More

    ಹೈದರಾಬಾದ್​ ಪಾಲಿಕೆ ರಿಸಲ್ಟ್​: ಮಾಜಿ ಮೇಯರ್​ಗೆ ವಿಜಯದ ಮಾಲೆ- ಬಿಜೆಪಿಗೆ ಮುನ್ನಡೆ

    ಹೈದರಾಬಾದ್: ಭಾರೀ ಕುತೂಹಲ ಮೂಡಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ಮತಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. 8, 152 ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

    ಈ ನಡುವೆಯೇ, ಮೊದಲ ಫಲಿತಾಂಶ ಹೊರಬಂದಿದೆ. ಮಾಜಿ ಮೇಯರ್, ಎಂಐಎಂ ಅಭ್ಯರ್ಥಿ ಮೊಹಮ್ಮದ್ ಮಾಜೀದ್ ಹುಸೇನ್ ಅವರು ಗೆಲುವು ಸಾಧಿಸಿ ಗೆಲುವಿನ ಖಾತೆ ತೆರೆದಿರುವುದಾಗಿ ವರದಿಯಾಗಿದೆ.

    ಇವರು ಹೈದರಾಬಾದ್ ಕಂಡ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎನಿಸಿಕೊಂಡವರು. ಇದೇ ಮೊದಲ ಬಾರಿಗೆ ಮೆಹದಿಪಟ್ನಂನಿಂದ ಇವರು ಸ್ಪರ್ಧಿಸಿದ್ದರು. 2009ರಲ್ಲಿ ಅಹ್ಮದ್ ನಗರ ವಿಭಾಗದಲ್ಲಿ ಜಯ ಗಳಿಸಿ ಕಾರ್ಪೊರೇಟರ್ ಆಗಿದ್ದರು. ನಂತರ 2012ರಲ್ಲಿ ಮೇಯರ್ ಆಗಿದ್ದರು.

    ಈ ಚುನಾವಣೆಯಲ್ಲಿ 74 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಿಎಚ್ ಎಂಸಿ 150 ವಾರ್ಡ್ ಗಳನ್ನು ಹೊಂದಿದ್ದು, 1,122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರೊನಾ ವೈರಸ್​ ಕಾರಣದಿಂದ ಮತಪತ್ರ ಬಳಸಿ ಚುನಾವಣೆ ನಡೆಸಲಾಗಿದೆ.

    ಆಂಧ್ರಪ್ರದೇಶದ ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಗಳ ಪ್ರಕಾರ 1.30ರ ಸುಮಾರಿಗೆ ಬಿಜೆಪಿ 24 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದು, ಟಿಆರ್​ಎಸ್​ 18 ಸೀಟು ಅಸಾದುದ್ದೀನ್​ ಒವೈಸಿ 10 ವಾರ್ಡ್​ ಹಾಗೂ ಕಾಂಗ್ರೆಸ್​ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಹೇಳಿದೆ.

    2016ರ ಫೆಬ್ರುವರಿಯಲ್ಲಿ ನಡೆದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ 99 ಸ್ಥಾನ ಪಡೆದಿದ್ದು, ಅಸಾದುದ್ದೀನ್ ಒವೈಸಿಯ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ 04 ಹಾಗೂ ಕಾಂಗ್ರೆಸ್ 02, ಟಿಡಿಪಿ ಒಂದು ಸ್ಥಾನದಲ್ಲಿ ಮಾತ್ರ ಜಯ ಸಾಧಿಸಿತ್ತು.

    2023ರಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಹೈದರಾಬಾದ್ ನಗರ ಪಾಲಿಕೆಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಹೈಕಮಾಂಡ್ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ತಂದೆಯ ಆಸ್ತಿ ಹೇಗೆ ಬೇಕಾದರೂ ಹಂಚಬಹುದೆ? ವಿಲ್​ ಮಾಡದಿದ್ದರೆ ಏನಾಗುತ್ತದೆ?

    ಬೆತ್ತಲೆಯಾಗಿ ಲಂಡನ್​ ಸುತ್ತಿದ ಸುಂದರಿ- ಇದರ ಕಾರಣ ಕೇಳಿ ಭೇಷ್ ಎಂದ ನೆಟ್ಟಿಗರು!

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts