

ಮುಂಬೈ: ಪೋರ್ನ್ ವೆಬ್‍ಸೈಟ್ ಒಂದಕ್ಕೆ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡುವುದೂ ಅಲ್ಲದೇ ಅದನ್ನು ಅಪ್ಲೋಡ್ ಮಾಡಿರುವ ಆರೋಪದ ಮೇಲೆ ಚಿತ್ರನಟಿ ಗೆಹನಾ ವಸಿಷ್ಠ ಅವರನ್ನು ಬಂಧಿಸಲಾಗಿದೆ.
ಮಧ್ಯ ಪ್ರದೇಶ ಮೂಲದ ಗೆಹನಾ ಹಾಟೆಸ್ಟ್ ತಾರೆ ಎಂದೇ ಗುರುತಿಸಿಕೊಂಡವರು. ಇದೀಗ ವೆಬ್ಸೈಟ್ನಲ್ಲಿ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಇವರ ವಿರುದ್ಧ ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್ಲೋಡ್ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲು ಮಾಡಲಾಗಿದೆ.
ಇವರನ್ನು ಇಂದು ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಗೆಹನಾ ಅವರ ಮೂಲ ಹೆಸರು ವಂದನಾ. ಖಾಸಗಿ ವಾಹಿನಿಯ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದವರು ಇವರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಗಿದರು. ತಮ್ಮ ಸೌಂದರ್ಯ ಹಾಗೂ ಹಾವಭಾವಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೇ 80ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್ ಲೋಕಕ್ಕೆ ಬಂದ ನಂತರ ಗೆಹನಾ ಎಂದು ಹೆಸರು ಬದಲಾಯಿಸಿಕೊಂಡರು. ಹಿಂದಿಯಲ್ಲಿ ಗೆಹನಾ ಎಂದರೆ ಆಭರಣ. ಹೀಗೊಂದು ಹೆಸರು ಇಟ್ಟುಕೊಂಡು ಸಕತ್ ಫೇಮಸ್ ಆದರು ವಂದನಾ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಹಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡರು.
ಸಿನಿಮಾಗಳಲ್ಲಿಯೂ ಇವರದ್ದು ಹೆಚ್ಚು ಹಾಟ್ ಎನ್ನುವ ಪಾತ್ರಗಳಲ್ಲಿಯೇ ಕಾಣಿಸಿಕೊಂಡರು. ಇವರು ಸದಾ ಸೋಷಿಯಲ್ ಮೀಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿ ಯುವಕರ ಹಾರ್ಟ್ಬೀಟ್ ಹೆಚ್ಚಿಸಿದ್ದರು.