More

    viral video: ಇಲ್ಲಿ ಭಾರತದ ರಸ್ತೆ ಎಂಡ್​ ಆಗುತ್ತೆ..ನೆಟ್ಟಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ವೈಮಾನಿಕ ನೋಟದ ವೀಡಿಯೋ..

    ನವದೆಹಲಿ: ತಮಿಳುನಾಡಿನ ಧನುಷ್ಕೋಡಿಯಲ್ಲಿ ಭಾರತದ ರಸ್ತೆ ಸಮುದ್ರದಲ್ಲಿ ಕೊನೆಗೊಳ್ಳುವ ವೈಮಾನಿಕ ನೋಟದ ವೀಡಿಯೋ ಇಂಟರ್ನೆಟ್ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.

    ಇದನ್ನೂ ಓದಿ: ‘ಗೇಟ್‌ವೇ ಆಫ್ ಇಂಡಿಯಾ’ಬಳಿ ಬೋಟ್​ ಪ್ರತ್ಯಕ್ಷ: ಸಮುದ್ರ ಗಸ್ತು ಪಡೆ ಕಣ್ತಪ್ಪಿಸಿ ಬಂದಿದ್ದರ ಹಿಂದೆ ಕಾರಣ ಹೀಗಿದೆ ನೋಡಿ..

    ಭಾರತ ಸರ್ಕಾರದ ಅಧಿಕೃತ ‘X’ (ಟ್ವಿಟರ್) ಪುಟವು ಇತ್ತೀಚೆಗೆ ತಮಿಳುನಾಡಿನ ಧನುಷ್ಕೋಡಿಯ ಕೊನೆಯ ರಸ್ತೆಯ ವೈಮಾನಿಕ ವೀಡಿಯೊವನ್ನು ಹಂಚಿಕೊಂಡಿದೆ, ಸೌಂದರ್ಯೋಪಾಸಕರನ್ನಷ್ಟೇ ಅಲ್ಲದೆ ಎಂಥವರನ್ನೂ ಮೋಡಿಮಾಡುವ ಈ ವೈಮಾನಿಕ ವೀಡಿಯೊವನ್ನು ತಿರುಮಲ ಸಂಚಾರಿ ಅವರು ಕೌಶಲ್ಯದಿಂದ ಸೆರೆಹಿಡಿದಿದ್ದರು. ಈ ವೀಡಿಯೋ ತುಣುಕನ್ನು ದಕ್ಷಿಣ ಭಾರತದ ಕೊನೆಯ ರಸ್ತೆ ಎಂದು ಟ್ಯಾಗ್​ ಮಾಡಿ ಹಾಕಲಾಗಿದ್ದು, ಮೈ ರೋಮಾಂಚನಗೊಳಿಸುವ ಮಾರ್ಗದ ನೋಟ ಲಕ್ಷಾಂತರ ಜನರ ಹೃದಯ ಗೆದ್ದಿದೆ.

    ರಸ್ತೆಯ ನೋಟಕ್ಕೆ “ಉಸಿರು ಕಟ್ಟುವ ಸೌಂದರ್ಯವನ್ನು ನೋಡು” ಎಂದು ಶೀರ್ಷಿಕೆ ನೀಡಿದ್ದು, ವೀಕ್ಷಕರು ಫಿದಾ ಆಗಿದ್ದಾರೆ. ವೀಕ್ಷಕರಿಂದ ಪ್ರತಿಕ್ರಿಯೆಯು ಧನಾತ್ಮಕವಾಗಿ ಬರುತ್ತಿದೆ. ಅನೇಕರು ಬೆರಗುಗೊಳಿಸುವ ಭೂದೃಶ್ಯದ ಬಗ್ಗೆ ‘ವಿಸ್ಮಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ‘X’ ನಲ್ಲಿನ ಒಬ್ಬ ವೀಕ್ಷಕ, ರಸ್ತೆಯ ನೋಟವನ್ನು “ಭವ್ಯವಾದ ಶಿವಲಿಂಗಕ್ಕೆ” ಹೋಲಿಸಿದ್ದಾರೆ. “ಹರ್ ಹರ್ ಮಹಾದೇವ್” ಎಂಬ ಪದಗುಚ್ಛವನ್ನು ಸಹ ಆಹ್ವಾನಿಸಿದ್ದಾರೆ. ಮತ್ತೊಬ್ಬರು ಪ್ರಾಚೀನ ಪ್ರದೇಶವನ್ನು ಸಂರಕ್ಷಿಸಲು ಸಣ್ಣ ಎಲೆಕ್ಟ್ರಿಕ್ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಮೇಲೆ ನಿಷೇಧವನ್ನು ಜಾರಿಗೆ ತರಲು ಸಲಹೆ ನೀಡಿದ್ದಾರೆ.

    ಕ್ಯಾಮೆರಾದ ಹಿಂದಿನ ವ್ಯಕ್ತಿ ತಿರುಮಲ ಸಂಚಾರಿಗೆ ಮತ್ತು ವೀಡಿಯೊವನ್ನು ಬೆಂಬಲಿಸಿದ್ದಕ್ಕೆ ಸರ್ಕಾರಕ್ಕೆ ಹಲವರು ಕೃತಜ್ಞತೆ ಸಲ್ಲಿಸಿದ್ದಾರೆ. ತನ್ನ ಪ್ರಾಕೃತಿಕ ವೈಭವಕ್ಕೆ ಹೆಸರುವಾಸಿಯಾಗಿರುವ ಧನುಷ್ಕೋಡಿಯು ದೇಶದ ಅತ್ಯಂತ ಸುಂದರವಾದ ಮತ್ತು ಅಪ್ರತಿಮ ಸ್ಥಳಗಳಲ್ಲಿ ಒಂದಾಗಿದೆ ಎಂದು ಹಲವರು ಬಣ್ಣಿಸಿದ್ದಾರೆ.

    ಧನುಷ್ಕೋಡಿಯ ಈ ರಸ್ತೆಯಿಂದ ಶ್ರೀಲಂಕಾ ಕೇವಲ 18 ಕಿಮೀ ದೂರದಲ್ಲಿದೆ, ಇದು ಭಾರತದ ದಕ್ಷಿಣದ ತುದಿಯನ್ನು ಗುರುತಿಸುತ್ತದೆ. ಪ್ರವಾಸಿಗರು ರಾಮೇಶ್ವರಂನಿಂದ ನಾಲ್ಕು ಚಕ್ರ ವಾಹನಗಳು ಅಥವಾ ಸ್ಥಳೀಯ ಆಟೋಗಳನ್ನು ಬಳಸಿಕೊಂಡು ಇಲ್ಲಿಗೆ ತಲುಪಬಹುದು. ಅಂತಿಮವಾಗಿ ರಾಮ್ ಸೇತು (ಆಡಮ್ಸ್ ಸೇತುವೆ) ಯನ್ನು ತಲುಪಬಹುದು, ಅಲ್ಲಿ ಬಂಗಾಳ ಕೊಲ್ಲಿಯು ಹಿಂದೂ ಮಹಾಸಾಗರವನ್ನು ಸಂಧಿಸುತ್ತದೆ. ಅದೇ ರೀತಿ ತಮಿಳುನಾಡಿನ ಮುಖ್ಯ ಭೂಭಾಗ ಪಂಬನ್ ಸೇತುವೆಯ ಮೂಲಕ ರಾಮೇಶ್ವರಂ-ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ರಮಣೀಯ ರೈಲು ಪ್ರಯಾಣ ಸಹ ಮಾಡಬಹುದಾಗಿದೆ.

    ಯುಪಿಐ ಪಾವತಿ ಸ್ಥಗಿತ: ಬ್ಯಾಂಕ್​ಗಳಲ್ಲೂ ಗ್ರಾಹಕರ ಪರದಾಟ.. ಕಾರಣ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts