More

    ಡೆಂಗ್ಯೂ ಕಾಯಿಲೆಗೆ ಮುಂಜಾಗ್ರತೆ ವಹಿಸಿ

    ಹೊಸಪೇಟೆ: ಡೆಂಗ್ಯು ಜ್ವರವನ್ನು ಜನರು ನಿರ್ಲಕ್ಷಿಸದೆ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿ.ಪಂ. ಸಿಇಒ ಸದಾಶಿವ ಬಿ.ಪ್ರಭು ಹೇಳಿದರು.

    ರಾಷ್ಟಿçÃಯ ಡೆಂಗ್ಯು ದಿನಾಚರಣೆಯ ಅಂಗವಾಗಿ ಡಿಎಚ್‌ಒ ಕಚೇರಿ ಆವರಣದಲ್ಲಿ ಗುರುವಾರ ಡೆಂಗ್ಯು ನಿಯಂತ್ರಿಸೋಣ ಜಾಗೃತಿ ಜಾಥಾ ಕಾರ್ಯಾಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಡೆಂಗ್ಯು ಜ್ವರದ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಮಾರಣಾಂತಿಕವಾಗಬಹುದು. ಮುಂಗಾರು ಪೂರ್ವ, ಮುಂಗಾರು ಮತ್ತು ಮುಂಗಾರಿನ ನಂತರದ ಸಮಯದಲ್ಲಿ ಡೆಂಗ್ಯು ಸೊಳ್ಳೆಗಳ ಸಂತತಿಯು ತೀವ್ರ ಪ್ರಮಾಣದಲ್ಲಿ ಇದ್ದು ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದರು.

    ಡೆಂಗ್ಯೂ ಸೊಳ್ಳೆ ಯಾವಾಗ ಕಚ್ಚುತ್ತದೆ, ಡೆಂಗ್ಯೂ ಕಾಯಿಲೆಯ ಲಕ್ಷಣಗಳೇನು, ಹೇಗೆ ಮುಂಜಾಗ್ರತೆ ವಹಿಸಬೇಕು ಎನ್ನುವಂತಹ ವಿವಿಧ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಾಡಲಾಗುವುದು. ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸುವುದಕ್ಕಾಗಿ ನಗರದ ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಗುವುದು. ಸೋಷಿಯಲ್ ಮಿಡಿಯಾವನ್ನು ಬಳಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

    ಡಿಎಚ್‌ಒ ಡಾ.ಶಂಕರ ನಾಯ್ಕ ಮಾತನಾಡಿ, ರೋಗಗಳು ಬಂದಮೇಲೆ ಚಿಕಿತ್ಸೆ ನೀಡುವ ಬದಲಿಗೆ ಬರುವ ಮುಂಚೆ ಅದರ ಮುಂಜಾಗೃತಿ ವಹಿಸುವುದು ಸೂಕ್ತ. ಜನರು ಮನೆಯಲ್ಲಿ ಶೇಖರಿಸಿದ ನೀರನ್ನು ಆಗಾಗ ಬದಲಾಯಿಸುತ್ತಿರಬೇಕು. ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕು. ಡೆಂಗ್ಯು ತಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts