More

    ಮಾರ್ಚ್​ನಲ್ಲಿ ಚುನಾವಣೆ? 6 ವಾರಗಳಲ್ಲಿ ವೇಳಾಪಟ್ಟಿ ಹೊರಡಿಸಲು ಚುನಾವಣಾ ಆಯೋಗಕ್ಕೆ ಕೋರ್ಟ್​ ಆದೇಶ

    ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಗೆ) ಚುನಾವಣೆ ನಡೆಸುವಂತೆ ಹೈಕೋರ್ಟ್​ ಇಂದು ನಿರ್ದೇಶಿಸಿದೆ.

    198 ವಾರ್ಡ್‍ಗಳಿರುವ ಬಿಬಿಎಂಪಿಯಲ್ಲಿ 243 ವಾರ್ಡ್‍ಗಳನ್ನು ಹೆಚ್ಚಿಸಲು ಮಸೂದೆ ಮಂಡಿಸಲಾಗಿದೆ. ಇದಕ್ಕೆ ಕಾಲಾವಕಾಶ ಬೇಕು. ಅಲ್ಲದೆ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚನೆ ಮಾಡಬೇಕಾಗಿದೆ ಎಂದು ಸರ್ಕಾರ ನ್ಯಾಯಾಲಯದ ಮುಂದೆ ಕಾಲಾವಕಾಶ ಕೋರಿತ್ತು. ಆದರೆ 198 ವಾರ್ಡ್​ಗಳಿಗೇ ಚುನಾವಣೆ ನಡೆಸುವಂತೆ ಹೈಕೋರ್ಟ್​ ಸ್ಟ್ರಿಕ್ಟ್​ ಆಗಿ ಹೇಳಿದೆ.

    ಒಂದು ತಿಂಗಳಿನೊಳಗೆ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು, ಆರು ವಾರಗಳಲ್ಲಿ ಚುನಾವಣಾ ವೇಳಾಪಟ್ಟಿ ಹೊರಡಿಸಬೇಕು ಎಂದು ಕೋರ್ಟ್​  ಚುನಾವಣಾ ಆಯೋಗಕ್ಕೆ ಹೇಳಿದೆ.

    ಸರ್ಕಾರ ಉದ್ದೇಶಪೂರ್ವಕವಾಗಿ ಚುನಾವಣೆ ಮುಂದೂಡುವ ಪ್ರಯತ್ನ ಮಾಡುತ್ತಿದೆ. ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಬೇಕೆಂದು ಎಂದು ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು.

    ಇದಕ್ಕೆ ಚುನಾವಣಾ ಆಯೋಗವೂ ಸಮ್ಮತಿ ಸೂಚಿಸಿತ್ತು. ಪ್ರಸ್ತುತ ಇರುವ 198 ವಾರ್ಡ್​ಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿಕೊಂಡಿದೆ ಎಂದು ಹೇಳಿತ್ತು.

    ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಚುನಾವಣೆ ನಡೆಸುವಂತೆ ನಿರ್ದೇಶಿಸಿದ್ದಾರೆ. ಆದ್ದರಿಂದ ಬರುವ ಮಾರ್ಚ್​ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

    ಕಿಟಕಿಯಲ್ಲಿ ವಧು, ಅಂಗಳದಲ್ಲಿ ವರ- ಮಧ್ಯೆ ಹಗ್ಗ! ಇದಕ್ಕೆ ಕಾರಣ ತುಂಬಾ ಇಂಟರೆಸ್ಟಿಂಗ್​

    ದಂಡ ಕಟ್ವಿಲ್ವಾ? ಪಾರ್ಕಿಂಗ್​ ಜಾಗದಿಂದ್ಲೇ ನಿಮ್ ಗಾಡಿ ‘ಮಾಯ’ ಆಗ್ಬೋದು ಎಚ್ಚರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts