More

    ಭಾರತದೊಳಕ್ಕೆ ನುಸುಳಲು ಪ್ರಯತ್ನಿಸಿದ ಇಬ್ಬರು ಚೀನಿ ಪ್ರಜೆಗಳ ಬಂಧನ!

    ನವದೆಹಲಿ: ಅಗತ್ಯ ದಾಖಲೆಗಳಿಲ್ಲದೆ ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದ ಆರೋಪದ ಮೇಲೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ಅವರನ್ನು ಶನಿವಾರ ರಾತ್ರಿ ರಕ್ಷಾಲ್ ಗಡಿ ಹೊರಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ಎಸ್‌ಕೆ ಸಿಂಗ್ ತಿಳಿಸಿದ್ದಾರೆ.

    ಇದನ್ನೂ ಓದಿ: ನನ್ನ ಗಂಡ ಉಗ್ರ: ಚೀನಿ ಹೆಂಡತಿಯ ಆರೋಪಕ್ಕೆ ಭಾರತೀಯ ವಶಕ್ಕೆ

    ವಿಚಾರಣೆಯ ಸಮಯದಲ್ಲಿ, ವಿದೇಶಿಗರು ತಮ್ಮನ್ನು ತಾವು ಚೀನಾದ ಜಾವೊಕ್ಸಿಂಗ್‌ ಪ್ರಾಂತ್ಯದ ಜಾವೊ ಜಿಂಗ್ ಮತ್ತು ಫೂ ಕಾನ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

    ಅವರು ಮಾನ್ಯವಾದ ಪ್ರಯಾಣ ದಾಖಲೆಗಳಿಲ್ಲದೆ ಪತ್ತೆಯಾಗಿದ್ದಾರೆ ಮತ್ತು ಅವರು ತಮ್ಮ ಪಾಸ್‌ಪೋರ್ಟ್‌ಗಳನ್ನು ಬಿರ್‌ಗಂಜ್‌ನಲ್ಲಿರುವ ಹೋಟೆಲ್‌ನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ, ಅವರು ಹಿಂದಿನ ರಾತ್ರಿ ತಂಗಿದ್ದರು ಎಂದು ಅವರು ಹೇಳಿದರು. ಅವರು ಆಟೋರಿಕ್ಷಾದ ಮೂಲಕ ತಲುಪಿ ಕಾಲ್ನಡಿಗೆಯಲ್ಲಿ ಗಡಿ ದಾಟಲು ಪ್ರಯತ್ನಿಸಿದರು ಎಂದು ಸಿಂಗ್ ಹೇಳಿದರು.

    ಇದನ್ನೂ ಓದಿ: 350ಕ್ಕೂ ಹೆಚ್ಚು ಚೀನಾ ಲೋನ್ ಆ್ಯಪ್‌ ನಿರ್ಬಂಧ: ಸಾರ್ವಜನಿಕರಿಗೆ ರಕ್ಷಣೆಯ ಅಭಯ ನೀಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ​

    ದಾಖಲೆಗಳ ಪ್ರಕಾರ, ಜುಲೈ 2ರಂದು ಸರಿಯಾದ ದಾಖಲೆಗಳಿಲ್ಲದೆ ಚೀನಾದ ಪ್ರಜೆಗಳು ಭಾರತೀಯ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸಿದರು. ಅವರು ತಿಳಿಯದೇ ಹಾಗೆ ಮಾಡಿದ್ದಾರೆ ಹೇಳಿಕೊಂಡಿದ್ದಾರೆ.

    ಆ ಸಮಯದಲ್ಲಿ ಅವರನ್ನು ವಶದಿಂದ ಬಿಡಲಾಗಿದ್ದು ಅವರ ಪಾಸ್‌ಪೋರ್ಟ್‌ಗಳನ್ನು “ಪ್ರವೇಶ ನಿರಾಕರಿಸಲಾಗಿದೆ” ಎಂದು ಮುದ್ರೆ ಹಾಕಿ ಹಿಂತಿರುಗಿಸಿ ಕಳಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಕಾಶ್ಮೀರದ ಸಮಸ್ಯೆ ಬಗ್ಗೆ ಚೀನಾ ಮಾತನಾಡುತ್ತಿರುವುದು ಬಿಜೆಪಿ ಕೊಡುಗೆ: ಮೆಹಬೂಬ ಮುಫ್ತಿ

    “ಆ ಚೀನಿ ಪ್ರಜೆಗಳು ಭಾರತ ಪ್ರವೇಶಿಸಲು ಪದೇ ಪದೇ ಪ್ರಯತ್ನಿಸುತ್ತಿರುವುದು ಕಂಡು ಬಂದಿದ್ದು ಅನುಮಾನವನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಮುಂದಿನ ತನಿಖೆ ಮತ್ತು ಕ್ರಮಕ್ಕಾಗಿ ಅವರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ” ಎಂದು ಅವರು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts