More

  ವಿಜಯವಾಣಿ- ದಿಗ್ವಿಜಯ ನ್ಯೂಸ್ ವತಿಯಿಂದ ವಿಜಯ ದಿವಸ ಆಚರಣೆ | ಹುತಾತ್ಮರನ್ನು ಸ್ಮರಿಸಿದ ಗಣ್ಯರು; ವಿಶೇಷ ಪುರವಣಿ ಬಿಡುಗಡೆ

  ತುಮಕೂರು: ಕಾರ್ಗಿಲ್ ವಿಜಯ ದಿವಸd​ ಅಂಗವಾಗಿ ವಿಜಯವಾಣಿ- ದಿಗ್ವಿಜಯ ನ್ಯೂಸ್ ವತಿಯಿಂದ ತುಮಕೂರಿನಲ್ಲಿ ಇಂದು ಬೆಳಗ್ಗೆ ಹುತಾತ್ಮರಿಗೆ ನಮನ ಸಲ್ಲಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ವಾಕಥಾನ್ ನಡೆದಿದ್ದು ಅದರೊಂದಿಗೆ ಅಣಕು ಪ್ರದರ್ಶನವೂ ನಡೆದಿದೆ.

  ತುಮಕೂರಿನ ಮಹತ್ಮಾ ಗಾಂಧಿ ಮೈದಾನದಲ್ಲಿ ಕಾರ್ಗಿಲ್ ಯುದ್ಧದ ಅಣಕು ಪ್ರದರ್ಶನ ನಡೆಸಲಾಗಿದ್ದು ಬಳಿಕ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳೂ ಉಪಸ್ಥಿತರಿದ್ದು ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಿದರು. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ವಿಜಯವಾಣಿ, ದಿಗ್ವಿಜಯ ಸಂಸ್ಥೆಯ ವತಿಯಿಂದ ಭಕ್ತಿ ಸಮರ್ಪಿಸಲಾಯಿತು.

  ವಿಜಯವಾಣಿ- ದಿಗ್ವಿಜಯ ನ್ಯೂಸ್ ವತಿಯಿಂದ ವಿಜಯ ದಿವಸ ಆಚರಣೆ | ಹುತಾತ್ಮರನ್ನು ಸ್ಮರಿಸಿದ ಗಣ್ಯರು; ವಿಶೇಷ ಪುರವಣಿ ಬಿಡುಗಡೆ

  ವಿಜಯವಾಣಿ ವತಿಯಿಂದ ವಿಶೇಷ ಪುರವಣಿ!

  ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ವಿಜಯವಾಣಿ ಪತ್ರಿಕೆ ವಿಶೇಷ ಪುರವಣಿಯನ್ನು ಹೊರತಂದಿದ್ದು “ವೀರಯೋಧರಿಗೆ ಸಲಾಂ” ವಿಶೇಷ ಪುರವಾಣಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಶ್ರೀ ಸಿದ್ದಲಿಂಗ ಸ್ವಾಮೀಜಿ. ಸುಬೇದಾರ್ ಮೇಜರ್ ದಿನೇಶ್ ಸಿಂಗ್, ಕರ್ನಲ್ ವಿಜಯ್ ಕುಮಾರ್, ಶಾಸಕ ಜ್ಯೋತಿ ಗಣೇಶ್​ ಈ ವಿಶೇಷ ಪುರವಾಣಿ ಬಿಡುಗಡೆ ಮಾಡಿದ್ದಾರೆ.

  ವಿಜಯವಾಣಿ- ದಿಗ್ವಿಜಯ ನ್ಯೂಸ್ ವತಿಯಿಂದ ವಿಜಯ ದಿವಸ ಆಚರಣೆ | ಹುತಾತ್ಮರನ್ನು ಸ್ಮರಿಸಿದ ಗಣ್ಯರು; ವಿಶೇಷ ಪುರವಣಿ ಬಿಡುಗಡೆ

  ಇದನ್ನೂ ಓದಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬೈಕ್ ರ‍್ಯಾಲಿ

  ಯುದ್ಧ ಸ್ಮಾರಕಕ್ಕೆ ಗಣ್ಯರಾದ ಸುಬೇದಾರ್ ಮೇಜರ್ ದಿನೇಶ್ ಸಿಂಗ್, ಹಾಗೂ ಕರ್ನಲ್ ಎಂ.ಜಿ ವಿಜಯ್ ಕುಮಾರ್, ಶಾಸಕ ಜ್ಯೋತಿ ಗಣೇಶ್, ವಿಜಯವಾಣಿ ಸಂಪಾದಕ ಕೆ.ಎನ್ ಚನ್ನೇಗೌಡ, ವಿಜಯವಾಣಿ ಜಾಹೀರಾತು ವಿಭಾಗದ ಮುಖ್ಯಸ್ಥ ಅರುಣ್, ದಿಗ್ವಿಜಯ ನ್ಯೂಸ್ ಸಂಪಾದಕರಾದ ಸಿದ್ದು ಕಾಳೋಜಿ ಅವರಿಂದಗೂ ಗೌರವ ಸಮರ್ಪಣೆ ಮಾಡಿದ್ದಾರೆ.

  ಇದನ್ನೂ ಓದಿ: ವಿಜಯಪುರದಲ್ಲಿ ಹುತಾತ್ಮ ಯೋಧರ ತ್ಯಾಗ-ಬಲಿದಾನದ ಸಂಸ್ಮರಣೆ- ಕಾರ್ಗಿಲ್​ ವಿಜಯ್ ದಿವಸ್​ ಆಚರಣೆ

  ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್, “ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ. ಇದಕ್ಕೆ ಕಾರಣವಾದ ದಿಗ್ವಿಜಯ ನ್ಯೂಸ್ ಹಾಗೂ ವಿಜಯವಾಣಿ ಸಮೂಹಕ್ಕೆ ಅಭಿನಂದನೆಗಳು. ಕಾರ್ಗಿಲ್​ನಲ್ಲಿ ನಮ್ಮ ಸೈನಿಕರು ವಿಜಯ ಪತಾಕೆ ಹಾರಿಸಿದ್ರು. ಇದಕ್ಕೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲಾ ನಾಗರೀಕರಾಗಿ ಶಾಂತಿಯುತವಾಗಿ ಇಲ್ಲಿದ್ದರೆ ಅದಕ್ಕೆ ಕಾರಣ ನಮ್ಮ ಸೈನಿಕರು” ಎಂದು ಹೇಳಿದ್ದಾರೆ.

  ಇದನ್ನೂ ಓದಿ: ವಿಜಯಪುರದಲ್ಲಿ ಹುತಾತ್ಮ ಯೋಧರ ತ್ಯಾಗ-ಬಲಿದಾನದ ಸಂಸ್ಮರಣೆ- ಕಾರ್ಗಿಲ್​ ವಿಜಯ್ ದಿವಸ್​ ಆಚರಣೆ

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts