More

    ಗುರುವಿನ ರಥವನೆಳೆದ ಭಕ್ತಜನ

    ಚಿಂಚೋಳಿ: ಪವಾಡ ಪುರುಷ, ಸದ್ಗುರು ಶ್ರೀ ಚನ್ನಬಸವ ಶಿವಯೋಗಿಗಳ ೭೩ನೇ ಜಾತ್ರೋತ್ಸವ ನಿಮಿತ್ತ ಮಂಗಳವಾರ ಸಂಜೆ ಅಸಂಖ್ಯಾತ ಭಕ್ತರ ಜೈಘೋಷದೊಂದಿಗೆ ಸಂಭ್ರಮದಿಂದ ರಥೋತ್ಸವ ನೆರವೇರಿತು.

    ಹಾರಕೂಡ ಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಬೆಳಗ್ಗೆ ಶ್ರೀ ಚನ್ನಬಸವ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಮಹಿಳೆಯರು ಗುರುಗಳ ತೊಟ್ಟಿಲೋತ್ಸವ ನೆರವೇರಿಸಿದರು. ಬಳಿಕ ಭಕ್ತರು ನೈವೇದ್ಯ ಸಮರ್ಪಿಸಿದರು.

    ಸಂಜೆ ಹಾರಕೂಡ ಮಠದಿಂದ ಅದ್ದೂರಿ ಮೆರವಣಿಗೆ ಮೂಲಕ ಕಳಸವನ್ನು ಜಾತ್ರಾ ಮೈದಾನಕ್ಕೆ ತರಲಾಯಿತು. ಭಕ್ತರಿಂದ ಭಜನೆ, ಕೀರ್ತನೆ ನೆರವೇರಿತು. ಪುರವಂತರರ ಸಾಹಸಗಳು ಗಮನಸೆಳೆದವು. ಬಳಿಕ ಅದ್ದೂರಿ ರಥೋತ್ಸವಕ್ಕೆ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು. ಅಸಂಖ್ಯಾತ ಭಕ್ತರು ಜೈಘೋಷಗಳೊಂದಿಗೆ ಗುರುವಿನ ರಥವನೆಳೆದರು. ಹಾರಕೂಡ ಚನ್ನಬಸವೇಶ್ವರ ಮಹಾರಾಜ್ ಕೀ ಜೈ… ಚನ್ನವೀರ ಗುರುಗಳಿಗೆ ಜಯವಾಗಲಿ.. ಎಂಬುದು ಸೇರಿ ಹಲವು ಘೋಷಗಳು ಮೊಳಗಿದವು. ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಾಣ್ಯಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

    ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ.ಅವಿನಾಶ ಜಾಧವ್, ಪ್ರಮುಖರಾದ ಸುಭಾಷ ರಾಠೋಡ್, ಸಂಜೀವನ್ ಯಾಕಾಪೂರ, ಡಾ.ವಿಕ್ರಮ ಪಾಟೀಲ್, ಗೌತಮ ಪಾಟೀಲ್, ಸಂತೋಷ ಗಡಂತಿ, ಬಸವರಾಜ ಮಾಲಿ, ಗೋಪಾಲರಾವ ಕಟ್ಟಿಮನಿ, ಜಗನ್ನಾಥ ಕಟ್ಟಿ, ಜಗನ್ನಾಥ ಗುತ್ತೇದಾರ್, ಡಾ.ಬಸವೇಶ ಪಾಟೀಲ್, ಸುಭಾಷ ಸೀಳಿನ್, ವಿರೂಪಾಕ್ಷಪ್ಪ ಯಂಪಳ್ಳಿ, ರಾಜಶೇಖರ ಮಜ್ಜಗಿ, ಸುರೇಶ ದೇಶಪಾಂಡೆ, ಶ್ರೀಮಠದ ಅಪ್ಪಣ್ಣ ಇತರರಿದ್ದರು. ಕರ್ನಾಟಕ ಸೇರಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳ ಅಸಂಖ್ಯಾತ ಭಕ್ತಿ ಪಾಲ್ಗೊಂಡಿದ್ದರು.

    ಬಿಗಿ ಪೊಲೀಸ್ ಬಂದೋಬಸ್ತ್: ಕಲಬುರಗಿ ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಚಿಂಚೋಳಿಯ ಹಾರಕೂಡ ಮಠದ ಜಾತ್ರೋತ್ಸವವೂ ಒಂದಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಸಿಪಿಐ ಎಚ್.ಎಲ್.ಗೌಂಡಿ, ಪಿಎಸ್‌ಐ ಸಿದ್ಧೇಶ್ವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಜಾತ್ರಾ ಮೈದಾನದಲ್ಲಿ ಜನಜಂಗುಳಿ ಆಗದಂತೆ ಮುನ್ನೆಚ್ಚರಿಕೆ ವಹಿಸಿದರು. ಯಾವುದೇ ಅವಘಡ ಆಗದಂತೆ ಸುಸೂತ್ರವಾಗಿ ಉತ್ಸವ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts