VIDEO: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಜಾಜಿಸುತ್ತಿವೆ ಬಿಜೆಪಿ ಧ್ವಜಗಳು! ಕೈ ಕಾರ್ಯಕರ್ತರು ಗಪ್​ಚುಪ್​

BJP flag
Published on

ಲಖನೌ (ಉತ್ತರ ಪ್ರದೇಶ): ಕಾಂಗ್ರೆಸ್​ ಕಚೇರಿಯಲ್ಲಿ ಬಿಜೆಪಿ ಧ್ವಜಗಳ ಕಾಣಿಸಿಕೊಂಡು ಕಾಂಗ್ರೆಸ್​ ಕಾರ್ಯಕರ್ತರು ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ಹಾಗೂ ಅಚ್ಚರಿಯಿಂದ ನೋಡುತ್ತಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆದಿದೆ. ಇಲ್ಲಿರುವ ಕಾಂಗ್ರೆಸ್​ ಪ್ರಧಾನ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಇದರ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ. ಈ ವೈರಲ್​ ವಿಡಿಯೋದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಧ್ವಜಗಳು ಇರುವುದನ್ನು ನಾವು ನೋಡಬಹುದಾಗಿದೆ.

ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ಕಚೇರಿಯನ್ನು ಒಳಹೊಕ್ಕಾಗಿ ಒಂದು ಕಡೆಗಳಲ್ಲಿ ಅನೇಕ ಬಿಜೆಪಿ ಧ್ವಜಗಳು ಇರುವುದನ್ನು ನೋಡಿ ಕಂಗಾಲಾಗಿದ್ದಾರೆ. ಇದನ್ನು ಅವರು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

ಇತ್ತ, ಕಾಂಗ್ರೆಸ್ ಕಚೇರಿ ಪದಾಧಿಕಾರಿಗಳು ಈ ಬಗ್ಗೆ ಯಾವುದೇ ಸೂಕ್ತವಾದ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಧ್ವಜಗಳು ಕಚೇರಿಯ ಒಳಗೆ ಹೇಗೆ ಬಂತು ಎಂದು ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್​ ಕಾರ್ಯಕರ್ತರ ಮೌನವೇ ಉತ್ತರವಾಗಿದೆ. ಆದರೆ, ಯುವ ಮುಖಂಡರೊಬ್ಬರು ಈ ಕುರಿತು ಮಾತನಾಡಿ, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಇದು ಕೆಲ ಅಪರಿಚಿತರ ಕಿಡಿಗೇಡಿತನ ಇರಬೇಕೆಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net