More

    ದಂಡ ಕಟ್ವಿಲ್ವಾ? ಪಾರ್ಕಿಂಗ್​ ಜಾಗದಿಂದ್ಲೇ ನಿಮ್ ಗಾಡಿ ‘ಮಾಯ’ ಆಗ್ಬೋದು ಎಚ್ಚರ!

    ಬೆಂಗಳೂರು: ಪೊಲೀಸರು ಇಲ್ಲ ಎಂದು ಸುಂಯ್​ ಎಂದು ಗಾಡಿ ಓಡಿಸಿಕೊಂಡು ಟ್ರಾಫಿಕ್​ ರೂಲ್ಸ್​ ಉಲ್ಲಂಘನೆ ಮಾಡಿದ್ದೀರಾ? ಒನ್​ವೇನಲ್ಲಿ ನುಗ್ಗಿದ್ದೀರಾ? ನೋ ಪಾರ್ಕಿಂಗ್​ನಲ್ಲಿ ಪಾರ್ಕ್​ ಮಾಡಿದ್ದೀರಾ? ಹಾಗಿದ್ದರೆ ಕೂಡಲೇ ಎಷ್ಟು ದಂಡ ಇದೆ ಎಂದು ಕಟ್ಟಿಬಿಡಿ. ಇಲ್ಲದಿದ್ದರೆ ನಿಂತಲ್ಲೇ ನಿಮ್ಮ ಗಾಡಿ ಗಾಯಬ್​ ಆಗಬಹುದು.

    ಇಂಥದ್ದೊಂದು ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ. ಏಕೆಂದರೆ 2017ರಿಂದ 2020ರ ಅವಧಿಯಲ್ಲಿ ಇಲಾಖೆಗೆ 329 ಕೋಟಿ ರೂ. ದಂಡದ ಮೊತ್ತ ಸಲ್ಲಿಕೆ ಬಾಕಿ ಇದೆ. ದಂಡ ಪಾವತಿ ಮಾಡದ ವಾಹನದ ಮಾಲೀಕರ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

    ಇದಕ್ಕಾಗಿ ವಾಹನಗಳ ಮೇಲೆ ನಿಗಾ ಇಟ್ಟಿರುವ ಸಾರಿಗೆ ಇಲಾಖೆ ಸಿಬ್ಬಂದಿ, ನೀವೇನಾದರೂ ಭಾರಿ ದಂಡ ಉಳಿಸಿಕೊಂಡಿದ್ದರೆ, ನೀವು ಪಾರ್ಕ್​ ಮಾಡಿದ ಜಾಗದಿಂದಲೇ ನಿಮ್ಮ ಅರಿವಿಗೆ ಬಾರದೇ ವಾಹನಗಳನ್ನು ಸೀಜ್​ ಮಾಡಿಕೊಂಡು ಹೋಗಲಿದೆ. ನೀವು ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ.

    ಎಷ್ಟೋ ಸಲ ನೀವು ಪೊಲೀಸರಿಂದ ಬಚಾವಾಗಿರಬಹುದು. ಆದರೆ ಸಿಸಿಟಿವಿಯಲ್ಲಿ ನಿಮ್ಮ ಕಳ್ಳತನ ಸಿಕ್ಕಿಬಿದ್ದರಲಿಕ್ಕೆ ಸಾಕು, ಇಲ್ಲವೇ ಪೊಲೀಸರು ನಿಮಗೆ ಗೊತ್ತಿಲ್ಲದೇ ಮೊಬೈಲ್​ನಿಂದ ಫೋಟೋ ಕ್ಲಿಕ್ಕಿಸಿಕೊಂಡಿರಲೂಬಹುದು. ಆದ್ದರಿಂದ ನಿಮ್ಮ ವಾಹನದ ಮೇಲೆ ಎಷ್ಟು ದಂಡ ಇದೆ ಎಂದು ಒಮ್ಮೆ ಚೆಕ್​ ಮಾಡಿಕೊಳ್ಳುವುದು ಒಳ್ಳೆಯದು.

    ಸಾರಿಗೆ ಇಲಾಖೆ ಮಾಹಿತಿ ಅನ್ವಯ, ಕಾರುಗಳಿಂದ 41 ಕೋಟಿ 5 ಲಕ್ಷದ 23ಸಾವಿರದ 500 ರೂ. (10,36.311 ಸಂಚಾರಿ ನಿಯಮ ಉಲ್ಲಂಘನೆಯ ಕೇಸ್), ದ್ವಿಚಕ್ರ ವಾಹನಗಳ ಕೇಸ್ ಉಲ್ಲಂಘನೆಯಿಂದ 258 ಕೋಟಿ 27 ಲಕ್ಷದ 77 ಸಾವಿರದ 700 ರೂ. (73,84,462 ಸಂಚಾರಿ ನಿಯಮ ಉಲ್ಲಂಘನೆ ಕೇಸ್) ಬಾಕಿ ಇದೆ. ಆಟೋಗಳಿಂದ 10 ಕೋಟಿ 47 ಲಕ್ಷ 48 ಸಾವಿರದ 200 ರೂ. (3,40,864 ಸಂಚಾರಿ ನಿಯಮ ಉಲ್ಲಂಘನೆ ಕೇಸ್),  ದಂಡದ ಮೊತ್ತ ಬಾಕಿ ಇದೆ.

    ದಂಡಕ್ಕೆ ಸಂಬಂಧಿಸಿದಂತೆ ಆಯಾ ಸಂಚಾರಿ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ವಾಹನದ ನಂಬರ್ ಹಾಗೂ ಮಾಲೀಕರ ವಿಳಾಸ ನೀಡಿ ಫೈನ್ ಕಲೆಕ್ಟ್ ಮಾಡಲು ಸೂಚನೆ ನೀಡಲಾಗಿದೆ.

    ಮೊದಲಿಗೆ ದಂಡ ಕಟ್ಟುವಂತೆ ವಾಹನ ಸವಾರರ ಮೊಬೈಲ್​​​​ಗೆ ಒಂದು ಬಾರಿ ಇಲಾಖೆಯಿಂದ ಸಂದೇಶ ಕಳಿಸಲಾಗುತ್ತದೆ. ಬಳಿಕ ದಂಡ ಕಟ್ಟದ ವಾಹನಗಳು ಪಾರ್ಕಿಂಗ್ ಲಾಟ್​​​ನಲ್ಲೇ ಪೊಲೀಸರು ಸೀಜ್ ಮಾಡಲಿದ್ದು, ವಾಹನಗಳ ವೀಲ್ ಲಾಕ್ ಮಾಡಿ ವಶಕ್ಕೆ ಪಡೆಯುತ್ತಿದ್ದಾರೆ. ನಂತರ ಮನೆ ಬಳಿ ತೆರಳಿ ನೋಟಿಸ್ ಕೊಟ್ಟು ಫೈನ್ ಪಾವತಿಸಲು ಸೂಚಿಸಲಾಗತ್ತೆ.

    ಬೆಂಗಳೂರಿಗರು ನಿಮ್ಮ ದಂಡದ ಮೊತ್ತ ಎಷ್ಟಿದೆ ಎಂಬುದನ್ನು http://www.bangaloretrafficpolice.gov.in/default.aspx ವೆಬ್​ಸೈಟ್​ಗೆ ಭೇಟಿ ನೀಡಿ ನಿಮ್ಮ ವೆಹಿಕಲ್​ ನಂಬರ್​ ಹಾಕಿಯೂ ಪತ್ತೆ ಹಚ್ಚಬಹುದು.

    ಕಿಟಕಿಯಲ್ಲಿ ವಧು, ಅಂಗಳದಲ್ಲಿ ವರ- ಮಧ್ಯೆ ಹಗ್ಗ! ಇದಕ್ಕೆ ಕಾರಣ ತುಂಬಾ ಇಂಟರೆಸ್ಟಿಂಗ್​

    ಹೈದರಾಬಾದ್​ ಪಾಲಿಕೆ ರಿಸಲ್ಟ್​: ಮಾಜಿ ಮೇಯರ್​ಗೆ ವಿಜಯದ ಮಾಲೆ- ಬಿಜೆಪಿಗೆ ಮುನ್ನಡೆ

    ಬೆತ್ತಲೆಯಾಗಿ ಲಂಡನ್​ ಸುತ್ತಿದ ಸುಂದರಿ- ಇದರ ಕಾರಣ ಕೇಳಿ ಭೇಷ್ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts