

ಉತ್ತರ: ನೀವು ಒಮ್ಮೆ ರಕ್ತಪರೀಕ್ಷೆ ಮಾಡಿಸಿ ಹಿಮೋಗ್ಲೋಬಿನ್ ಅಂಶ ಎಷ್ಟಿದೆ ಎಂದು ತಿಳಿದುಕೊಳ್ಳಿ. ಕಡಿಮೆಯಿದ್ದಲ್ಲಿ ಚಿಕಿತ್ಸೆ ಪಡೆಯಿರಿ. ಮುಖಕ್ಕೆ ರಾಸಾಯನಿಕಗಳಿರುವ ಕ್ರೀಂ ಬಳಕೆ ಬೇಡ. ಮುಖ ತೊಳೆಯುವ ಸಾಬೂನು ಕೂಡ ಹೆಚ್ಚು ಕ್ಷಾರಯುಕ್ತವಾಗಿರುವುದನ್ನು ಬಳಸಬೇಡಿ. ತಲೆ ಸ್ನಾನಕ್ಕೆ ಮತ್ತು ಮುಖ ತೊಳೆಯಲು ಅಧಿಕ ಬಿಸಿ ನೀರಿನ ಬಳಕೆ ಬೇಡ. ರಕ್ತಚಂದನ, ಗುಲಾಬಿದಳಗಳ ಪುಡಿ, ಬೆಲ್ಲ, ಬೆಣ್ಣೆ ಬೆರೆಸಿ ಬಂಗು ಉಂಟಾಗಿರುವ ಕಡೆಗೆ ಲೇಪಿಸಿ ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ. ವಾರಕ್ಕೊಮ್ಮೆ ಪಪ್ಪಾಯ ಮತ್ತು ಬಾಳೆಹಣ್ಣನ್ನು ಪೇಸ್ಟ್ ಮಾಡಿ ಲೇಪಿಸಿ ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ.
ಪ್ರತಿದಿನ ನಿಮ್ಮ ಮಗಳಿಗೆ ಕಣ್ಣಿನ ಸುತ್ತಲಿನ ಕಪ್ಪು ನಿವಾರಣೆಗೆ ಹಾಲು ಮತ್ತು ಜೇನುತುಪ್ಪ ಬೆರೆಸಿ ಲೇಪಿಸಲು ಹೇಳಿ. ಅರ್ಧಗಂಟೆ ನಂತರ
ತೊಳೆಯಬೇಕು. ಹಣೆಯ ಮೇಲಿನ ಗುಳ್ಳೆಗಳು ತಾವಾಗಿಯೇ ಒಣಗುತ್ತವೆ.
ಬಿಳಿಕೂದಲಿಗೆ ತಿಂಗಳಿಗೊಮ್ಮೆ ಮೆಹಂದಿ ಹಾಕುವುದು ಒಳ್ಳೆಯದು. ನೀಲಭೃಂಗಾದಿ ಕೇರಂ ಎಣ್ಣೆಯನ್ನು ಪ್ರತಿದಿನ ತಲೆಗೆ ಬಳಸಲು ಹೇಳಿ. ತಲೆಯ ಸ್ನಾನಕ್ಕೆ ಸೀಗೆಪುಡಿ, ಹೆಸರುಕಾಳಿನ ಹಿಟ್ಟು ಇಲ್ಲವೇ ಗಿಡಮೂಲಿಕೆಯುಕ್ತ ಶಾಂಪೂ ಬಳಸಲು ತಿಳಿಸಿ. ಬೆನ್ನುನೋವು ಕಡಿಮೆಯಾಗಲು ಆಹಾರದಲ್ಲಿ ಕ್ಯಾಲ್ಷಿಯಂ ಹೆಚ್ಚಾಗಿರುವ ಹಾಲು, ಮೊಸರು, ಮೊಳಕೆಕಾಳು ಸೇವಿಸಲು ಕೊಡಿ. ಪ್ರತಿದನ ಕೆಲವು ಸರಳ ವ್ಯಾಯಾಮ ಇಲ್ಲವೇ ಯೋಗಾಸನ ಮಾಡಲು ಹೇಳಿ. ಎಳ್ಳೆಣ್ಣೆಯಲ್ಲಿ ಸ್ವಲ್ಪ ಕರ್ಪೂರ ಬೆರೆಸಿ ಬಿಸಿ ಮಾಡಿ ನೋವಿರುವ ಭಾಗಕ್ಕೆ ಲೇಪಿಸಿ ಮಸಾಜ್ ಮಾಡಿ. ಬಿಸಿನೀರು ಹಾಕಿಕೊಳ್ಳಲು ತಿಳಿಸಿ.