More

    ಬಿಜೆಪಿ ನಾಯಕನ ಫಾರ್ಮ್​ಹೌಸ್ ಈಗ ವೇಶ್ಯಾಗೃಹ​! 73 ಮಂದಿ ಅರೆಸ್ಟ್​- ಆರು ಮಂದಿ ಬಾಲಕಿಯರ ರಕ್ಷಣೆ

    ಪಶ್ಚಿಮಗರೋ ಹಿಲ್ಸ್ (ಮೇಘಾಲಯ): ಪಶ್ಚಿಮಗರೋ ಹಿಲ್ಸ್​ನಲ್ಲಿರುವ ಬಿಜೆಪಿ ಮುಖಂಡನ ಮಾಲೀಕತ್ವದ ಫಾರ್ಮ್​ಹೌಸ್​ ಮೇಲೆ ಪೊಲೀಸರು ದಾಳಿ ನಡೆಸಿದ್ದು ವೇಶ್ಯಾವಾಟಿಕೆ ನಡೆಸುತ್ತಿದ್ದ 73 ಮಂದಿಯನ್ನು ಬಂಧಿಸಿದ್ದಾರೆ. ಈ ವೇಶ್ಯಾಗೃಹದಲ್ಲಿದ್ದ ಇಬ್ಬರು ಯುವತಿಯರು ಹಾಗೂ ಆರು ಬಾಲಕಿಯರನ್ನು ರಕ್ಷಿಸಲಾಗಿದೆ.

    ಈ ಸಂಬಂಧ ಮೇಘಾಲಯದ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್ ಮರಕ್ ಅಲಿಯಾಸ್ ರಿಂಪು ವಿರುದ್ಧ ಅನೈತಿಕ ಕಳ್ಳಸಾಗಣೆ ಮತ್ತು ವೇಶ್ಯಾಗೃಹ ಪ್ರಕರಣ ದಾಖಲಾಗಿದೆ. ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಬಂದಿರುವ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾಗ ಆರು ಬಾಲಕಿಯರು, ಇಬ್ಬರು ಯುವತಿಯರು ಅಲ್ಲಿ ಇದ್ದುದು ಕಂಡುಬಂದಿತು. ಈ ಸಂಬಂಧ ಇಲ್ಲಿದ್ದ 73 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ್ ಸಿಂಗ್ ತಿಳಿಸಿದ್ದಾರೆ.

    ಈ ಎಲ್ಲಾ ಯುವತಿಯರು ಮತ್ತು ಬಾಲಕಿಯರನ್ನು ಕೂಡಿ ಹಾಕಲಾಗಿತ್ತು. ಮಕ್ಕಳನ್ನು ರಕ್ಷಣಾಧಿಕಾರಿ (ಡಿಸಿಪಿಒ) ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. 400ಕ್ಕೂ ಅಧಿಕ ಮದ್ಯದ ಬಾಟಲಿಗಳು, 500ಕ್ಕೂ ಅಧಿಕ ಬಳಕೆ ಆಗದೇ ಇದ್ದ ಕಾಂಡೋಮ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆ ಮಾಡಿದಾಗ ಈ ಫಾರ್ಮ್​ಹೌಸ್​ ಬಿಜೆಪಿ ಮುಖಂಡನಿಗೆ ಸೇರಿದ್ದು ಎನ್ನುವುದು ತಿಳಿದಿದೆ. ಇದು ಅವರ ಅರಿವಿಗೆ ಬಂದಿತ್ತೇ ಇಲ್ಲವೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಬೆಳಗಿನ ಜಾವ 2 ಗಂಟೆಯವರೆಗೆ ಪೊಲೀಸರ ದಾಳಿ ನಡೆಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಂಪು, ಇದರ ಬಗ್ಗೆ ನನಗೆ ಅರಿವು ಇಲ್ಲ. ನನ್ನ ಇಮೇಜ್‌ಗೆ ಹಾನಿ ಮಾಡುವ ಉದ್ದೇಶದಿಂದ ಮತ್ತು ರಾಜಕೀಯ ದ್ವೇಷದಿಂದ ಮುಖ್ಯಮಂತ್ರಿಗಳೇ ಈ ದಾಳಿ ಮಾಡಿಸಿದ್ದಾರೆ ಎಂದಿದ್ದಾರೆ. ಮೆಘಾಲಯದಲ್ಲಿ ಬಿಜೆಪಿ ಪಾಲುದಾರರಾಗಿರುವ ರಾಜ್ಯದಲ್ಲಿ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಮ್‌ಡಿಎ) ಸರ್ಕಾರ ಇದೆ. ಈ ಭಾಗದಲ್ಲಿ ಬಿಜೆಪಿಯಿಂದ ತಾವು ಸೋಲುವ ಭಯ ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಮತ್ರಿಗಳೇ ಈ ಕೆಲಸ ಮಾಡಿಸಿದ್ದಾರೆ ಎಂದಿದ್ದಾರೆ. ಅಂದಹಾಗೆ ರಿಂಪು ವಿರುದ್ಧ 25ಕ್ಕೂ ಅಧಿಕ ಕ್ರಿಮಿನಲ್​ ಕೇಸ್​ಗಳಿವೆ. (ಏಜೆನ್ಸೀಸ್​)

    ಗರ್ಭಪಾತದ ಕುರಿತು ಸುಪ್ರೀಂ ಮಹತ್ವದ ತೀರ್ಪು: ಕಾಯ್ದೆ ವ್ಯಾಪ್ತಿ ವಿಸ್ತರಣೆ- ಅವಿವಾಹಿತೆಗೆ ಅಸ್ತು

    ಅಮ್ಮ, ಮಗಳ ಜತೆಗೆ ಫ್ಲ್ಯಾಟ್​ನಲ್ಲಿ ಮಹಿಳಾ ಕಾನ್​ಸ್ಟೆಬಲ್​ ​ ನಿಗೂಢ ಸಾವು- ಕೊಲೆ ಶಂಕೆ

    ನಟಿಯರಿಗಿಂತ ನಾನೇನೂ ಕಮ್ಮಿ ಇಲ್ಲ ಎಂದು ಸಂಪೂರ್ಣ ನಗ್ನರಾಗಿ ರಣವೀರ್ ಫೋಟೋಶೂಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts