ಊಟದ ವಿಚಾರದಲ್ಲಿ ನೀವು ಮಾಡುವ ಈ ಒಂದು ಸಣ್ಣ ತಪ್ಪು ಹೃದಯಾಘಾತಕ್ಕೆ ಕಾರಣವಾಗಬಹುದು!

Heart Attack

ಮಾನವನಿಗೆ ಬೆಳಗಿನ ಉಪಾಹಾರವು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಬೆಳಗ್ಗೆ ತಿಂಡಿ ಸೇವಿಸದಿದ್ದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆ ಆಗುತ್ತದೆ. ಈ ಕಾರಣದಿಂದಾಗಿ ಮೆದುಳಿಗೆ ಸಾಕಷ್ಟು ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಚಟುವಟಿಕೆಯು ನಿಧಾನಗೊಳ್ಳುತ್ತದೆ. ಇದರೊಂದಿಗೆ, ಏಕಾಗ್ರತೆ ಸಹ ಕಡಿಮೆಯಾಗುತ್ತದೆ. ಇದಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಸಹ ಹೆಚ್ಚು. ಆದ್ದರಿಂದ ರೋಗಗಳು ಬರದಂತೆ ತಡೆಯಲು ತಪ್ಪದೇ ಎಲ್ಲರೂ ಉಪಹಾರ ಸೇವಿಸಬೇಕು.

ಇತ್ತೀಚಿನ ಅಧ್ಯಯನದ ಪ್ರಕಾರ ಬೆಳಗ್ಗೆ ತಿನ್ನುವುದು ಮತ್ತು ರೋಗನಿರೋಧಕ ಕ್ರಿಯೆಯ ನಡುವಿನ ಸಂಬಂಧವನ್ನು ಪತ್ತೆಹಚ್ಚಿದೆ. ಬೆಳಗ್ಗೆ ಎಂಟು ಗಂಟೆಯೊಳಗೆ ಉಪಹಾರ ಸೇವಿಸುವವರಿಗೆ ಹೃದ್ರೋಗ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಇದಲ್ಲದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ.

ಅಧ್ಯಯನದ ಪ್ರಕಾರ ಬೆಳಗಿನ ಉಪಾಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸದೇ ಇರುವವರಲ್ಲಿ ಈ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.

ಅಂದಹಾಗೆ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ಪ್ರತಿದಿನ ಶೇ.6ರಷ್ಟು ಹೆಚ್ಚುತ್ತಿದೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜಗತ್ತಿನಲ್ಲಿ ಪ್ರತಿ ವರ್ಷ 17.9 ಮಿಲಿಯನ್ ಜನರು ಹೃದ್ರೋಗದಿಂದ ಸಾಯುತ್ತಾರೆ. ಆದ್ದರಿಂದ ನೀವು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಲು ವಿಶೇಷ ಗಮನ ನೀಡಬೇಕು ಮತ್ತು ನಿಯಮಿತ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು. (ಏಜೆನ್ಸೀಸ್​)

ಎಂದಿಗೂ ಮಾಜಿ ಆಗಲ್ಲ ಅಂತ ಮನವರಿಕೆಯಾಗಿದೆ: ಪುತ್ರಿ ಜಾಹ್ನವಿ ಬಾಯ್​ಫ್ರೆಂಡ್​ ಬಗ್ಗೆ ಬೋನಿ ಕಪೂರ್​ ಮಾತು

ಅಮೆರಿಕಾದಲ್ಲಿರುವ ನಟಿ ಆರತಿ ಗುಟ್ಟಾಗಿ ಪದೇಪದೇ ಕೋಲಾರಕ್ಕೆ ಯಾಕೆ ಬರ್ತಾರೆ?

Share This Article

ಜಿಮ್​ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis

Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…