

ಉತ್ತರ: ನೀವು ಗುಳ್ಳೆಗಳನ್ನು ಜಿಗುಟಿಕೊಳ್ಳಬೇಡಿ. ಪ್ರತಿದಿನ ಬೇವಿನ ಪುಡಿ, ಗುಲಾಬಿ ದಳಗಳ ಪುಡಿ, ರಕ್ತಚಂದನದ ಪುಡಿ, ಮೆಂತ್ಯ, ನೆಲ್ಲಿಕಾಯಿ ಪುಡಿಗಳನ್ನು (ಇವೆಲ್ಲವೂ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತವೆ) ಸಮಪ್ರಮಾಣದಲ್ಲಿ ತೆಗೆದುಕೊಂಡು ಗುಲಾಬಿ ಜಲದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಗುಳ್ಳೆಗಳಿರುವ ಭಾಗಕ್ಕೆ ಲೇಪಿಸಿ, ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.
ರಾತ್ರಿ ಮಲಗುವಾಗ ಮಧುಯಷ್ಟಿ ತೈಲವನ್ನು ಗುಳ್ಳೆಗಳಿರುವ ಕಡೆ ಸವರಿಕೊಳ್ಳಿ. ಸಾರಿವಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಸೇವಿಸಿ. ಆಹಾರದಲ್ಲಿ ಹೆಚ್ಚು ಖಾರ, ಹುಳಿ, ಕರಿದ ಪದಾರ್ಥ ಸೇವನೆ ಬೇಡ. ಕಾಫಿ, ಟೀ ಸೇವನೆ ಮಿತಗೊಳಿಸಿ. ಸ್ನಾನಕ್ಕೆ ಕಡಲೆಹಿಟ್ಟಿಗೆ ಅರಿಶಿಣ ಬೆರೆಸಿ ಬಳಸಿ.