More

    ಅಧಿಕ ಬೊಜ್ಜಿನಿಂದ ಕೊರಗುತ್ತಿದ್ದೇನೆ- ಆಯುರ್ವೇದ ಪರಿಹಾರವೇನು?

    ಅಧಿಕ ಬೊಜ್ಜಿನಿಂದ ಕೊರಗುತ್ತಿದ್ದೇನೆ- ಆಯುರ್ವೇದ ಪರಿಹಾರವೇನು? ಪ್ರಶ್ನೆ: ನನ್ನ ವಯಸ್ಸು 30 ವರ್ಷ. ಮದುವೆಯಾಗಿ 4 ವರ್ಷವಾಯಿತು. 3 ವರ್ಷದ ಮಗನಿದ್ದಾನೆ. ನನ್ನ
    ಸಮಸ್ಯೆ ಎಂದರೆ ನಾನು ತುಂಬ ದಪ್ಪಗಾಗಿz್ದÉೀನೆ. ನನಗೆ ಬಾಣಂತನವಾದ ಬಳಿಕ ಹೊಟ್ಟೆ ನಿಂತು
    ಬಿಟ್ಟಿದೆ. ಡಯಟ್ ಮಾಡುವುದೆಂದರೆ ಯಾವ ವೇಳೆ ಯಾವ ರೀತಿ ಆಹಾರ ತೆಗೆದುಕೊಳ್ಳಬೇಕು? ನಿಮ್ಮ
    ಅಂಕಣದಲ್ಲಿ ತಿಳಿಸಿದ ತ್ರಿಫಲಾ ಪುಡಿಯನ್ನು ಒಂದು ವರ್ಷದವರೆಗೂ ಉಪಯೋಗಿಸಿದೆ. ಆದರೂ
    ತೂಕ ಕಡಿಮೆಯಾಗಲಿಲ್ಲ. ನನ್ನ ದೇಹದಿಂದ ಮುಜುಗರವಾಗುತ್ತದೆ. ಎಲ್ಲರೂ ತಮಾಷೆ ಮಾಡುತ್ತಾರೆ.
    ಈ ಕಾರಣದಿಂದ ಮಾನಸಿಕವಾಗಿಯೂ ನನಗೆ ತುಂಬಾ ಹಿಂಸೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

    ಉತ್ತರ: ಮನಸ್ಸು ಮಾಡಿದರೆ ಸಣ್ಣಗಾಗುವುದು ಕಷ್ಟದ ಕೆಲಸವಲ್ಲ. ಆಹಾರವನ್ನು ನೀವು ಈಗ ಸೇವಿಸುತ್ತಿರುವ ಪ್ರಮಾಣಕ್ಕಿಂತ ಕಡಿಮೆ ಸೇವಿಸಿ. ತರಕಾರಿ ಹೆಚ್ಚು ಸೇವಿಸಿ.

    ಸೌತೆಕಾಯಿ, ಕ್ಯಾರೆಟ್, ಗಡ್ಡೆಕೋಸು ಹಸಿಯಾಗಿಯೇ ತಿನ್ನಿ. ರಾತ್ರಿ ಕೇವಲ ತರಕಾರಿ, ಮೊಳಕೆಕಾಳು, ಹಣ್ಣು ತಿನ್ನಿ.
    ದಿನಕ್ಕೆ 3 ಲೀ. ನೀರು ಕುಡಿಯಿರಿ.

    ಬೇಕರಿ ತಿಂಡಿಗಳು, ಸಿಹಿತಿಂಡಿ ಸೇವನೆ ಬೇಡ. ಕಾಫಿ, ಟೀ, ಸಕ್ಕರೆ ಇಲ್ಲದೇ ಕುಡಿಯಿರಿ. ಮಜ್ಜಿಗೆ, ಗಂಜಿ ಹೆಚ್ಚು ಸೇವಿಸಿ. ಹಣ್ಣಿನ ರಸ ಸೇವಿಸುವಾಗಲೂ ಸಕ್ಕರೆ ಇಲ್ಲದೇ ಕುಡಿಯಿರಿ. ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಿ.
    ಮಂಡಿ ಮಡಚದೇ ಬಗ್ಗಿ ಮಾಡುವ ವ್ಯಾಯಾಮ ಬೇಸರಿಸಿಕೊಳ್ಳಬೇಡಿ.

    ಕಾಲುಗಳಲ್ಲಿ ವಿಪರೀತ ಉರಿ- ನಡೆಯಲು ತೊಂದರೆ: ಪರಿಹಾರವೇನು?

    ಅನಿಯಮಿತ ಮೂತ್ರ ಸಮಸ್ಯೆಯೆ?ಆಯುರ್ವೇದ ವೈದ್ಯರ ಪರಿಹಾರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts