VIDEO: ಇಂದು 'ವಿಶ್ವನಾಥೋತ್ಸವ'! ಮೂರು ಟನ್​ ಮಟನ್​, ಐದು ಟನ್​ ಚಿಕನ್​, ಲಕ್ಷ ಲಕ್ಷ ಮೊಟ್ಟೆ....

vishwanath
Published on

ಬೆಂಗಳೂರು: ಇವತ್ತು ಯಲಹಂಕದ ಬಿಜೆಪಿ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಅವರ 60ನೇ ಜನ್ಮದಿನ. ಇವರ ಹುಟ್ಟುಹಬ್ಬ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ, ಅದ್ಧೂರಿ ಸಮಾರಂಭ. ಯಲಹಂಕದ ರೆಸಾರ್ಟ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಶ್ವನಾಥ್​ ಅವರು ಬಾಡೂಟ ರೆಡಿ ಮಾಡಿಸಿದ್ದಾರೆ. ಇದರ ಪ್ರಮಾಣ ಕೇಳಿದರೆ ಶಾಕ್​ ಆಗುವುದು ಗ್ಯಾರೆಂಟಿ!

ಮೂರು ಟನ್ ಮಟನ್, ಐದು ಟನ್ ಚಿಕನ್ ತಯಾರು ಮಾಡಲಾಗಿದ್ದು, 50 ಸಾವಿರ ಜನರಿಗೆ ಬಾಡೂಟ ಮಾಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ವಿ. ಸೋಮಣ್ಣ, ಕೆ. ಗೋಪಾಲಯ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಿದ್ದು, ವಿಶ್ವನಾಥ್ ಅವರಿಗೆ ಶುಭ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್​ ಅವರು, ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪನವರು ವಿಜಯೇಂದ್ರಗೆ ಬಿಟ್ಟು ಕೊಟ್ಟರೆ ನಮಗೆ ತೊಂದರೆ ಇಲ್ಲ. ಆದರೆ ಅವರು ರಾಜಕೀಯ ನಿವೃತ್ತಿ ಘೋಷಿಸಬಾರದು. ಅವರ ಆಶೀರ್ವಾದ ನಮ್ಮ ಮೇಲೆ ಇರಬೇಕು. ಯಡಿಯೂರಪ್ಪನವರಿಗಾಗಿ ನಾವು ರಾಜ್ಯದ ಯಾವುದೇ ಕ್ಷೇತ್ರವನ್ನು ಬಿಟ್ಟು ಕೊಡಲು ತಯಾರು ಇದ್ದು, ಪ್ರಾಣ ಒತ್ತೆ ಇಟ್ಟಾದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಯಡಿಯೂರಪ್ಪನವರು ಶ್ರೀಕೃಷ್ಣನ ಹಾಗೆ, ‌ ಭೀಷ್ಮನ ರೀತಿ ನಮ್ಮ ಜತೆ ಇರಬೇಕು. ರಾಜಕೀಯ ನಿವೃತ್ತಿ ಘೋಷಣೆ ವಾಪಸ್​ ಪಡೆದುಕೊಂಡರೆ ಅದೇ ನಮಗೆ ಹುಟ್ಟುಹಬ್ಬಕ್ಕೆ ಅವರು ನೀಡುವ ಗಿಫ್ಟ್​ ಎಂದರು.

ವಿಶ್ವನಾಥ್ ಶೀಘ್ರ ಸಚಿವ ಸಂಪುಟ ಸೇರಬೇಕು, ಈ ಬಗ್ಗೆ ಸಿಎಂಗೆ ನಾನು ಒತ್ತಾಯ ಮಾಡುತ್ತೇನೆ. ಅವರಿಗೆ ಒಳ್ಳೆಯದಾಗಲಿ ಎಂದು ಯಡಿಯೂರಪ್ಪ ಹೇಳಿದರು.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net