ಗೋವಧೆ ತಡೆಗೆ ಡ್ರೋನ್ ಕ್ಯಾಮರಾ ಕಣ್ಗಾವಲು

KERUR 16-1

ಕೆರೂರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋವಧೆ ತಡೆಗಟ್ಟಲು ಪಟ್ಟಣದಲ್ಲಿ ಡ್ರೋನ್ ಕ್ಯಾಮರಾ ಕಾರ್ಯನಿರ್ವಹಿಸಲಿದೆ.
ಗೋಹತ್ಯೆ ಕಾನೂನು ಜಾರಿ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಾದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬೆಳಗಂಟಿ ರಸ್ತೆ, ಕಿಲ್ಲಾ ಪೇಟೆಯಲ್ಲಿ ಡ್ರೋನ್ ಕ್ಯಾಮರಾ ಹಾರಿಸಿ ಚಲನವಲನ ಗಮನಿಸಲಾಯಿತು.
ಪಿಎಸ್‌ಐ ಕುಮಾರ ಹಿತ್ತಲಮನಿ ಮಾತನಾಡಿ, ಅಕ್ರಮ ಗೋಸಾಗಣೆ ಹಾಗೂ ಗೋವಧೆ ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾ ಸಹಕಾರಿಯಾಗಲಿದೆ. 200 ಮೀ. ವ್ಯಾಪ್ತಿಯ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲೂ ಡ್ರೋನ್ ಹಾರಾಡುತ್ತದೆ. ರಾತ್ರಿ ಕೂಡ ಅದರ ಹಾರಾಟ ಇರುತ್ತದೆ ಎಂದು ಹೇಳಿದರು.
ಬಕ್ರೀದ್ ಹಬ್ಬದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅಕ್ರಮ ಚಟುವಟಿಕೆ ಪತ್ತೆ ಹಚ್ಚಲು 5 ಪೊಲೀಸ್ ವಾಹನಗಳು ಪಟ್ಟಣದಲ್ಲಿ ಸಂಚಾರ ನಡೆಸಿದವು.
ಜಿಲ್ಲಾ ಡ್ರೋನ್ ಕ್ಯಾಮರಾ ತಂಡದವರು ಹಾಗೂ ಕೆರೂರ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.

Share This Article

ತಿಂದ ನಂತರವೂ ಹಸಿವಾಗುತ್ತಿದ್ಯಾ? ಹಾಗಾದರೆ ಹಸಿವನ್ನು ನಿಯಂತ್ರಿಸಲು ಇವುಗಳನ್ನು ತಿನ್ನಿರಿ… hungry

hungry: ಕೆಲವರಿಗೆ ಏನು ತಿಂದರೂ ಮತ್ತೆ ಬೇಗನೆ ಹಸಿವಾಗುತ್ತದೆ. ಅದು ನನಗೆ ಚಾಟ್, ಮಸಾಲಗಳು, ಬಜ್ಜಿ…

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…