More

  ಡೀಸೆಲ್ ಕದಿಯಲು ಹೋಗಿ ಪ್ರಾಣ ಕಳೆದುಕೊಂಡ ಕಳ್ಳ!

  ಬೆಂಗಳೂರು: ಅಪರಾತ್ರಿ ವೇಳೆ ಕಳ್ಳತನ ಮಾಡಲು ಹೋಗಿ ಈತ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಮಧ್ಯರಾತ್ರಿ ಡೀಸೆಲ್ ಕದಿಯಲು ಬಂದ ಇಬ್ಬರಲ್ಲಿ ಓರ್ಬ ಕೊಲೆಯಾಗಿ ಹೋಗಿದ್ದಾನೆ.

  ಈ ಘಟನೆ ಹೊಸಕೋಟೆ ಹೊರವಲಯದ ಮಾಲೂರು ರಸ್ತೆಯಲ್ಲಿ ನಡೆದಿದ್ದು ಡೀಸೆಲ್ ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಚಾಲಕರು ಹಿಡಿದಿದ್ದಾರೆ. ಈ‌ ವೇಳೆ ಸೆರೆ ಸಿಕ್ಕವರ ಮೇಲೆ ಲಾರಿ ಚಾಲಕರು ಹಲ್ಲೆ ನಡೆಸಿದ್ದು ಈ ವೇಳೆ ಓರ್ವ ಕಳ್ಳ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ.ಡೀಸೆಲ್ ಕದಿಯಲು ಹೋಗಿ ಪ್ರಾಣ ಕಳೆದುಕೊಂಡ ಕಳ್ಳ!

  ಚಾಲಕರು ಮರ್ತೋರ್ವ ಕಳ್ಳನನ್ನು ಪೊಲೀಸರ ವಶಕ್ಕೆ‌ ನೀಡಿದ್ದು ಮೃತ ಕಳ್ಳನ ಮೃತದೇಹ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts