ತಂದೆಯ ಆಸ್ತಿ ಹೇಗೆ ಬೇಕಾದರೂ ಹಂಚಬಹುದೆ? ವಿಲ್​ ಮಾಡದಿದ್ದರೆ ಏನಾಗುತ್ತದೆ?

nyayadevate
Published on
ಪ್ರಶ್ನೆ: ನಮ್ಮ ತಂದೆಯವರ ಆಸ್ತಿಯಲ್ಲಿ ನನ್ನ ತರುವಾಯ ನನ್ನ ಮಕ್ಕಳಿಗೆ ಹೆಂಡತಿಗೆ ಆಸ್ತಿ ಹೇಗೆ ಹಂಚಿಕೆ ಆಗುತ್ತದೆ? ನಾನು ವಿಲ್ ಮಾಡಬಹುದೇ? ತಿಳಿಸಿ.

ಉತ್ತರ: ತಂದೆ ಸ್ವಯಾರ್ಜಿತವಾಗಿ ಸಂಪಾದಿಸಿದ್ದ ಆಸ್ತಿ ಅವರ ಮರಣಾನಂತರ ನಿಮಗೆ ಬಂದಿದ್ದರೆ, ಆಗ, ಆ ಆಸ್ತಿಯೂ ನಿಮ್ಮ ವೈಯಕ್ತಿಕ, ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನೂ ನೀವು ನಿಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ ಮಾಡಬಹುದು.

ನೀವು ಪರಭಾರೆ ಮಾಡದೇ ಹಾಗೇ ಆಸ್ತಿ ಉಳಿಸಿ ನಿಧನರಾದರೆ, ಆಗ ನಿಮ್ಮ ತಂದೆಯಿಂದ ನಿಮಗೆ ಬಂದ ಆಸ್ತಿ ನಿಮ್ಮ ಹೆಂಡತಿ ಮತ್ತು ನಿಮ್ಮ ಮಕ್ಕಳಿಗೆ ಸಮವಾಗಿ ಪಾಲಾಗುತ್ತದೆ. ಬೇಕಿದ್ದರೆ ನೀವು ಈಗಲೇ ಈ ಆಸ್ತಿಯನ್ನು ಸಹ ಯಾರಿಗೆ ಬೇಕೋ ಅವರಿಗೆ ವಿಲ್ ಸಹ ಮಾಡಬಹುದು.

ಒಂದು ವೇಳೆ ನಿಮಗೆ ನಿಮ್ಮ ತಂದೆಯಿಂದ ಬಂದ ಆಸ್ತಿ, ನಿಮ್ಮ ತಂದೆಗೆ, ಅವರ ಅಜ್ಜನಿಂದ ಬಂದ ಆಸ್ತಿ ಆಗಿದ್ದರೆ ಆಗ ಆ ಆಸ್ತಿಯಲ್ಲಿ ನಿಮ್ಮ ಮಕ್ಕಳಿಗೂ ಪಾಲು ಇರುತ್ತದೆ. ಆಗ ನಿಮ್ಮ ಪಾಲನ್ನು ಮಾತ್ರ ನೀವು ಬೇಕಾದವರಿಗೆ ವಿಲ್ ಮಾಡಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

https://www.vijayavani.net/s-nyayadevate-30-11-2020/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net