More

    ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

    ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?ನಾನು ಇಂಜಿನಿಯರ್. ನನ್ನ ಮನೆ ಪಕ್ಕದ ಮನೆಯಲ್ಲಿ ಸುಮಾರು 25-26 ವರ್ಷದ ಆಂಟಿ ಮತ್ತು ಅವರ ಗಂಡ ವಾಸಿಸುತ್ತಿದ್ದಾರೆ. ಇಬ್ಬರೂ ನನ್ನ ಜತೆ ಬಹಳ ಸ್ನೇಹದಿಂದ ಇದ್ದಾರೆ. ಒಂದು ದಿನ ಆಂಟಿ ನನ್ನ ವಾಟ್ಸ್ ಆಪ್ ನಂಬರ್ ತೆಗೆದುಕೊಂಡರು. ಅದರಲ್ಲಿ ವೈಯಕ್ತಿಕ ವಿಷಯ ಬರೆಯತೊಡಗಿದ್ದಾರೆ. ಅವರ ಗಂಡ ಸುಖ ಕೊಡುವುದಿಲ್ಲವಂತೆ, ಅವರಿಗೆ ಮದುವೆಗೆ ಮುಂಚಿನಿಂದಲೂ ಒಬ್ಬ ಬಾಯ್ಫ್ರೆಂಡ್ ಇದ್ದಾನಂತೆ, ಮದುವೆಯಾದ ಮೇಲೂ ಅವನ ಸ್ನೇಹಸಂಬಂಧ ಮುಂದುವರೆದಿತ್ತಂತೆ, ಅವನು ಯಾವಾಗಲೋ ಇವರನ್ನು ನಂಬಿಸಿ ಇವರ ಅಶ್ಲೀಲ ವಿಡಿಯೋಗಳನ್ನು ತೆಗೆದುಕೊಂಡನಂತೆ. ಈಗ ಅವನು ವಿಡಿಯೋಗಳನ್ನು ನಿನ್ನ ಗಂಡನಿಗೆ ಮತ್ತು ಮಾವನಿಗೆ ಕಳಿಸುತ್ತೇನೆ, ಅದು ಬೇಡವೆಂದರೆ ಹಣಕೊಡು ಎಂದು ಪೀಡಿಸುತ್ತಿದ್ದಾನಂತೆ. ಈಗಾಗಲೇ ಈ ಆಂಟಿ ಲಕ್ಷಾಂತರ ರೂಪಾಯಿ ಕೊಟ್ಟಿದ್ದಾರಂತೆ. ಇವರ ತಂಗಿಯನ್ನೂ ಅವನು ಪ್ರೀತಿಸುತ್ತಿರುವುದರಿಂದ, ಅವಳೂ ಅವನ ಜತೆ ಸೇರಿ ಹಣದೋಚುವ ಆಟವಾಡುತ್ತಿದ್ದಾಳಂತೆ. ಈಗ ಆಂಟಿ ನನ್ನ ಹತ್ತಿರ ‘ಸ್ವಲ್ಪ ಹಣ ಕೊಡು, ಅವನ ಮುಖದ ಮೇಲೆ ಬಿಸಾಕಿ ಸದ್ಯದ ಕಾಟ ತಪ್ಪಿಸಿಕೊಳ್ಳುತ್ತೇನೆ’ಅಂತ ಕೇಳಿದರು. ನಾನು ನನ್ನ ಹತ್ತಿರ ಹಣವಿಲ್ಲವೆಂದೆ. ‘ಪ್ರಾರಂಭದಿಂದಲೂ ನಿನ್ನನ್ನು ಕಂಡರೆ ನನಗೆ ಇಷ್ಟ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅಂತ ಆಂಟಿ ಬರೆಯುತ್ತಲೇ ಇದ್ದಾರೆ. ನನಗೆ ಅವರ ಬಗ್ಗೆ ತೀರಾ ಆತ್ಮೀಯತೆ ಇಲ್ಲದಿದ್ದರೂ ಅನುಕಂಪವಿದೆ. ಏನು ಮಾಡಲಿ?

    ಉತ್ತರ: ನಿಮ್ಮ ಎಂಟು ಪುಟಗಳ ಪತ್ರ ಓದಿ ನನಗೆ ಎರಡು ಅನುಮಾನಗಳು ಬರುತ್ತಿವೆ. ಒಂದು, ಆಕೆ ಹೇಳಿದ ಯಾವ ಕಥೆಯೂ ನಡೆದೇ ಇಲ್ಲದಿರಬಹುದು. ಸುಮ್ಮನೇ ನಿಮ್ಮ ಪ್ರೀತಿ, ಅನುಕಂಪ ಹಾಗೂ ನಿಮ್ಮಿಂದ ಹಣವನ್ನು ಸೆಳೆಯಲು ಹೀಗೆಲ್ಲಾ ನಾಟಕವಾಡುತ್ತಿರಬಹುದು. ಇನ್ನೊಂದು, ಆಕೆಯ ಬದುಕಿನಲ್ಲಿ ನಿಜವಾಗಿಯೂ ಹಾಗೆಲ್ಲಾ ನಡೆದೇ ಇದ್ದರೆ ಅದರ ಮಧ್ಯದಲ್ಲಿ ನಿಮ್ಮನ್ನು ಸಿಕ್ಕಿಸಿ, ನಿಮ್ಮಿಂದ ಹಣ ದಕ್ಕಿಸಿಕೊಂಡು ತಾವು ಪಾರಾಗುವ ಉಪಾಯವನ್ನೂ ಮಾಡುತ್ತಿರಬಹುದು. ನೀವು ಜಾಣರು. ಆಕೆ ಕೇಳಿದ ತಕ್ಷಣ ಹಣ ಕೊಟ್ಟಿಲ್ಲ. ಆದರೂ ನಿಮ್ಮ ಮನಸ್ಸಿನಲ್ಲಿ ಆಕೆಗೆ ಸಹಾಯ ಮಾಡುವ ವಿಚಾರವಿದೆ. ಸಹಾಯ ಖಂಡಿತವಾಗಿಯೂ ಮಾಡಬಹುದು. ಆಕೆ ಹೇಳುವ ಘಟನೆಗಳು ನಿಜಕ್ಕೂ ನಡೆದಿದ್ದರೆ, ನೀವು ಅವರಿಗೆ ಹೀಗೆ ಸಹಾಯ ಮಾಡಬಹುದು. ಅವೆಂದರೆ ಒಂದು, ಸೈಬರ್ ಪೊಲೀಸರಿಗೆ ಕಂಪ್ಲೇಂಟ್ ಕೊಡುವುದು ಮತ್ತು ಇನ್ನೊಂದು, ಅಪರಾಧ ಪ್ರಕರಣಗಳನ್ನು ನಡೆಸುವ ಕ್ರೖೆಂ ಲಾಯರ್ ಬಳಿ ಸಲಹೆ ತೆಗೆದುಕೊಳ್ಳುವುದು.

    ‘ಮಾನ ಹೋಗುತ್ತದೆ’, ‘ಗಂಡನಿಗೆ ತಿಳಿಯುತ್ತದೆ’ ಇಂಥಾ ನೆವಗಳನ್ನು ಆಕೆ ಕೊಡಬಾರದು. ಇವೆಲ್ಲಾ ಜಾಗ್ರತೆ ಇಂಥಾ ಕೆಟ್ಟ ಕೆಲಸಗಳನ್ನು ಮಾಡುವ ಮೊದಲೇ ಇರಬೇಕಿತ್ತು. ಸಮಾಜ ವಿಧಿಸಿರುವ ನ್ಯಾಯ ಮಾರ್ಗದಲ್ಲಿ ನಡೆಯದೇ ‘ಕಾಮಾತುರಾಣಂ ನ ಭಯಾ ನ ಲಜ್ಜಾ’ ಎನ್ನುವಂತೆ ನಾಚಿಕೆ, ಗೌರವ ಎಲ್ಲವನ್ನೂ ಗಾಳಿಗೆ ತೂರಿ, ಪರಪುರುಷನ ತೋಳಿಗೆ ಆಕೆ ಸೇರಿದ್ದೇಕೆ? ಈಗ ಮಾನ ಮರ್ಯಾದೆ ಎಂದು ಹಲುಬುವುದೇಕೆ? ನೀರಿನಲ್ಲಿ ಬಿದ್ದವರಿಗೆ ಮಳೆಯೇನು? ಚಳಿಯೇನು? ಅಪರಾಧ ಮಾಡುತ್ತಿರುವವನನ್ನು ಬಯಲಿಗೆಳೆಯಲು ಇವರೂ ಬಯಲಿಗೆ ಬರಲೇ ಬೇಕಾಗುತ್ತದೆ. ಅದು ಬಿಟ್ಟು ನಿಮ್ಮಂಥವರನ್ನು ಮಧ್ಯೆ ಸಿಕ್ಕಿಸಿ, ನಿಮ್ಮಿಂದ ಹಣ ಪಡೆದು ಅವನ ಬಾಯಿ ಮುಚ್ಚಿಸಲು ಎಲ್ಲಿಯವರೆಗೆ ಸಾಧ್ಯ? ನನಗಿರುವ ಮತ್ತೊಂದು ಅನುಮಾನವೆಂದರೆ ಆಕೆ ಮಹಾ ಘಾಟಿಯಿದ್ದ ಹಾಗಿದೆ. ನಿಮ್ಮಂಥ ಯುವಕರನ್ನು ಪ್ರೀತಿಯ ಬಲೆಯಲ್ಲಿ ಸಿಕ್ಕಿಸಿ ದೇಹಸುಖ ಮತ್ತು ಹಣ ಪಡೆಯುವ ಹುನ್ನಾರವನ್ನು ಬೇಕಾದಷ್ಟು ನಡೆಸಿರಬಹುದು. ನೀವೀಗ ಎಚ್ಚರಿಕೆಯಿಂದ ಈ ಸಿಕ್ಕಿನಿಂದ ಬಿಡಿಸಿಕೊಳ್ಳಬೇಕು. ಅವಳಿಗೆ ತೊಂದರೆ ಕೊಡುವವನಿಗೆ ಬುದ್ಧಿ ಕಲಿಸಬೇಕು ಎಂದೆಲ್ಲಾ ಯೋಚಿಸುವುದನ್ನು ಬಿಡಿ. ಮೊದಲು ಆಂಟಿಯ ನಂಬರ್ ಅನ್ನು ನಿಮ್ಮ ವಾಟ್ಸ್ ಆಪ್​ನಿಂದ ಕಿತ್ತುಹಾಕಿ. ಅದಕ್ಕೂ ಮೊದಲು ಆಕೆಯನ್ನು ಮುಖತಃ ಭೇಟಿ ಮಾಡಿ ‘ಇದು ನಿಮ್ಮ ಜೀವನ ಮತ್ತು ನೀವು ಮಾಡಿಕೊಂಡಿರುವ ಘೂಟಾವಳಿ. ಅದನ್ನು ನೀವೇ ಸರಿಪಡಿಸಿಕೊಳ್ಳಿ.

    ನಾನು ನಿಮ್ಮ ಪಕ್ಕದ ಮನೆಯ ಹುಡುಗ ಅಷ್ಟೇ, ನನಗೆ ನಿಮ್ಮ ಬಗ್ಗೆ ಯಾವ ಪ್ರೀತಿಯೂ ಇಲ್ಲ. ಇನ್ನೂ ನನ್ನನ್ನು ಬಲವಂತ ಮಾಡಿದರೆ ನಾನು ನಿಮ್ಮ ಮೆಸೇಜ್​ಗಳನ್ನು ನಿಮ್ಮ ಗಂಡನಿಗೆ ಕಳಿಸುತ್ತೇನೆ’ ಎಂದು ಧೃಡವಾಗಿ ಮತ್ತು ಧೈರ್ಯವಾಗಿ ಹೇಳಿ.
    ಯಾವುದಾದರೂ ಹೆಣ್ಣು ತನ್ನ ದುಃಖವನ್ನು ಹೇಳಿಕೊಂಡರೆ ಮಂಜುಗಡ್ದೆಯಂತೆ ಕರಗಿಬಿಡುವ ನಿಮ್ಮಂಥ ಮೆದು ಮನಸ್ಸಿನ ಮತ್ತು ಈ ವಯಸ್ಸಿನ ಗಂಡುಮಕ್ಕಳನ್ನು ಆಟವಾಡಿಸುವ ನಾಚಿಕೆಯೇ ಇಲ್ಲದ ಹೆಂಗಸರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿರುವುದು ವಿಷಾದ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?

    ‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

    ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

    ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts