More

    ಕಿಟಕಿಯಲ್ಲಿ ವಧು, ಅಂಗಳದಲ್ಲಿ ವರ- ಮಧ್ಯೆ ಹಗ್ಗ! ಇದಕ್ಕೆ ಕಾರಣ ತುಂಬಾ ಇಂಟರೆಸ್ಟಿಂಗ್​

    ಕ್ಯಾಲಿಫೋರ್ನಿಯಾ: ನೀವು ಈ ಮೇಲಿನ ಚಿತ್ರದಲ್ಲಿ ಕಾಣುತ್ತಿರುವುದು ಮದುವೆಯ ಫೋಟೋ. ಮದುಮಗಳು ಕಿಟಕಿಯ ಮೇಲೆ ಕುಳಿತಿದ್ದರೆ, ಕೆಳಗಡೆ ಮದುಮಗನಿದ್ದಾನೆ. ಅಲ್ಲಿಂದಲೇ ಇಬ್ಬರೂ ಮದುವೆಯಾಗಿದ್ದಾರೆ. ಇಬ್ಬರಿಗೂ ಖುಷಿಯೋ ಖುಷಿ. ಈ ಮದುವೆ ಮುಂದೂಡಬೇಕು ಎಂಬ ಮಾತು ಕೇಳುತ್ತಿದ್ದರಿಂದ ಈ ರೀತಿ ಡಿಫರೆಂಟ್​ ಆಗಿ ಮದುವೆಯಾಗಿದೆ ಈ ಜೋಡಿ.

    ಅಷ್ಟಕ್ಕೂ ಏಕಪ್ಪಾ ಇಂಥದ್ದೊಂದು ಮದುವೆ ಎಂದರೆ ಅದಕ್ಕೆ ಕಾರಣ ಕರೊನಾ! ಹಾಗೆಂದು ಕರೊನಾ ನಿಯಮ ಪಾಲನೆ ಮಾಡಬೇಕು ಎಂದು ಈ ಜೋಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಇದಕ್ಕೆ ಕಾರಣ ವಧುವಿಗೆ ಕರೊನಾ ಪಾಸಿಟಿವ್​ ಬಂದದ್ದು!

    ಕರೊನಾ ಹಿನ್ನೆಲೆಯಲ್ಲಿ ಯಾವ್ಯಾವುದೋ ರೀತಿಯಲ್ಲಿ ಮದುವೆಗಳಾಗಿವೆ. ವಿಡಿಯೋ ಕಾನ್ಫರೆನ್ಸ್​ನಲ್ಲಿಯೇ ಮದುವೆಯಾದದ್ದೇ ಹೆಚ್ಚು. ಮಗುಮಗಳು ಒಂದು ಕಡೆ, ಮದುಮಗ ಇನ್ನೊಂದು ಕಡೆ ಹೀಗೆಯೂ ಎಷ್ಟೋ ಮದುವೆ, ನಿಶ್ಚಿತಾರ್ಥಗಳು ನಡೆದಿವೆ.

    ಆದರೆ ಮದುಮಕ್ಕಳು ಹತ್ತಿರವಿದ್ದೂ ದೂರ ದೂರ ನಿಂತು ಮದುವೆಯಾಗಿರುವುದು ಇದರ ವಿಶೇಷತೆ. ಅಂದಹಾಗೆ ಕ್ಯಾಲಿಫೋರ್ನಿಯಾದ ಈ ಜೋಡಿ ಹೆಸರು ಪೆಟ್ರಿಕ್ ಡೆಲ್​ಗಾಡೋ ಮತ್ತು ಲಾರೆನ್ ಜಿಮೆನೇಜ್​. ಲಾರೆನ್​ಗೆ ಮದುವೆಗೆ ಮೂರು ದಿನ ಇರುವಾಗ ಕರೊನಾ ಸೋಂಕು ದೃಢಪಟ್ಟಿತ್ತು.

    ಆಗ ಮದುವೆ ಮುಂದೂಡುವ ಮಾತುಕತೆ ನಡೆದವು. ಆದರೆ ಈ ಜೋಡಿ ಮಾತ್ರ ಮದುವೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಈ ಪ್ಲ್ಯಾನ್​ ಮಾಡಿದೆ. ಈ ರೀತಿಯಾಗಿ ದೂರ ದೂರ ಇದ್ದು ಮದುವೆಯಾಗಿದ್ದು, ಈ ಫೋಟೋ ಭಾರಿ ವೈರಲ್​ ಆಗಿದೆ. ವಧು ಕ್ವಾರಂಟೈನ್‌ನಲ್ಲಿ ಇದ್ದಾಗಲೇ ಈ ವಿವಾಹ ನಡೆದಿದೆ.

    ತಮ್ಮಿಬ್ಬರ ಈ ವಿವಾಹ ಬಂಧವನ್ನು ಶಾಶ್ವತವಾಗಿಡುವ ಮತ್ತು ಪರಸ್ಪರ ಜತೆಯಾಗಿರುವ ಸಂಕೇತವಾಗಿ ಇವರಿಬ್ಬರು ಒಂದು ದೊಡ್ಡ ಹಗ್ಗವನ್ನು ಹಿಡಿದುಕೊಂಡಿದ್ದರು. ಹೀಗೆ ಸುರಕ್ಷಿತ ಅಂತರ ಕಾಯ್ದುಕೊಂಡೇ ಈ ವಿವಾಹ ನಡೆದಿತ್ತು. ವೃತ್ತಿಪರ ಛಾಯಾಗ್ರಾಹಕ ಜೆಸ್ಸಿಕಾ ಜಾಕ್ಸನ್ ಈ ಜೋಡಿಯ ಫೋಟೋ ಅನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಅನೇಕ ಮಂದಿಯ ಮನಸ್ಸನ್ನು ಗೆದ್ದಿದೆ.

    ಬೆತ್ತಲೆಯಾಗಿ ಲಂಡನ್​ ಸುತ್ತಿದ ಸುಂದರಿ- ಇದರ ಕಾರಣ ಕೇಳಿ ಭೇಷ್ ಎಂದ ನೆಟ್ಟಿಗರು!

    ಹೈದರಾಬಾದ್​ ಪಾಲಿಕೆ ರಿಸಲ್ಟ್​: ಮಾಜಿ ಮೇಯರ್​ಗೆ ವಿಜಯದ ಮಾಲೆ- ಬಿಜೆಪಿಗೆ ಮುನ್ನಡೆ

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts