More

  ಬಿಯರ್​ ಬಾಟಲ್​ ಕ್ಯಾಪ್​ನಿಂದ ಸಿಕ್ಕಿಬಿದ್ದ ಹಲ್ಲೆ ಆರೋಪಿಗಳು! ಏನಿದು ವಿಚಿತ್ರ ಪ್ರಕರಣ?

  ಬೆಂಗಳೂರು: ಒಂದು ಹಲ್ಲೆ ಪ್ರಕರಣವನ್ನು ಕೇವಲ ಬಾಟಲಿಯೊಂದರ ಮುಚ್ಚಳದಿಂದ ಬಗೆಹರಿಸಲು ಸಾಧ್ಯವೇ? ಸಿಸಿ ಟಿವಿ ಇರುವ ಕಾಲದಲ್ಲಿ ಮುಚ್ಚಳದ ಸಹಾಯದಿಂದ ಯಾಕೆ ಹುಡುಕಾಟ ನಡೆಸಬೇಕಾಯ್ತು? ಈ ಸುದ್ದಿಯಲ್ಲಿ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಪ್ರಕರಣದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

  ಇದೇ ಜುಲೈನ 16ರ ಮಧ್ಯರಾತ್ರಿ, ಮಿಲೇನಿಯಂ ಬಾರ್ ಬಳಿ ಆಟೋದಲ್ಲಿ ಕುಳಿತಿದ್ದ ಮಿಥುನ್ ರಾಜ್ ಹಾಗೂ ಆತನ ಗೆಳೆಯನ ಮೇಲೆ ಹಲ್ಲೆ ನಡೆದಿತ್ತು. ಈ ಸಂದರ್ಭ ಅವರು ಜೋರಾಗಿ ಹಾಡು ಹಾಕಿಕೊಂಡು ಮಾತನಾಡುತಿದಿದ್ದರು. ಈ ವೇಳೆ ಎರಡು ಬೈಕ್​ನಲ್ಲಿ ಬಂದ ನಾಲ್ವರು ಇವರಿಬ್ಬರ ಮೇಲೆ ದಾಳಿ ನಡೆಸಿದ್ದರು.

  ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಮತ್ತೆ ಕಾಲಿಡಲಿದೆ ಕೋಬ್ರಾ ಬಿಯರ್​​..?

  ಬಿಯರ್ ಬಾಟಲ್​ನಿಂದ ತಲೆಗೆ ಹಲ್ಲೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದರು. ರಸ್ತೆ ಮೇಲೆ ರಕ್ತ ಚೆಲ್ಲಿತ್ತು. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಾಗಿ ತನಿಖೆ ಕೈಗೊಂಡ ಚಂದ್ರಲೇಔಟ್ ಪಿಎಸ್ಐ ರವೀಶ್, ಗಾಯಾಳುಗಳನ್ನು ವಿಚಾರಣೆ ಮಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಂದವರು ಯಾರು, ಯಾಕೆ ದಾಳಿ ಮಾಡಿದ್ದು, ಎಲ್ಲಿಂದ ಬಂದದ್ದು ಈ ಕುರಿತಾಗಿ ಯಾವ ಮಾಹಿತಿಯೂ ಲಭ್ಯವಾಗಿರಲಿಲ್ಲ. ಸಿಸಿ ಟಿವಿಯಲ್ಲೂ ಬೈಕ್ ಹಾಗೂ ಆರೋಪಿಗಳ ಚಹರೆಯ ಸ್ಪಷ್ಟತೆ ಸಿಕ್ಕಿರಲಿಲ್ಲ.

  ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಬಿಯರ್ ಬಾಟಲ್ ಕ್ಯಾಪ್!

  ಈ ಪ್ರಕರಣಕ್ಕೆ ಅಂತ್ಯವೇ ಇಲ್ಲ ಎನ್ನುವಾಗ ಎದುರಾದದ್ದು ಬಿಯರ್ ಬಾಟಲ್ ಮುಚ್ಚಳ! ಇದರಿಂದಾಗಿ ಮಧ್ಯರಾತ್ರಿ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಗ್ಯಾಂಗ್​ನ ನಾಲ್ವರನ್ನೂ ಇದೀಗ ಬಂಧಿಸಲಾಗಿದೆ. ಬಂಧಿತರನ್ನು ಅಫ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷ ಎಂದು ಗುರುತಿಸಲಾಗಿದೆ.

  ಬಿಯರ್​ ಬಾಟಲ್​ ಕ್ಯಾಪ್​ನಿಂದ ಸಿಕ್ಕಿಬಿದ್ದ ಹಲ್ಲೆ ಆರೋಪಿಗಳು! ಏನಿದು ವಿಚಿತ್ರ ಪ್ರಕರಣ?

  ಘಟನಾ ಸ್ಥಳದ ಪರಿಶೀಲನೆ ವೇಳೆ ಸಿಕ್ಕ ಬಿಯರ್ ಬಾಟಲ್​ಗಳು ಸಿಕ್ಕಿದ್ದು, ಬಾಟಲ್ ನ ಕ್ಯಾಪ್ ಮೇಲಿನ ಬ್ಯಾಚ್ ನಂಬರ್ ಪತ್ತೆಯಾಗಿತ್ತು. ಇದನ್ನೇ ಲೀಡ್ ಮಾಹಿತಿಯಾಗಿ ಪರಿಗಣಿಸಿ, ಪಿಎಸ್ಐ ರವೀಶ್ ಬೆನ್ನು ಹತ್ತಿದ್ದಾರೆ. ಆ ಬ್ಯಾಚ್ ನಂಬರ್​ನ ಬಾಟಲಿ ಯಾವ ಬಾರ್​ನಿಂದ ಮಾರಾಟವಾಗಿದೆ ಎನ್ನುವದನ್ನು ಪತ್ತೆ ಮಾಡಿದ್ದಾರೆ.‘

  ಇದನ್ನೂ ಓದಿ: ಪಾತ್ರೆ ತೊಳೆಯುವ ವಿಚಾರಕ್ಕೆ ಗಲಾಟೆ; ಬಿಯರ್ ಬಾಟಲ್​​​ನಿಂದ ಸ್ನೇಹಿತನಿಗೆ ಇರಿದ

  ನಂತರ ಅದೇ ಬಾರ್​ಗೆ ತೆರಳಿದ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆರೋಪಿಗಳು ಬಿಯರ್ ಖರೀದಿ ಮಾಡಿ ಬೈಕ್​ನಲ್ಲಿ ತೆರಳುವ ದೃಶ್ಯ ಲಭ್ಯವಾಗಿದೆ. ಹೀಗೆ ಸಿಕ್ಕ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಯಾಗಿದ್ದು ನಾಲ್ವರು ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.

  ಇವರು ಹಲ್ಲೆ ಮಾಡಿದ್ಯಾಕೆ?!

  ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದು ಬೈಕ್​ನಲ್ಲಿ ತೆರಳುವಾಗ ಸೌಂಡ್ ಕಿರಿಕಿರಿ ಮಾಡಿತ್ತಂತೆ. ಅದೇ ವಿಚಾರವಾಗಿ ಬಂದು ಹಲ್ಲೆ ಮಾಡಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

  ವಿಜಯವಾಣಿ- ದಿಗ್ವಿಜಯ ನ್ಯೂಸ್ ವತಿಯಿಂದ ವಿಜಯ ದಿವಸ ಆಚರಣೆ | ಹುತಾತ್ಮರನ್ನು ಸ್ಮರಿಸಿದ ಗಣ್ಯರು; ವಿಶೇಷ ಪುರವಣಿ ಬಿಡುಗಡೆ

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts