More

    ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆ ಹೈಟೆಕ್; ಮಕ್ಕಳು ಫುಲ್ ಖುಷ್!

    ದೇವನಹಳ್ಳಿ: ಇಲ್ಲಿ ಅಳಿವಿನ ಅಂಚಿನಲ್ಲಿದ್ದ ಸರ್ಕಾರಿ ಶಾಲೆ ಯ ಉನ್ನತೀಕರಣ ಮಾಡಲಾಗಿದ್ದು ಅದಕ್ಕೀಗ ಸಂಪೂರ್ಣ ಹೈಟೆಕ್​ ಲುಕ್​ ನೀಡಲಾಗಿದೆ. ಈ ಶಾಲೆಯ ಪರಿಸ್ಥಿತಿ ಎಷ್ಟರ ಮಟ್ಟಿಗೆ ಇಳಿದಿತ್ತು ಎಂದರೆ ಇಲ್ಲಿಗೆ ಬರಲು ವಿದ್ಯಾರ್ಥಿಗಳೇ ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದ್ದು ಕ್ಷೇತ್ರದ ಶಾಸಕರು ಹಾಗೂ ಜನರ ಪರಿಶ್ರಮದಿಂದಾಗಿ ವಾಪಸ್​ ಶಾರದೆಯ ನೆಲೆಯಾಗಿ ಬದಲಾಗಿದೆ.

    ಸರ್ಕಾರಿ ಶಾಲೆ
    ಹಳೆ ಸರ್ಕಾರಿ ಶಾಲೆ ಈಗ ಹೈಟೆಕ್​

    ಇದನ್ನೂ ಓದಿ: ಸರ್ಕಾರಿ ಶಾಲೆಗೆ ಸೇರಿಸಿ, ಕನ್ನಡವ ಕಾಪಾಡಿ

    ಅಂದ ಹಾಗೆ ಈ ಶಾಲೆ ಇರುವುದು ಯಲಹಂಕದ ಬಾಗಲೂರು ಸಮೀಪದ ಸಾತನೂರು ಗ್ರಾಮದಲ್ಲಿ. ಇಲ್ಲಿ 50 ಲಕ್ಷಕ್ಕೂ ಹೆಚ್ಚು ಅನುಧಾನ ಬಳಸಿ ಹೈಟೆಕ್ ಸರ್ಕಾರಿ ಶಾಲೆಯನ್ನು ನಿರ್ಮಿಸಲಾಗಿದೆ. ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದ ಕಾರಣ, ಶಾಲೆಯ ಉಳಿವಿಗಾಗಿ ಗ್ರಾಮಸ್ಥರು ಹಾಗೂ ಶಾಸಕರು 50 ಲಕ್ಷಕ್ಕೂ ಹೆಚ್ಚು ಹಣ ಬಳಸಿ ಅದನ್ನು ಮರು ನಿರ್ಮಾಣ ಮಾಡಿಸಿದ್ದಾರೆ.

    ಹೈಟೆಕ್​ ಸರ್ಕಾರಿ ಶಾಲೆ
    ಹೈಟೆಕ್ ಸರ್ಕಾರಿ ಶಾಲೆ ಉದ್ಘಾಟನೆಗೆ ತಯಾರಿ

    ಅಳಿವಿನಂಚಿನಲ್ಲಿದ್ದ ಶಾಲೆ ಹೈಟೆಕ್ ಸರ್ಕಾರಿ ಶಾಲೆಯಾಗಿ ಪರಿವರ್ತನೆ ಆಗಿದ್ದು ಶಾಸಕ ಕೃಷ್ಣಬೈರೇಗೌಡರಿಂದ ಇಂದು ಅದರ ಉದ್ಘಾಟನೆ ನಡೆದಿದೆ. ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆ ನಿರ್ಮಾಣವಾಗಿದೆ. ಈ ಶಾಲೆಯಲ್ಲಿ ಕಲೆಯುತ್ತಿದ್ದ 160ಕ್ಕೂ ಹೆಚ್ಚಿನ ಬಡ ಮಕ್ಕಳ ಮುಖದಲ್ಲಿ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣ ಆಗಿರುವ ಕಾರಣ ಇಂದು ನಗು ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts