

ಬೆಂಗಳೂರು: ಚುನಾವಣೆಗೆ ಮುನ್ನವೇ ಗೆದ್ದು ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂಬಂತೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.
ಯಲಹಂಕ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಜನ್ಮ ದಿನದ ಶುಭ ಹಾರೈಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಅವರ ಆಸೆ ಫಲಿಸುವುದಿಲ್ಲ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಜನರಿಗೆ ತಿಳಿಸಲು ಸಮಾವೇಶಗಳನ್ನು ಆಯೋಜಿಸುತ್ತಿದ್ದು, ಸಂಘಟನೆ ಬಲಪಡಿಸಲು ಪ್ರವಾಸ ಕೈಗೊಳ್ಳುತ್ತೇವೆ ಎಂದು ಬಿಎಸ್ ವೈ ಹೇಳಿದರು.
ಅದೇ ಇನ್ನೊಂದೆಡೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ ಸಿಎಂ ಖುರ್ಚಿಗಾಗಿ ಹೇಗೆ ಗುದ್ದಾಟ ನಡೆದಿದೆ ಎಂಬುದನ್ನು ಉದಾಹರಿಸುವಂಥ ವಿಡಿಯೋ ಒಂದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರು ವ್ಯಕ್ತಿಗಳ ಚಿತ್ರಣ ಇದರಲ್ಲಿ ಇದ್ದು, ಅದಕ್ಕೆ ಅವರು ಸಿದ್ದು ಹಾಗೂ ಡಿಕೆಶಿ ಎಂದು ಹೆಸರು ಇರಿಸಿದ್ದಾರೆ. ನಡುವೆ ಒಂದು ಖುರ್ಚಿ ಇದ್ದು ಅದರ ಸುತ್ತಲೂ ಈ ಇಬ್ಬರು ವ್ಯಕ್ತಿಗಳು ಫೈಟಿಂಗ್ ಮಾಡುವಂತೆ ಸನ್ನಿವೇಶ ಸೃಷ್ಟಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬರುತ್ತಿವೆ.
ಇಲ್ಲಿದೆ ನೋಡಿ ಟ್ರೋಲ್ ಆಗುತ್ತಿರುವ ವಿಡಿಯೋ: