ನವದೆಹಲಿ: ಇದೇ 2023ರ ಅಕ್ಟೋಬರ್ 15ರಂದು ನಡೆಯಲಿರುವ ಭಾರತ V/s ಪಾಕಿಸ್ತಾನ ವಿಶ್ವಕಪ್ ಮೇಲೆ ಇದೀಗ ಕರಾಳ ಛಾಯೆ ಆವರಿಸಿದ್ದು, ಭದ್ರತಾ ಕಾರಣಗಳಿಗೆ ಮುಂದೂಡಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: IND V/s PAK ಕ್ರಿಕೆಟ್ ಪಂದ್ಯದ ಹಿನ್ನೆಲೆ, ಅಹಮದಾಬಾದ್ನ ಆಸ್ಪತ್ರೆಗಳಲ್ಲಿ ಶುರುವಾಯ್ತು ಬೆಡ್ ಬುಕ್ಕಿಂಗ್
ಅಕ್ಟೋಬರ್ 15 ನವರಾತ್ರಿಯ ಮೊದಲ ದಿನವಾಗಿದ್ದು, ಅಂದು ಗುಜರಾತ್‌ನಾದ್ಯಂತ ಆಯೋಜಿಸಲಾದ ಗಾರ್ಬಾ ರಾತ್ರಿಗಳನ್ನು ಬೃಹತ್ ಜನಸಮೂಹವನ್ನು ಆಕರ್ಷಿಸುತ್ತದೆ. ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ ನವರಾತ್ರಿಯ ಕಾರಣ ಕಾರಣ ಪ್ರವಾಸವನ್ನು ಬದಲಾಯಿಸಲು ಸಲಹೆ ನೀಡಿವೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡ-ಹೆಂಡತಿ ನಡುವೆ ಜಗಳ: ಸಮಸ್ಯೆ ಪರಿಹಾರಕ್ಕೆ ಜ್ಯೋತಿಷಿ ಮೊರೆ ಹೋದವರಿಗೆ ಕಾದಿತ್ತು ಶಾಕ್!
“ನಾವು ನಮ್ಮಲ್ಲಿರುವ ಆಯ್ಕೆಗಳನ್ನು ಪರಿಗಣಿಸುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಭಾರತ V/s ಪಾಕಿಸ್ತಾನದಂತಹ ಹೈವೋಲ್ಟೇಜ್ ಪಂದ್ಯಾಟಕ್ಕೆ ಸಾವಿರಾರು ಜನರು ಅಹಮದಾಬಾದ್ ತಲುಪುವ ನಿರೀಕ್ಷೆಯಿದೆ ಎಂದು ಭದ್ರತಾ ಸಂಸ್ಥೆಗಳು ನಮಗೆ ತಿಳಿಸಿವೆ. ಅದರೊಂದಿಗೆ ನವರಾತ್ರಿಯೂ ಇದ್ದು, ಇದರಿಂದಾಗಿ ಪಂದ್ಯಾಟವನ್ನೂ ಮುಂದೂಡಬೇಕಾಗುತ್ತದೆ”ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಬುಧವಾರ ಪ್ರಕಟಣೆಯಿಂದ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬ್ಲಾಕ್ಬಸ್ಟರ್ ಸಿನಿಮಾ ನೀಡಿದರೂ, ಬಾಲಿವುಡ್ ತೊರೆದ ಈ ಏಳು ನಟಿಯರು!
ಈ ಮಧ್ಯೆ, ಜುಲೈ 27ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತಿರುವ ರಾಜ್ಯ ಸಂಘಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೇಳಿದ್ದಾರೆ. ಈ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ನಡೆಯುವ ಇಂಡೋ-ಪಾಕ್ ಪಂದ್ಯದ ಭದ್ರತಾ ಕಾಳಜಿಯ ಬಗ್ಗೆ ಚರ್ಚೆಗಳು ನಡೆಯಲಿದ್ದು, ಹೊಸ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ. (ಏಜೆನ್ಸೀಸ್)