More

    ಅಂಥದ್ದೊಂದು ಪ್ರಯತ್ನ ಕನ್ನಡದಲ್ಲಿ ಆಗಲೇ ಆಗಿತ್ತು!

    ಒಂದು ಹಾಡು ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಮೊದಲಿಗೆ ರಿಹರ್ಸಲ್ ಮಾಡಬೇಕು. ಸೂಕ್ತ ಲೈಟಿಂಗ್ ಮಾಡಿಕೊಳ್ಳಬೇಕು. ನಂತರ ಎಲ್ಲರ ಸಹಕಾರದಿಂದ ಒಂದು ಹಾಡನ್ನು ಚಿತ್ರೀಕರಣ ಮಾಡಬಹುದು. ಹಾಗಾಗಿ ಬೇರೆ ದೃಶ್ಯಗಳಿಗೆ ಹೋಲಿಸಿದರೆ, ಹಾಡು ಶೂಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂಬ ನಂಬಿಕೆ ಚಿತ್ರರಂಗದಲ್ಲಿದೆ.

    ಇದರ ಮಧ್ಯೆಯೂ, ಒಂದು ಇಡೀ ಹಾಡನ್ನು ಒಂದೇ ಬಾರಿಗೆ ಶೂಟ್ ಮಾಡುವ ಪರಿಪಾಠ ಹಲವು ವರ್ಷಗಳಿಂದ ಇದ್ದೇ ಇದೆ. ಇದಕ್ಕೇ ಅತ್ಯುತ್ತಮ ಉದಾಹರಣೆ ಎಂದರೆ, ‘ಮೈ ಹೂಂ ನಾ’ ಚಿತ್ರದ ‘ಚಲೆ ಜೈಸೇ ಹವಾಯೇನ್ …’ ಹಾಡು. ಇದಕ್ಕೂ ಮುನ್ನ, ‘ಆರಾಧನಾ’ ಚಿತ್ರದ ‘ರೂಪ್ ತೇರಾ ಮಸ್ತಾನಾ …’ ಹಾಡು ಸಹ ಯಾವುದೇ ಕಟ್‌ಗಳಿಲ್ಲದೇ, ಒಂದೇ ಟೇಕ್‌ನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೆ, ಇದೆಲ್ಲಕ್ಕೂ ಮುನ್ನವೇ ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನ ಆಗಿದ್ದ ವಿಷಯ ಗೊತ್ತಾ?

    ಇದನ್ನೂ ಓದಿ: ಐಶ್ವರ್ಯಾ ಚಿತ್ರರಂಗಕ್ಕೆ ಬರಬಾರದು ಅಂತ ಸಂಜಯ್ ದತ್ ಆಸೆಪಟ್ಟಿದ್ದೇಕೆ?

    ಹೌದು, 1969ರಲ್ಲಿ ಬಿಡುಗಡೆಯಾದ ‘ಆರಾಧನಾ’ ಚಿತ್ರದಲ್ಲಿ ಈ ಪ್ರಯತ್ನವಾದರೆ, ಅದಕ್ಕೂ 15 ವರ್ಷಗಳ ಮುನ್ನ ಬಿಡುಗಡೆಯಾಗಿದ್ದ ಡಾ. ರಾಜಕುಮಾರ್ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಇಂಥದ್ದೊಂದು ಪ್ರಯತ್ನ ಆಗಿದ್ದು ವಿಶೇಷ. ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ‘ವಿಧಿ ಗೈದ’ ಎಂಬ ಮೂರು ನಿಮಿಷದ ಒಂದು ಹಾಡನ್ನು, ಆರಂಭದಿಂದ ಕೊನೆಯವರೆಗೂ ಒಂದೇ ಟೇಕ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎವಿಎಂ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಗುಡಿಸಿಲಿನ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿತ್ತಂತೆ. ಈ ಹಾಡಿನಲ್ಲಿ ಪಂಢರಿಬಾಯಿಯವರು ನಟಿಸಿದ್ದಾರೆ.

    ಇದನ್ನೂ ಓದಿ: ದರ್ಶನ್​ ಅಭಿಮಾನಿಗಳಿಗೆ ಸಿಗ್ತು ಹೊಸ ಗಿಫ್ಟ್​!

    ಈ ಕುರಿತು ಮಾತನಾಡುವ ಹಿರಿಯ ಛಾಯಾಗ್ರಾಹಕ ಜಿ.ಎಸ್. ಬಸವರಾಜ್, ‘ಈ ಹಾಡನ್ನು 1953ರ ಆಸುಪಾಸಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ಹಾಡನ್ನು ಸೆರೆಹಿಡಿದವರು ಮಾರುತಿ ರಾವ್ ಪವಾರ್. ಮಾರುತಿ ರಾವ್ ಅವರು ಆ ನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಪಡುವಾರಳ್ಳಿ ಪಾಂಡವರು’, ‘ರಂಗನಾಯಕಿ’ ಮುಂತಾದ ಚಿತ್ರಗಳ ಛಾಯಾಗ್ರಹಣವನ್ನೂ ಮಾಡಿದ್ದರು. 50ರ ದಶಕದಲ್ಲೇ ಕನ್ನಡದಲ್ಲಿ ಇಂಥದ್ದೊಂದು ಪ್ರಯೋಗ ಮಾಡಲಾಗಿತ್ತು. ಅದಕ್ಕೂ ಮುನ್ನ ಈ ತರಹದ್ದೊಂದು ಪ್ರಯತ್ನ ಎಲ್ಲೂ ಆದ ನೆನಪಿಲ್ಲ. ಆದರೆ, ಇಂಥದ್ದೊಂದು ಪ್ರಯೋಗದ ಬಗ್ಗೆ ಹೆಚ್ಚು ಸುದ್ದಿಯಾಗಲಿಲ್ಲ’ ಎನ್ನುತ್ತಾರೆ.

    ಈಗ ಹೊಸ ತಂತ್ರಜ್ಞಾನದಿಂದ ಯಾವುದೇ ಕಟ್‌ಗಳಿಲ್ಲದೆ, ಒಂದೇ ಟೇಕ್‌ನಲ್ಲಿ ಚಿತ್ರೀಕರಣ ಮಾಡುವುದು ದೊಡ್ಡ ವಿಷಯವಲ್ಲ. ಆದರೆ, ಇಂಥದ್ದೊಂದು ಪ್ರಯತ್ನ ಕನ್ನಡದಲ್ಲಿ 50ರ ದಶಕದಲ್ಲೇ ಆಗಿತ್ತು ಎನ್ನುವುದು ವಿಶೇಷ.

    ಪಾಪ.. ದೀಪಿಕಾ ಆಸೆಯನ್ನು ಪತಿ ರಣವೀರ್​ ಸಿಂಗ್​ ಇನ್ನೂ ಈಡೇರಿಸಿಲ್ಲವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts