ಬಾಲಕನಿಗೆ ಸಲಿಂಗ ಕಿರುಕುಳ ಆರೋಪ

Harassment
Published on

ಕಾಸರಗೋಡು: ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಟ್ಯೂಷನ್ ಸಂಸ್ಥೆ ಮಾಲೀಕನನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಅದಿಯಾಂಬೂರ್ ನಿವಾಸಿ ಬಾಬುರಾಜ್ ಬಂಧಿತ.

ಟ್ಯೂಷನ್ ಕೇಂದ್ರಕ್ಕೆ ಆಗಮಿಸುವ ಬಾಲಕನಿಗೆ ಏ. 24ರಂದು ಸಲಿಂಗ ಕಿರುಕುಳ ನೀಡಿರುವ ದೂರಿನ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಿರಸ್ಕೃತವಾದ ಹಿನ್ನೆಲೆಯಲ್ಲಿ ಠಾಣೆಗೆ ಶರಣಾಗಿದ್ದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net