More

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

    ಕಠ್ಮಂಡು: ಇಡೀ ಜಗತ್ತಿಗೆ ಜಗತ್ತೇ ಕರೊನಾ ವೈರಸ್​ ಆತಂಕದಲ್ಲಿ ಇರುವಾಗ ಈ ತಾಯಿಗೆ ಮಾತ್ರ ತನ್ನ ಮಗನ ದೇಹದೊಳಗೆ ಹೊಕ್ಕ ವಿಚಿತ್ರ ಕಾಯಿಲೆಯದ್ದೇ ಚಿಂತೆ. ಅದೇನೆಂದರೆ ದಿನದಿಂದ ದಿನಕ್ಕೆ ಈ 15 ವರ್ಷದ ಬಾಲಕನ ದೇಹ ಕಲ್ಲಾಗಿ ಮಾರ್ಪಡುತ್ತಲೇ ಸಾಗಿದೆ!

    ನೇಪಾಳದ ನಾರ್​ ಕುಮಾರಿ ಮತ್ತು ನಂದಾ ಎಂಬುವವರ ಮಗ ರಮೇಶ್​ ದಾರ್ಜಿ ಹುಟ್ಟಿದ ಕೆಲ ದಿನಗಳಿಂದಲೇ ಇಂಥದ್ದೊಂದು ಸಮಸ್ಯೆ ಎದುರಿಸುತ್ತಿದ್ದಾನೆ. ಹುಟ್ಟಿದಾಗ ಸಾಮಾನ್ಯ ಮಗುವಿನಂತೆ ಇದ್ದ ರಮೇಶ್​ 15 ದಿನ ಇರುವಾಗಲೇ ದೇಹ ಕಲ್ಲಿನ ರೂಪ ತಳೆಯಲು ಶುರುವಾಗಿದೆ. ದಿನಗಳೆದಂತೆ ಅದು ಹೆಚ್ಚುತ್ತಲೇ ಹೋಗಿ ಇಡೀ ದೇಹವನ್ನು ವ್ಯಾಪಿಸಿದೆ.

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!ಇದೀಗ ಈ ಬಾಲಕನಿಗೆ 15 ವರ್ಷ. ಈಗ ಬಹುತೇಕ ಅಂಗಾಂಗಗಳು ಕಲ್ಲಿನಂತೆ ಆಗಿಬಿಟ್ಟಿದ್ದು, ಪಾಲಕರು ಕಂಗಾಲಾಗಿ ಹೋಗಿದ್ದಾರೆ.

    15 ದಿನಗಳಿಂದ ದೇಹದಲ್ಲಿ ಒಂದು ರೀತಿಯ ಪರಿವರ್ತನೆ ಶುರುವಾಯಿತು. ಚರ್ಮವು ಕಿತ್ತುಬರತೊಡಗಿತು. ಶರೀರ ಕಪ್ಪಾಗಿ ರೂಪುತಳೆಯಿತು. ನಂತರ ವರ್ಷ ಕಳೆದಂತೆ ಇದು ಹೆಚ್ಚುತ್ತಾ ಹೋಯಿತು ಎನ್ನುತ್ತಾರೆ ಪಾಲಕರು.

    ವೈದ್ಯರು ಇದೊಂದು ಚರ್ಮದ ರೋಗ ಎಂದು ಹೇಳಿದ್ದು, ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಹರ್ಲೆಕ್ವಿನ್ ಇಚ್​ಥಿಯೋಸಿಸ್​ ಎಂದಿದ್ದಾರೆ. ಇದೊಂದು ರೀತಿಯ ಶಿಲೀಂಧ್ರಗಳ ಸೋಂಕು ಎಂದಿದ್ದಾರೆ ವೈದ್ಯರು. ಇದೀಗ ಯಾರೂ ಹತ್ತಿರ ಸೇರಿಸಿಕೊಳ್ಳದ ಕಾರಣ ಖಿನ್ನತೆಗೆ ಜಾರಿದ್ದಾನೆ ಬಾಲಕ.

    ಈ ಕಾಯಿಲೆಗೆ ಚಿಕಿತ್ಸೆಯೇ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ತಾಯಿ ನಾರ್​ಕುಮಾರಿ ಹೇಳುತ್ತಾರೆ. ಆದರೂ ವೈದ್ಯರು ಸಾಧ್ಯವಾದಷ್ಟು ಮಟ್ಟಿಗೆ ಚಿಕಿತ್ಸೆ ನೀಡಿದ್ದು, ಚರ್ಮವನ್ನು ತಕ್ಕ ಮಟ್ಟಿಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ದಂಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರು ಚಿಕಿತ್ಸೆ ನಡೆಸುವುದು ಕಷ್ಟ ಎಂದಿದ್ದರೂ ಪ್ರಯತ್ನ ಮಾತ್ರ ಈಕೆ ಬಿಟ್ಟಿಲ್ಲ. ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗಿದ್ದರಿಂದ ಅನೇಕ ಮಂದಿ ನೆರವಿನ ಹಸ್ತ ಚಾಚಿದ್ದಾರೆ. ಇದರಿಂದ ವೈದ್ಯರು ತಮ್ಮ ಪ್ರಯತ್ನ ಬಿಡದೇ ಚಿಕಿತ್ಸೆ ನೀಡುತ್ತಿದ್ದಾರೆ.

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!ಈ ಮೊದಲು ನಡೆದಾಡುತ್ತಿದ್ದ ಬಾಲಕ, ಈಗ ಕಲ್ಲಿನಂಥ ದೇಹದಿಂದಾಗಿ ನಾಲ್ಕೈದು ವರ್ಷಗಳಿಂದ ನಡೆಯಲೂ ಆಗುತ್ತಿಲ್ಲ. ಉಸಿರೊಂದು ಹಿಡಿದುಕೊಂಡಿರುವುದು ಬಿಟ್ಟರೆ, ಎಲ್ಲವನ್ನೂ ಈತನ ತಾಯಿಯೇ ಮಾಡಬೇಕು.

    ಮಾತನಾಡಲೂ ಬರುತ್ತಿಲ್ಲ ಬಾಲಕನಿಗೆ. ವಿಶ್ವಾದ್ಯಂತ ಸುಮಾರು 50 ಇಂಥ ಪ್ರಕರಣಗಳು ಇರಬಹುದು ಎನ್ನುತ್ತಾರೆ ವೈದ್ಯರು.
    ಸದ್ಯ ವೈದ್ಯರು ತಮ್ಮ ಕೈಲಾದಷ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಕನ ದೇಹ ಸಾಮಾನ್ಯ ರೂಪ ಪಡೆಯುವುದು ಸಾಧ್ಯವಿಲ್ಲವಾದರೂ ಚರ್ಮದಲ್ಲಿನ ಶಿಲೀಂಧ್ರವನ್ನು ಎಷ್ಟು ಸಾಧ್ಯವೋ ಅಷ್ಟು ತೆಗೆಯುವ ಪ್ರಯತ್ನ ವರ್ಷಗಳಿಂದ ನಡೆಯುತ್ತಲೇ ಇದೆ.

    ಮದುವೆ ದಿಬ್ಬಣದ ಟ್ರ್ಯಾಕ್ಟರ್​ ಪಲ್ಟಿ: ಮದುಮಗ, ಅಪ್ಪ-ಅಮ್ಮ ಸೇರಿ 6 ಸಾವು

    ಎಚ್ಚರ… ಎಚ್ಚರ… ಪ್ರಾಣ ತೆಗೆವ ನಕಲಿ ಕರೊನಾ ಲಸಿಕೆ- 194 ದೇಶಗಳಿಗೆ ಇಂಟರ್​ಪೋಲ್​ ನೋಟಿಸ್​

    ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts