ಯುಪಿಐ ಪಾವತಿ ಸ್ಥಗಿತ: ಬ್ಯಾಂಕ್​ಗಳಲ್ಲೂ ಗ್ರಾಹಕರ ಪರದಾಟ.. ಕಾರಣ ಏನು?

upi
Published on

ನವದೆಹಲಿ: ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಬಳಕೆದಾರರು ತೊಂದರೆಯಲ್ಲಿದ್ದಾರೆ. ಅನೇಕರಿಗೆ ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಫೋನ್​ಪೇ, ಗೂಗಲ್​ ಪೇ, ಪೇಟಿಎಂ ಸೇರಿದಂತೆ ಅಪ್ಲಿಕೇಶನ್‌ನಲ್ಲಿನ ಯುಪಿಐ ಸೇವೆಗಳು ಸ್ಥಗಿತಗೊಂಡಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪೋಸ್ಟ್ ಮಾಡಿದ್ದಾರೆ.

ಯುಪಿಐ ಪಾವತಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಹಲವರು ಹೇಳಿದ್ದಾರೆ. ಇನ್ನು ಇವಿಷ್ಟೇ ಅಲ್ಲ, ಹಲವು ಬ್ಯಾಂಕ್ ಗಳ ಗ್ರಾಹಕರು ಬ್ಯಾಂಕ್ ಸೇವೆಗಳು ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡಿದ್ದಾರೆ. ಎಸ್‌ಬಿಐ, ಬ್ಯಾಂಕ್ ಮತ್ತು ಇತರ ಕೆಲವು ಬ್ಯಾಂಕ್‌ಗಳ ಗ್ರಾಹಕರು ಯುಪಿಐ ಸೇವೆಗಳನ್ನು ಪಡೆಯುವುದನ್ನು ನಿಲ್ಲಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1ಗಂಟೆಯಿಂದ ಸಂಜೆ 6 ಗಂಟೆ ತನಕ ಪೇಟಿಎಂ ನಂತಹ ಅಪ್ಲಿಕೇಶನ್‌ಗಳನ್ನು ಬಳಸುವಲ್ಲಿ ಅವರು ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಅವರ ಪೋಸ್ಟ್‌ಗಳಿಂದ ತಿಳಿದು ಬಂದಿದೆ. ಸರ್ವರ್ ಸಂಬಂಧಿತ ಸಮಸ್ಯೆಗಳನ್ನು ಸಹ ಉಲ್ಲೇಖಿಸಲಾಗಿದೆ. 'ಡೌನ್‌ಟೆಕ್ಟರ್' ಕಂಪನಿಯ ಪ್ರಕಾರ, ಎಚ್​ಎಎಫ್​ಸಿ, ಎಸ್​ಬಿಐ, ಬ್ಯಾಂಕ್ ಆಫ್ ಬರೋಡಾ ಮುಂತಾದ ಬ್ಯಾಂಕ್‌ಗಳ ಗ್ರಾಹಕರಿಂದ ಹಣ ವರ್ಗಾವಣೆ, ಮೊಬೈಲ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ದೂರುಗಳನ್ನು ದಾಖಲಿಸಲಾಗಿದೆ.

ಬಹಳ ಸಮಯದ ನಂತರ ಯುಪಿಐ ಸೇವೆಗಳು ಮತ್ತೆ ಪ್ರಾರಂಭವಾಗಿವೆ. ಆದಾಗ್ಯೂ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಸಿಪಿಐ) ಯುಪಿಐ ಸೇವೆಗಳ ಅಮಾನತಿಗೆ ಪ್ರತಿಕ್ರಿಯಿಸಿದೆ. ಮಂಗಳವಾರ ಸಂಜೆ ಹಲವಾರು ಬ್ಯಾಂಕ್‌ಗಳ ವ್ಯವಸ್ಥೆಯಲ್ಲಿನ ದೋಷಗಳಿಂದ ಯುಪಿಐ ಪಾವತಿಗಳು ಪರಿಣಾಮ ಬೀರಿವೆ ಎಂದು ಅದು ಹೇಳಿದೆ. ಈ ವೇಳೆ ಹಣ ವರ್ಗಾವಣೆ ಮಾಡುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಿದೆ. ಬಳಕೆದಾರರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಅದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net