ಟಿ-ಶರ್ಟ್ ಮೇಲೆ ‘ರಾಬರ್ಟ್’ ... ಹೇಗಿದೆ ನೋಡಿ ದರ್ಶನ್ ಹವಾ!

Robert Shirts Final
Published on

ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಹೊಸ ಪೋಸ್ಟರ್ ಸೋಮವಾರವಷ್ಟೇ ಬಿಡುಗಡೆಯಾಗಿದೆ. ರಂಜಾನ್ ಪ್ರಯುಕ್ತ ಈ ಹೊಸ ಪೋಸ್ಟರ್‌ನ್ನು ದರ್ಶನ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಬಿಡುಗಡೆ ಮಾಡಿದ್ದಾರೆ.

ಈ ಹೊಸ ಪೋಸ್ಟರ್ ಬಿಡುಗಡೆಯಾದ ಸ್ವಲ್ಪ ಹೊತ್ತಲೇ ಸಾಕಷ್ಟು ಸಂಚಲನ ಮೂಡಿಸಿತ್ತು. ಚಂದನವನದ ಹಲವು ನಿರ್ದೇಶಕರು ಮತ್ತು ನಟರು, ಪೋಸ್ಟರ್ ಮೂಡಿ ಬಂದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ರಾಬರ್ಟ್’ ಚಿತ್ರದ ಈ ಹೊಸ ಪೋಸ್ಟರ್‌ನ ಕ್ರೇಜ್ ಹೇಗಿದೆ ಎಂದರೆ, ದರ್ಶನ್ ಅಭಿಮಾನಿಗಳು ಈಗ ಟಿ-ಶರ್ಟ್ ತಂದಿದ್ದಾರೆ.

ಹೌದು, ದರ್ಶನ್ ಅಭಿಮಾನಿಗಳು ಇದೀಗ ‘ರಾಬರ್ಟ್’ ಚಿತ್ರದ ಟಿ-ಶರ್ಟ್‌ಗಳನ್ನು ಹೊರತಂದಿದ್ದಾರೆ. ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳು ಗುಬ್ಬಿ, ಫ್ಯಾನ್​ ಪೇಜ್​ನಲ್ಲಿ ಈ ಶರ್ಟ್‌ನ ಬಗ್ಗೆ ಜಾಹೀರಾತು ಸಹ ನೀಡಲಾಗಿದೆ. ಒಂದು ಟಿ-ಶರ್ಟ್‌ನ ಬೆಲೆ 250 ರೂ.ಗಳಾದರೆ, ಮೂರು ಟಿ-ಶರ್ಟ್‌ಗಳನ್ನು 600 ರೂ.ಗಳಿಗೆ ಮಾರಲಾಗುತ್ತಿದೆಯಂತೆ.

ವಿಶೇಷವೆಂದರೆ, ಈ ಕುರಿತು ಚಿತ್ರತಂಡದವರಿಗೇ ಮಾಹಿತಿ ಇಲ್ಲ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ‘ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲವರು ಅಭಿಮಾನದಿಂದ ಹೀಗೆ ಮಾಡಿರಬಹುದು’ ಎನ್ನುತ್ತಾರೆ.

ಒಟ್ಟಾರೆ, ‘ರಾಬರ್ಟ್’ ಚಿತ್ರದ ಕ್ರೇಜ್ ಜೋರಾಗಿದ್ದು, ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನ ರದ್ದಾಗಿರುವುದರಿಂದ, ಬಹುಶಃ ಆಗಸ್ಟ್ ನಂತರ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ಜತೆಗೆ ವಿನೋದ್ ಪ್ರಭಾಕರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಈಗಾಗಲೇ ‘ಶ್ರೀರಾಮ್ ...’ ಹಾಡು ಸೂಪರ್ ಹಿಟ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net