೆ ಎಂದರು.
     ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (ಐಇಇಇ) ಸಂಸ್ಥೆಯ ಬೆಂಗಳೂರಿನ ಹಿರಿಯ ಕ್ಲಯಂಟ್ ಸರ್ವೀಸ್ ಮ್ಯಾನೇಜರ್ ಡಾ. ಧನುಕುಮಾರ್ ಪಟ್ಟಣಶೆಟ್ಟಿ, ಯುಬಿಡಿಟಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ.ಎಸ್. ಮಂಜಪ್ಪ, ಸಂಯೋಜಕ ಡಾ.ಎಚ್.ಸಿ. ಮೌನೇಶ್ವರಾಚಾರ್ ಇದ್ದರು.

    See also  ತಂದೆ ಹಂತಕನಿಗೆ 6 ವರ್ಷ ಸಜೆ -ಕುಡಿತಕ್ಕೆ ಹಣ ಕೊಡದಿದ್ದಕ್ಕೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದ ಪಾಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts