More

    ರಜನಿಕಾಂತ್ ಸಂಭಾವನೆ ನಿಮಿಷಕ್ಕೆ 1 ಕೋಟಿ ರೂಪಾಯಿ?: ವಿವರ ಇಲ್ಲಿದೆ ನೋಡಿ..

    ಚೆನ್ನೈ: ಭಾರತೀಯ ನಟರಲ್ಲಿ ಹೆಚ್ಚು ಸಂಭಾವನೆ ಪಡೆಯುವರಲ್ಲಿ ಇವರೂ ಒಬ್ಬರು. 72 ವರ್ಷದ ಇಳಿವಯಸ್ಸಿನಲ್ಲೂ ನಿಮಿಷಕ್ಕೆ 1 ಕೋಟಿ ರೂ. ಪಡೆಯುತ್ತಿದ್ದಾರೆ ಈ ಮಹಾನ್​ ನಟ. ಇಷ್ಟಕ್ಕೂ ಆ ನಟ ಯಾರೆಂದುಕೊಂಡಿರಿ? ಅವರು ಬೇರಾರೂ ಅಲ್ಲ, ನಮ್ಮ ಕರ್ನಾಟಕದವರೇ ಆದ ತಮಿಳಿನಲ್ಲಿ ಸರಿಸಾಟಿಯಿಲ್ಲದೆ ಮಿಂಚುತ್ತಿರುವ ಸೂಪರ್​ ಸ್ಟಾರ್​ ರಜನಿ ಕಾಂತ್​.

    ಇದನ್ನೂ ಓದಿ: ‘ಗೇಟ್‌ವೇ ಆಫ್ ಇಂಡಿಯಾ’ಬಳಿ ಬೋಟ್​ ಪ್ರತ್ಯಕ್ಷ: ಸಮುದ್ರ ಗಸ್ತು ಪಡೆ ಕಣ್ತಪ್ಪಿಸಿ ಬಂದಿದ್ದರ ಹಿಂದೆ ಕಾರಣ ಹೀಗಿದೆ ನೋಡಿ..

    ಆರಂಭದಲ್ಲಿ ಖಳನಾಯಕನಾಗಿ ನಟಿಸಿ ಈಗ ಸೂಪರ್‌ಸ್ಟಾರ್‌ ಆಗಿರುವುದು ಸಾಮಾನ್ಯ ಸಂಗತಿಯೇನಲ್ಲ. ಇದು ಅವರ ಕಥೆ, ಮತ್ತು ಅವರು ತಮ್ಮ ಸ್ಟಾರ್‌ಡಮ್ ಅನ್ನು ಹೇಗೆ ಬಳಸಿಕೊಂಡರು ಮತ್ತು ನಿಮಿಷಕ್ಕೆ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬುದರ ವಿವರ ಇಲ್ಲಿದೆ.

    ಹೌದು ರಜನಿಕಾಂತ್​ ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಬಿಎಂಟಿಸಿಯಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಅದಕ್ಕೂ ಮೊದಲು ಕೂಲಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ತಮ್ಮ ಪರಿಶ್ರಮದಿಂದಲೇ ಒಂದೊಂದೇ ಹೆಜ್ಜೆಯಿಟ್ಟು ಮೇಲೆ ಬಂದ ಈ ನಟ ಚಲನಚಿತ್ರಗಳಲ್ಲಿ ನಿಮಿಷಕ್ಕೆ 1 ಕೋಟಿ ರೂ. ಪಡೆಯುತ್ತಿದ್ದಾರೆ.

    ಮಧ್ಯಮ ವರ್ಗದಲ್ಲಿ ಹುಟ್ಟಿ ಹಣವಿಲ್ಲದೆ, ಕೂಲಿ ಮತ್ತು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿ, ಮರಾಠಿ ಮನೆಮಾತಾದರೂ, ಕನ್ನಡ ಉಸಿರಾಗಿಸಿಕೊಂಡಿದ್ದವರು ರಜನಿ. ಕನ್ನಡದ ಜತೆಗೆ ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ದರಿಂದ ಅಲ್ಲಿ ಮೇರುನಟರಾಗಿ ಮೆರೆಯುತ್ತಿದ್ದಾರೆ. ದಕ್ಷಿಣದ ಎಲ್ಲ ರಾಜ್ಯಗಳಲ್ಲೂ ಅಷ್ಟೇಕೆ ದೇಶ, ವಿದೇಶಗಳಲ್ಲೂ ರಜನಿ ಚಿತ್ರಗಳು ಬಾಕ್ಸ್​ ಆಫೀಸಿನಲ್ಲಿ ಧೂಳೆಬ್ಬಿಸುತ್ತವೆ.

    ನಿಮಿಷಕ್ಕೆ 1 ಕೋಟಿ ಯಾವ ಚಿತ್ರೂರಕ್ಪಾಕೆ?: ಪ್ಯಾನ್​ ಇಂಡಿಯಾ ಸಿನಿಮಾವಾಗಿ ತೆರೆಗೆ ಬರಲಿರುವ ‘ಲಾಲ್ ಸಲಾಮ್‌’ನಲ್ಲಿ
    ರಜನಿ ಕಾಂತ್​ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದಕ್ಕೆ ಅವರು ಬರೋಬ್ಬರಿ 40 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ರಜನಿ ಕೇವಲ 30-40 ನಿಮಿಷ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ, ಅಂದರೆ ಅವರ ಸಂಭಾವನೆ ನಿಮಿಷಕ್ಕೆ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಬರುತ್ತದೆ. ಇದು ಭಾರತೀಯ ನಟರು ತೆಗೆದುಕೊಂಡ ಅತ್ಯಧಿಕ ಸಂಭಾವನೆಗಳಲ್ಲಿ ಒಂದಾಗಿದೆ.

    ಕಪ್ಪು ಮೈಬಣ್ಣಕ್ಕಾಗಿ ತಿರಸ್ಕೃತರಾಗಿದ್ದರು: ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ರಜನಿಕಾಂತ್ ಕಪ್ಪು ಮೈಬಣ್ಣಕಾರಣದಿಂದ ಅನೇಕ ನಿರ್ಮಾಪಕರು ಅವರನ್ನು ನಾಯಕನಾಗಿ ನಟಿಸಲು ಅವಕಾಶ ನೀಡಿರಲಿಲ್ಲ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದ ವರು 1975 ರಲ್ಲಿ ಅಪೂರ್ವ ರಾಗಂಗಳ್​ ತಮಿಳು ಚಿತ್ರದಲ್ಲಿ ನಾಯಕನಾಗಿ ನಟಿಸುವುದಕ್ಕೂ ಮೊದಲು ಕೆಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು.

    viral video: ಇಲ್ಲಿ ಭಾರತದ ರಸ್ತೆ ಎಂಡ್​ ಆಗುತ್ತೆ..ನೆಟ್ಟಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ವೈಮಾನಿಕ ನೋಟದ ವೀಡಿಯೋ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts