RRR ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರು: ವಿದೇಶದಲ್ಲಿ ಜ್ಯೂ.ಎನ್​ಟಿಆರ್ ಫ್ಯಾನ್ಸ್ ಅಬ್ಬರ ಹೇಗಿದೆ ಗೊತ್ತಾ?

Published on
2022 ರಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ‘ಆರ್​ಆರ್​ಆರ್’ ಚಿತ್ರ ಕೊನೆಗೂ ಈಗ ರಿಲೀಸ್​ಗೆ ರೆಡಿಯಾಗಿದೆ. ಹೌದು, ಇದೇ ಮಾ.25 ರಂದು ವಿಶ್ವಾದ್ಯಂತ ಎಸ್.ಎಸ್.ರಾಜಮೌಳಿ ಅವರ ‘ಆರ್​ಆರ್​ಆರ್’ ಬಿಡುಗಡೆ ಆಗಲಿದೆ. ಇನ್ನು, ಚಿತ್ರದ ರಿಲೀಸ್​ಗೆ ಸಕಲ ತಯಾರಿಗಳನ್ನು ಚಿತ್ರತಂಡ ಈಗಾಗಲೇ ಮಾಡಿಕೊಳ್ಳಲಾಗಿದೆ. ನಟ ರಾಮ್ ಚರಣ್ ತೇಜ್ ಮತ್ತು ನಟ ಜ್ಯೂ.ಎನ್​ಟಿಆರ್​ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಈ ನಟರ ಜೊತೆ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಆಲಿಯಾ ಭಟ್ ಕೂಡಾ ಈ ಸಿನಿಮಾದ ಮೂಲಕ ದಕ್ಷಿಣ ಭಾರತದಲ್ಲಿ ಮಿಂಚಲಿದ್ದಾರೆ. ಹೀಗಾಗಿ, ಸಿನಿಪ್ರೇಕ್ಷಕರು ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಂದಹಾಗೆ, ಈಗಾಗಲೇ ‘ಆರ್​ಆರ್​ಆರ್’ ಚಿತ್ರದ ಮೇಲೆ ಪ್ರೇಕಕರಿಗೆ ಎಷ್ಟು ಕ್ರೇಜ್ ಇದೆ ಎಂಬುದನ್ನು ನಾವು ನೋಡಿದೀವಿ. ಹೀಗಿರುವಾಗಲೇ, ದೇಶದಲ್ಲಿ ಹಾಗೂ ವಿದೇಶದಲ್ಲಿ ಕೂಡಾ ಈ ಚಿತ್ರಕ್ಕೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಅಲ್ಲಿನ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡಾ ಗಿಟ್ಟಿಸಿಕೊಂಡಿದೆ. ಅದರಲ್ಲೂ, ಜ್ಯೂ. ಎನ್​ಟಿ​ಆರ್ ಅಭಿಮಾನಿಗಳು ರಾಶಿ ರಾಶಿ ಟಿಕೆಟ್ ಖರೀದಿಸುತ್ತಿದ್ದಾರೆ ಎನ್ನಲಾಗಿದೆ.
ಹೌದು, ‘ಬಾಹುಬಲಿ’ ಸಿನಿಮಾದಿಂದಾಗಿ ವಿದೇಶದಲ್ಲೂ ರಾಜಮೌಳಿ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಗಮನ ಸೆಳೆದ ಆ ಚಿತ್ರದ ಬಳಿಕ ಅವರ ಬತ್ತಳಿಕೆಯಿಂದ ಈಗ ‘ಆರ್​ಆರ್​ಆರ್​’ ಬರುತ್ತಿದೆ. ಮತ್ತೊಂದೆಡೆ, ನಟ ಜ್ಯೂ.ಎನ್​ಟಿಆರ್​ ಅವರಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಅವರ ನಟನೆ, ಡ್ಯಾನ್ಸ್​ಗೆ ಅಭಿಮಾನಿಗಳು ಸದಾ ಫಿದಾ ಆಗುತ್ತಾರೆ. ಅಮೆರಿಕದಲ್ಲಿ ಇರುವ ನಟನ ಅಭಿಮಾನಿಯೊಬ್ಬರು ಬರೋಬ್ಬರಿ 75 ಟಿಕೆಟ್​ಗಳನ್ನು ಏಕಕಾಲಕ್ಕೆ ಖದೀರಿಸಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಸಿನಿಮಾ ಬಿಡುಗಡೆಯಾಗುವ 20 ದಿನಗಳ ಮುನ್ನವೇ ಈ ರೀತಿ ಟಿಕೆಟ್​ಗಳು ಸೇಲ್ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. 
ಇನ್ನೂ, ಆ ಅಭಿಮಾನಿಯೊಬ್ಬರು ಖರೀದಿಸಿದ ಟಿಕೆಟ್​ಗಳ ಫೋಟೋವನ್ನು ಅವರ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಒಂದು ಘಟನೆ ಸಾಕು, ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ವಿದೇಶದಲ್ಲಿಯೂ ಎಷ್ಟರಮಟ್ಟಿಗೆ ಕ್ರೇಜ್ ಇದೆ ಎಂದು ತಿಳಿಸಲು. ಅಂದಹಾಗೆ, ಇಂಗ್ಲೆಂಡ್​, ಆಸ್ಟ್ರೇಲಿಯಾ, ದುಬೈ ನಂತಹ ಮುಂತಾದ ದೇಶಗಳಲ್ಲೂ ಬುಕಿಂಗ್ ಶುರುವಾಗಿದೆ. ಎಲ್ಲೆಡೆ ಟಿಕೆಟ್ ಸೋಲ್ಡ್ ಔಟ್ ಆಗುತ್ತಿರುವುದು ಸದ್ಯ ಈ ಚಿತ್ರತಂಡಕ್ಕೆ ಕೂಡಾ ಖುಷಿಯಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net