More

    ನನ್ನ ಗಂಡ ಉಗ್ರ: ಚೀನಿ ಹೆಂಡತಿಯ ಆರೋಪಕ್ಕೆ ಭಾರತೀಯ ವಶಕ್ಕೆ

    ನವದೆಹಲಿ: ಚೀನಾದಲ್ಲಿ ನೆಲೆಸಿದ್ದ ಇಂದೋರ್ ನಿವಾಸಿಯೊಬ್ಬರನ್ನು ಶಂಕಿತ ಭಯೋತ್ಪಾದಕ ಎಂದು ಬಂಧಿಸಿರುವ ಬಗ್ಗೆ ಮಧ್ಯಪ್ರದೇಶ ಪೊಲೀಸ್ ಗುಪ್ತಚರ ವಿಭಾಗದ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಂಧಿತ ಸರ್ಫರಾಜ್​, ಆತ ಹಾಗೂ ಆತನ ಚೀನಿ ಪತ್ನಿ ವಿಚ್ಛೇದನಕ್ಕೆ ಒಳಗಾಗುತ್ತಿದ್ದು ಈ ಸಂದರ್ಭ ಆಕೆ ಆತನನ್ನು ಸಿಕ್ಕಿಸಿ ಹಾಕಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾನೆ.

    ಇದನ್ನೂ ಓದಿ: ನವದಂಪತಿಗೆ 30 ದಿನ ಸಂಬಳ ಸಹಿತ ರಜೆ! ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ರಯೋಗ

    ಮುಂಬೈ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೆಲವು ದಿನಗಳ ಹಿಂದೆ ಬಂದಿದ್ದ ಇಮೇಲ್ ಆಧರಿಸಿ ಸರ್ಫರಾಜ್ ಬಗ್ಗೆ ಮಧ್ಯಪ್ರದೇಶ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಆತ ಮುಂಬೈನಲ್ಲಿ ದಾಳಿ ನಡೆಸಲು ಯೋಜಿಸುತ್ತಿದ್ದಾನೆ ಎಂದು ಅವರಿಗೆ ಎಚ್ಚರಿಕೆ ನೀಡಲಾಗಿತ್ತು.

    ಶಂಕಿತ ವ್ಯಕ್ತಿ ಹಲವಾರು ಭಾಷೆಗಳನ್ನು ಬಲ್ಲವನಾಗಿದ್ದು ಆತನ ಪಾಸ್‌ಪೋರ್ಟ್‌ನಲ್ಲಿ ಚೀನಾದ ಪ್ರಯಾಣದೊಂದಿಗೆ ವಲಸೆ ಚೀಟಿಗಳಿವೆ ಎಂದು ಮೂಲಗಳು ತಿಳಿಸಿವೆ. ಸರ್ಫರಾಜ್​ ಕೆಲ ಸಮಯದಿಂದ ಹಾಂಕಾಂಗ್‌ನಲ್ಲಿ ವಾಸಿಸುತ್ತಿದ್ದರು.

    ಇದನ್ನೂ ಓದಿ: ಚೀನಾದ ಅನುಮಾನಾಸ್ಪದ ಪತ್ತೇದಾರಿ ಬಲೂನ್​ ಹೊಡೆದುರುಳಿಸಿದ ಅಮೆರಿಕ!

    ಈ ಸಂದರ್ಭ ಅವರು ಚೀನಿ ಮಹಿಳೆಯನ್ನು ಮದುವೆಯಾದರು. ದಂಪತಿಗಳು ಅಂತಿಮವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಸರ್ಫರಾಜ್ ಅವರ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತನಿಖಾ ಏಜೆನ್ಸಿಯ ಮೂಲಗಳು ತಿಳಿಸಿವೆ.

    ವಿಚ್ಛೇದನ ಪ್ರಕ್ರಿಯೆಯಲ್ಲಿ ಆತನಿಗೂ ಆತನ ಚೀನಿ ಹೆಂಡತಿಗೂ ಜಗಳವಾಗಿತ್ತು. ಈ ಸಂದರ್ಭ ಆಕೆಯ ವಕೀಲರೊಂದಿಗೆ ಜಗಳವಾಡಿದ್ದೆವು ಎಂದು ಸರ್ಫರಾಜ್ ಪೊಲೀಸರಿಗೆ ತಿಳಿಸಿದರು. ನಕಲಿ ಮಾಹಿತಿಯೊಂದಿಗೆ ಎನ್‌ಐಎಗೆ ಇಮೇಲ್ ಕಳುಹಿಸುವ ಮೂಲಕ ಅವರು ಅವರನ್ನು ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕಣ್ಗಾವಲು ವ್ಯವಸ್ಥೆ ಅಗತ್ಯ: ಜೂಜು- ಅಕ್ರಮ ಸಾಲ ಚೀನಾ ಆ್ಯಪ್​ಗೆ ನಿಷೇಧ

    ಪೊಲೀಸರು ಸರ್ಫರಾಜ್‌ನನ್ನು “ಭಯೋತ್ಪಾದಕ” ಎಂದು ಉಲ್ಲೇಖಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರತಿಯೊಂದು ಗುಪ್ತಚರ ಮಾಹಿತಿಯನ್ನೂ ಗಂಭೀರವಾಗಿ ಪರಿಗಣಿಸಿರುವುದರಿಂದ ಆತನನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಆತನ ಹಿನ್ನೆಲೆ ಮತ್ತು ಚಟುವಟಿಕೆಯನ್ನು ಮಾತ್ರ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts