ಈಗಾಗಲೇ ಈ ಚಿತ್ರದ ಹಲವು ಪೋಸ್ಟ್ರ್ಗಳು, ಟೀಸರ್ ಹಾಗೂ ಸಿನಿಮಾದ ಒಂದು ಹಾಡು ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಅಪ್ಪು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮಾರ್ಚ್ 17 ರಂದು ‘ಜೇಮ್ಸ್’ ತೆರೆಗಪ್ಪಳಿಸಲಿದೆ. ಹಾಗಾಗಿ, ಈ ಚಿತ್ರದ ಪ್ರತಿ ಒಂದು ಮಾಹಿತಿ ಅಥವಾ ಅಪ್ಡೇಟ್ ಗೋಸ್ಕರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಇದೀಗ ಒಂದು ಸಿಹಿ ಸುದ್ದಿ. ಅಂದಹಾಗೆ, ‘ಜೇಮ್ಸ್’ ಚಿತ್ರದ ಸೆನ್ಸಾರ್ ಪ್ರಕ್ರಿಯೆಯನ್ನು ಮುಗಿಸಿದ್ದು, ಸಿನಿಮಾದ ದೃಶ್ಯಗಳಲ್ಲಿ ಒಂದೂ ಕಟ್ ಕೂಡಾ ಇಲ್ಲದೆ, U/A ಪ್ರಮಾಣಪತ್ರ ಪಡೆದಿದ್ದು, ವಿಶ್ವದಾದ್ಯಂತ ಅಬ್ಬರಿಸಲು ರೆಡಿಯಾಗಿದ್ದಾರೆ ಅಪ್ಪು.