More

    ಅನಿಲ್​ ಕುಂಬ್ಳೆ ಸಾಧನೆಗೆ 25 ವರ್ಷ; ಜಂಬೋ ಬಿರುಗಾಳಿಗೆ ಧೂಳಿಪಟವಾಗಿತ್ತು ಪಾಕಿಸ್ತಾನ

    ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಸ್ಪಿನ್ ಬೌಲರ್‌ಗಳು ಇದ್ದಾರೆ. ಆದರೆ ಇಲ್ಲಿಯವರೆಗೆ ಯಾರೂ ಅನಿಲ್ ಕುಂಬ್ಳೆಯಷ್ಟು ಅದ್ಭುತಗಳನ್ನು ಮಾಡಲು ಸಾಧ್ಯವಾಗಿಲ್ಲ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ಸ್ಪಿನ್ನರ್ ಅನಿಲ್ ಕುಂಬ್ಳೆ 25 ವರ್ಷಗಳ ಹಿಂದೆ ಇದೇ ದಿನದಂದು ವಿಶ್ವದಾಖಲೆ ಮಾಡಿದ್ದರು. ದೆಹಲಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿದ್ದರು.

    ಫೆಬ್ರವರಿ 7, 1999 ರಂದು ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಆ ಬಳಿಕ ಭಾರತದ ಯಾವ ಬೌಲರ್‌ಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ ಆ ಸಮಯದಲ್ಲಿ ಅವರು ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಆದರು. ಇಡೀ ಪಾಕಿಸ್ತಾನ ತಂಡವನ್ನು ಏಕಾಂಗಿಯಾಗಿ ಪೆವಿಲಿಯನ್ ಗೆ ಕಳುಹಿಸುವ ಮೂಲಕ ಕುಂಬ್ಳೆ ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ್ದರು.

    1999 ರಲ್ಲಿ ಪಾಕಿಸ್ತಾನ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಭೇಟಿ ನೀಡಿತು. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆದಿತ್ತು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ 12 ರನ್‌ಗಳಿಂದ ಸೋಲನುಭವಿಸಿತ್ತು. ಈ ಸಮಯದಲ್ಲಿ ಸರಣಿ ಸಮಬಲಗೊಳಿಸಲು ಟೀಂ ಇಂಡಿಯಾ ದೆಹಲಿ ಟೆಸ್ಟ್‌ನಲ್ಲಿ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇ ಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪಾಕಿಸ್ತಾನದ ಬಿಗಿ ಬೌಲಿಂಗ್ ದಾಳಿ ಎದುರು 252 ರನ್ ಗಳಿಸಲಷ್ಟೇ ಶಕ್ತವಾಯಿತು. ನಂತರ ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಸ್ಪಿನ್ನರ್ ಅನಿಲ್ ಕುಂಬ್ಳೆ ಎದುರಾಳಿಗಳನ್ನು 172 ರನ್​​​ಗಳಿಗೆ ಆಲ್ ಔಟ್ ಮಾಡಿದರು. ಈ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ದೆಹಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 339 ರನ್ ಗಳಿಸಿ ಪಾಕಿಸ್ತಾನಕ್ಕೆ 420 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.

    ಏಕಾಂಗಿಯಾಗಿ ಪಾಕಿಸ್ತಾನ ಸೋಲಿಸಿದ ಅನಿಲ್ ಕುಂಬ್ಳೆ 
    ಭಾರತ ನೀಡಿದ 420 ರನ್‌ಗಳ ಗುರಿಗೆ ಉತ್ತರವಾಗಿ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 100 ರನ್‌ಗಳ ಗಡಿ ದಾಟಿತ್ತು. ಒಂದು ಬಾರಿ ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಸ್ಕೋರ್ ಯಾವುದೇ ವಿಕೆಟ್ ಇಲ್ಲದೆ 101 ರನ್ ಆಗಿತ್ತು. ಆದರೆ ನಂತರ 101 ರನ್‌ಗಳ ಮೊತ್ತದಲ್ಲಿ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನಕ್ಕೆ ಮೊದಲ ಹೊಡೆತ ನೀಡಿದರು. ನಂತರ ಸ್ವಲ್ಪ ಸಮಯದಲ್ಲೇ ಕುಂಬ್ಳೆ ಅವರ ಮಾಂತ್ರಿಕ ಸ್ಪಿನ್ ಮುಂದೆ ಪಾಕ್ ಬ್ಯಾಟ್ಸ್‌ಮನ್‌ಗಳು ‘ತು ಚಲ್ ಮೈನ್ ಆಯಾ’ ಎಂಬಂತೆ ಪೆವಿಲಿಯನ್‌ಗೆ ಮರಳುತ್ತಲೇ ಇದ್ದರು. ಮೊದಲ ವಿಕೆಟ್ 101 ರನ್‌ಗೆ ಪತನಗೊಂಡಿತು ಮತ್ತು ಇಡೀ ಪಾಕಿಸ್ತಾನ ತಂಡ 207 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ ಈ ಟೆಸ್ಟ್ ಪಂದ್ಯವನ್ನು 212 ರನ್‌ಗಳಿಂದ ಗೆದ್ದುಕೊಂಡಿತು. ಅನಿಲ್ ಕುಂಬ್ಳೆ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು, 26.3 ಓವರ್‌ಗಳಲ್ಲಿ 74 ರನ್‌ಗಳಿಗೆ 10 ವಿಕೆಟ್ ಪಡೆದರು. ಜಿಮ್ ಲೇಕರ್ ನಂತರ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾದರು.

    ಪೇಪರ್ ನೋಟುಗಳು ಬದಲಾಗುತ್ತವೆಯೇ, ಪ್ಲಾಸ್ಟಿಕ್ ನೋಟುಗಳು ಬರುತ್ತವೆಯೇ?: ಉತ್ತರ ಕೊಟ್ಟ ಹಣಕಾಸು ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts