More

    ಮ್ಯಾರಥಾನ್ ಓಡಿ ಹೃದಯಾಘಾತದಿಂದ ಪ್ರಾಣ ಬಿಟ್ಟ 20ರ ಯುವಕ!

    ಮಧುರೈ: ಮಧುರೈನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ತಮಿಳುನಾಡಿನ 20 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ವರದಿಯ ಪ್ರಕಾರ, ಆತ ಓಟದ ಕೆಲವು ಗಂಟೆಗಳ ನಂತರ ಅಪಸ್ಮಾರದಿಂದ ಬಳಲುತ್ತಿದ್ದರು. ಆತನ ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮೃತ ಯುವಕ, ಮಧುರೈನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಬಸ್‌ನಲ್ಲಿಯೇ ಹೃದಯಾಘಾತದಿಂದ ಕುಸಿದ ಬಿದ್ದ ಪ್ರಯಾಣಿಕ; ಚಾಲಕ, ನಿರ್ವಾಹಕಿ ಮಾಡಿದ್ದೇನು?

    ಮೃತರನ್ನು ಕಲ್ಲಕುರಿಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಭಾನುವಾರ ಉತಿರಂ 2023 ರಕ್ತದಾನ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಆರೋಗ್ಯ ಸಚಿವ ಸುಬ್ರಮಣಿಯನ್ ಮತ್ತು ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಪಿ ಮೂರ್ತಿ ಮ್ಯಾರಥಾನ್‌ಗೆ ಚಾಲನೆ ನೀಡಿದ್ದರು.

    ಮುಂಜಾನೆ ಮ್ಯಾರಥಾನ್ ಅನ್ನು ಯಶಸ್ವಿಯಾಗಿ ಮುಗಿಸಿದ ನಂತರ ದಿನೇಶ್ ಸುಮಾರು ಒಂದು ಗಂಟೆಗಳ ಕಾಲ ಚೆನ್ನಾಗಿಯೇ ಇದ್ದ ಎಂದು ಆತನ ಸ್ನೇಹಿತರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. ಆದಾಗ್ಯೂ, ಆತ ನಂತರ ಅಸ್ವಸ್ಥನಾಗುತ್ತಿದ್ದೇನೆ ಎಂದು ದೂರು ನೀಡಿದ್ದು, ವಿಶ್ರಾಂತಿ ಕೋಣೆಗೆ ಹೋಗಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: ಜಿಮ್‌ನಲ್ಲಿ ವರ್ಕೌಟ್​​​: ಎದೆಯಲ್ಲಿ ನೋವು, ಹಠಾತ್ ಹೃದಯಾಘಾತದಿಂದ ಯುವಕ ಮೃತ

    ನಂತರ ದಿನೇಶ್ ಅಪಸ್ಮಾರದಿಂದ ಬಳಲುತ್ತಿರುವುದನ್ನು ತಿಳಿದುಕೊಂಡ ಸ್ನೇಹಿತರು, ಕೂಡಲೇ ಆತನನ್ನು ಸಮೀಪದ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆಸ್ಪತ್ರೆಯ ಅಧಿಕಾರಿಗಳು ಅವರನ್ನು ಬೆಳಿಗ್ಗೆ 8:45ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದರು. ಅಲ್ಲಿ ಅವರಿಗೆ ಕೃತಕ ಉಸಿರಾಟ ಮತ್ತು ಲೈಫ್ ಸಪೋರ್ಟ್ ಚಿಕಿತ್ಸೆ ನೀಡಲಾಯಿತು ಎಂದು ವರದಿ ತಿಳಿಸಿದೆ. ಆಸ್ಪತ್ರೆಗೆ ಕರೆತಂದ ಕೆಲವೇ ಗಂಟೆಗಳಲ್ಲಿ ಬೆಳಗ್ಗೆ 10:10ರ ಸುಮಾರಿಗೆ ಹೃದಯ ಸ್ತಂಭನಕ್ಕೆ ಒಳಗಾದರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಹೃದಯಾಘಾತಕ್ಕೀಡಾಗಿ ಎಂಟು ತಿಂಗಳ ಮಗು ಸಾವು; ಆರೋಗ್ಯ ಸಚಿವರಿಗೆ ದೂರು

    ವೈದ್ಯಕೀಯ ಅಧಿಕಾರಿಗಳು ಅವರನ್ನು ಬದುಕಿಸಲು ಪ್ರಯತ್ನಿಸಿದರೂ, ಅವರು ಬೆಳಿಗ್ಗೆ 10:45 ಕ್ಕೆ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 20ರ ಹರೆಯದ ಯುವಕನ ಸಾವಿಗೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts