ಹೆರಾನ್ಸ್​ ಕ್ರಿಕೆಟ್​ ಕ್ಲಬ್​ ಚಾಂಪಿಯನ್​; 24 ವರ್ಷಗಳ ಬಳಿಕ ಕೆಎಸ್​ಸಿಎ 2ನೇ ಡಿವಿಷನ್​ ಲೀಗ್​ ಪ್ರಶಸ್ತಿ ಗೆಲುವು

web herans
Published on

ಬೆಂಗಳೂರು: ಅರ್ಜುನ್​ ಹೊಯ್ಸಳ ಸಾರಥ್ಯದ ಹೆರಾನ್ಸ್​ ಕ್ರಿಕೆಟ್​ ಕ್ಲಬ್​ ತಂಡ ಕೆಎಸ್​ಸಿಎ ಗ್ರೂಪ್​-1 ಎರಡನೇ ಡಿವಿಷನ್​ ಲೀಗ್​ ಕ್ರಿಕೆಟ್​ ಟೂರ್ನಿಯಲ್ಲಿ 2023&24ರ ಸಾಲಿನ ಶ್ರೀ ಎಂಎಟಿ ಆಚಾರ್ಯ ಶೀಲ್ಡ್​ ಪ್ರಶಸ್ತಿ ಗೆದ್ದುಕೊಂಡಿದೆ.

ಆಡಿದ 11 ಪಂದ್ಯಗಳಲ್ಲಿ 4 ಜಯ, 7 ಡ್ರಾದೊಂದಿಗೆ 37 ಅಂಕ ಕಲೆಹಾಕುವ ಮೂಲಕ ಹೆರಾನ್ಸ್​ ಕ್ರಿಕೆಟ್​ ಕ್ಲಬ್​ ತಂಡ ಟೂರ್ನಿಯಲ್ಲಿ 24 ವರ್ಷಗಳ ಬಳಿಕ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಜವಾನ್ಸ್​ ಕ್ರಿಕೆಟ್​ ಕ್ಲಬ್​ ತಂಡ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತು. ಚಿತ್ರದಲ್ಲಿ ಹೆರಾನ್ಸ್​ ಕ್ರಿಕೆಟ್​ ಕ್ಲಬ್​ ಅಧ್ಯಕ್ಷ ರುನಂದನ್​, ಕಾರ್ಯದರ್ಶಿ ರಾಧಾಕೃಷ್ಣ ಮತ್ತು ಮ್ಯಾನೇಜರ್​ ಕೆ. ಮುರಳೀಧರ ಅವರೊಂದಿಗೆ ಚಾಂಪಿಯನ್​ ತಂಡದ ಆಟಗಾರರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net