rose day 2024: ಹೂಗಳ ರಾಣಿ ಪ್ರೇರೇಪಿತ ಬಟ್ಟೆ ಧರಿಸಿದ ಬಾಲಿವುಡ್ ಬೆಡಗಿಯರು..

roseday
Published on

ಮುಂಬೈ: ಪ್ರೇಮಿಗಳ ದಿನಾಚರಣೆಗೆ ವಾರ ಬಾಕಿ ಇದೆ. ಆದರೆ ಈ ವ್ಯಾಲೆಂಟೈನ್ಸ್ ವೀಕ್ ಈಗಾಗಲೇ ಪ್ರಾರಂಭವಾಗಿದೆ, ಪ್ರೇಮ ವಾರದ ಮೊದಲ ದಿನ(ಬುಧವಾರ) ರೋಸ್ ಡೇ ಆಗಿದ್ದು, ಪ್ರೇಮಜ್ವರ ಏರಿಸಿಕೊಂಡವರು ಮತ್ತು ಪ್ರೇಮಿಗಳ ದಿನವನ್ನು ಬಲವಾಗಿ ಪ್ರತಿಪಾದಿಸುವವರು ಗುಲಾಬಿ ದಿನವನ್ನು ತಪ್ಪದೆ ಆಚರಿಸುತ್ತಾರೆ. ಗುಲಾಬಿ ಹೂಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ತಮ್ಮ ಪಾಲುದಾರರಿಗೆ ವ್ಯಕ್ತಪಡಿಸುತ್ತಾರೆ. ತಪ್ಪದೆ ಗುಲಾಬಿ ಬಣ್ಣದ ಬಟ್ಟೆ ಧರಿಸುತ್ತಾರೆ.

ಈ ವಿಶೇಷ ದಿನದಂದು ಯಾವ ಬಾಲಿವುಡ್ ನಟಿಯರು ಗುಲಾಬಿಗಳಿಂದ ಪ್ರೇರಿತವಾದ ಬೆರಗುಗೊಳಿಸುವ ಬಟ್ಟೆಗಳನ್ನು ಧರಿಸಿದ್ದರು ಎಂಬುದನ್ನು ನೋಡೋಣ.

ಬೋಲ್ಡ್​ ಆಗಿ ಬಟ್ಟೆ ಧರಿಸುವ ಸೌಂದರ್ಯದ ಖನಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಗುಲಾಬಿಗಳಿಂದ ಪ್ರೇರಿತವಾದ ಉಡುಪಿನಲ್ಲಿ ಮೋಡಿಮಾಡುವಂತೆ ತೋರುತ್ತಿದ್ದರು. ಅದೇ ರೀತಿ ದೇಶದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ ಭಟ್ ಸಹ ಗುಲಾಬಿಗಳಿಂದ ಪ್ರೇರಿತವಾದ ಬಟ್ಟೆಯನ್ನು ತೊಟ್ಟು, ನೋಡುಗರ ತಲೆ ತಿರುಗುವಂತೆ ಮಾಡಿದ್ದಳು.

ಕೃತಿ ಸನೋನ್ ಗುಲಾಬಿಗಳಿಂದ ಪ್ರೇರಿತವಾದ ಉಡುಪು ಧರಿಸಿ ಕಾಣಿಸಿಕೊಂಡರು, ಇದು ಹೂವುಗಳ ರಾಣಿಯ ಬಗ್ಗೆ ಅವರ ಒಲವನ್ನು ಸಾಬೀತುಪಡಿಸಿತು. ಇನ್ನು ಬಹುಕಾಂತೀಯ ಗುಲಾಬಿ ಲೆಹೆಂಗಾವನ್ನು ಧರಿಸಿದ್ದ ದೀಪಿಕಾ ಪಡುಕೋಣೆ ಎಲ್ಲರನ್ನೂ ಬೆರಗುಗೊಳಿಸಿದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಸುಂದರವಾದ ಗುಲಾಬಿ ಉಡುಗೆಯಲ್ಲಿ ಸಿನಿಪ್ರೇಮಿಗಳ ಮನಸೂರೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net