More

    ಐಬಿಪಿಎಸ್ ಪರೀಕ್ಷಾ ತರಬೇತಿ ಸಹಿತವಾಗಿರುವ ಇಂಟಗ್ರೆಟೆಡ್ ಬಿಕಾಂ – ಪುತ್ತೂರಿನ ಅಂಬಿಕಾ ಕಾಲೇಜಿನಲ್ಲಿ ಆರಂಭ – ಮನಶ್ಶಾಸ, ತತ್ವಶಾಸ ಕೋರ್ಸ್‌ಗಳು – ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ


    ಪುತ್ತೂರು : ಪುತ್ತೂರಿನ ನಟ್ಟೋಜ ಫೌಂಡೇಷನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಪುತ್ತೂರಿನ ಆಸುಪಾಸಿನ ವಾಣಿಜ್ಯ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಸಿಎ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಡಿಯಿಡ ಬೇಕಾದರೆ ಎದುರಿಸಬೇಕಾದ ಐಬಿಪಿಎಸ್ ಪರೀಕ್ಷಾ ತರಬೇತಿ ಸಹಿತವಾಗಿರುವ ಇಂಟಗ್ರೆಟೆಡ್ ಬಿಕಾಂ ಅನ್ನು ಅಂಬಿಕಾ ಕಾಲೇಜು ಆರಂಭಿಸಿದೆ. ಹಾಗಾಗಿ ಇಂತಹ ತರಬೇತಿಗಳಿಗಾಗಿ ದೂರದ ಊರುಗಳಿಗೆ ತೆರಳಬೇಕಾದ ಅವಶ್ಯಕತೆ ಪುತ್ತೂರಿನ ವಿದ್ಯಾರ್ಥಿಗಳಿಗೆ ಇಲ್ಲ.
    ಸಿಎ ತೇರ್ಗಡೆಯಾದವರು ಈ ಸಂಸ್ಥೆಯಲ್ಲಿ ತರಗತಿ ನಡೆಸುತ್ತಿರುವುದು ವಿದ್ಯಾರ್ಥಿಗಳ ಮತ್ತು ಪಾಲಕರ ಮೆಚ್ಚುಗೆಗೆ ಕಾರಣವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಽಕ ಉದ್ಯೋಗಾವಕಾಶ ಇರುವುದರಿಂದ ಪದವಿ ಹಂತದಲ್ಲೇ ಬಿಕಾಂ ಜತೆಗೆ ಐಬಿಪಿಎಸ್ ಪರೀಕ್ಷಾ ತರಬೇತಿ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ದೊರೆಯಲಿದೆ. ಇದರೊಂದಿಗೆ ಜನರಲ್ ಬಿ.ಕಾಂ ಕೂಡ ಇಲ್ಲಿ ಲಭ್ಯವಿದೆ.
    ಬಿಎ ವಿಭಾಗದಲ್ಲಿ ಅತ್ಯಽಕ ಉದ್ಯೋಗಾವಕಾಶಗಳುಳ್ಳ ಪತ್ರಿಕೋದ್ಯಮ, ಐಚ್ಚಿಕ ಇಂಗ್ಲಿಷ್, ಮನಃಶಾಸ್ತ್ರದಂತಹ ವಿಷಯಗಳನ್ನು ಹೊಂದಿರುವುದು ಈ ವಿದ್ಯಾ ಸಂಸ್ಥೆಯ ವಿಶೇಷತೆ. ತತ್ತ್ವಶಾಸ್ತ್ರ, ಐಚ್ಚಿಕ ಕನ್ನಡ ವಿಷಯಗಳೂ ಇಲ್ಲಿ ಲಭ್ಯ. ಮಂಗಳೂರು ವಿಶ್ವವಿದ್ಯಾಲಯದಡಿ ಸಂಸ್ಕೃತ ಐಚ್ಚಿಕ ವಿಷಯ ಬೋಽಸುವ ಬೆರಳೆಣಿಕೆಯ ಕಾಲೇಜುಗಳಲ್ಲಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯವೂ ಒಂದು.

    *ಪುತ್ತೂರಿನಲ್ಲಿ ಮನಃಶಾಸ್ತ್ರ ಆರಂಭಿಸಿದ ಮೊದಲ ಸಂಸ್ಥೆ :

    ಪುತ್ತೂರು ಪರಿಸರದಲ್ಲಿ ಮನಃಶಾಸ್ತ್ರವನ್ನು ಪದವಿ ಹಂತದಲ್ಲಿ ಮೊದಲಿಗೆ ಪರಿಚಯಿಸಿದ ಕೀರ್ತಿ ಅಂಬಿಕಾ ಮಹಾವಿದ್ಯಾಲಯದ್ದು. ನೂತನ ಶಿಕ್ಷಣ ನೀತಿಯನ್ವಯ ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರು ಇರಲೇಬೇಕೆಂಬ ನಿಯಮ ರೂಪಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಮನಃಶಾಸ್ತ್ರ ಓದಿದ ವಿದ್ಯಾರ್ಥಿಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಲಿದೆ.
    *ಅಧ್ಯಯನದ ಪ್ರಯೋಜನಗಳು:
    ಮನಃಶಾಸ್ತ್ರ ವಿಷಯ ಉದ್ಯೋಗಾವಕಾಶದ ಆಚೆಗೂ ಅಧ್ಯಯನಾಕಾಂಕ್ಷಿಗೆ ಲಾಭ ತರುತ್ತದೆ. ಓದುವ ಸಂದರ್ಭದಲ್ಲಿಯೇ ಅನೇಕ ವ್ಯಕ್ತಿಗಳ ಒಡನಾಟ ಹಾಗೂ ಅವರ ಭಾವನೆಗೆ ಸ್ಪಂದಿಸುವಿಕೆ ಅಧ್ಯಯನದ ಭಾಗವಾಗಿ ದೊರಕುತ್ತದೆ. ವೃತ್ತಿಪರ ಮನಃಶಾಸ್ತ್ರಜ್ಞನಾಗಿ ರೂಪಿಸಿಕೊಳ್ಳುವುದಕ್ಕೆ ಅನುಕೂಲವೆನಿಸುತ್ತದೆ. ಆಸ್ಪತ್ರೆಗಳಲ್ಲಿ, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಪದವಿ ಅಧ್ಯಯನ ಕಾಲದಲ್ಲಿಯೇ ಆಂತರಿಕ ತರಬೇತಿ ಹೊಂದುವ ಅವಕಾಶವನ್ನು ಈ ವಿಷಯ ಒದಗಿಸಿಕೊಡುತ್ತದೆ.

    *ತತ್ವಶಾಸ್ತ್ರ ಬೋಽಸುವ ಏಕೈಕ ಕಾಲೇಜು: ಪದವಿ ಹಂತದ ಬಿಎ ವಿಭಾಗದಲ್ಲಿ ತತ್ವಶಾಸ್ತ್ರವನ್ನು ಒಂದು ಆಯ್ಕೆಯಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಮನಃಶಾಸ್ತ್ರ ಹಾಗೂ ತತ್ತ್ವಶಾಸ್ತ್ರವನ್ನು ಜತೆಯಾಗಿ ಅಧ್ಯಯನ ಮಾಡಿದವರು ಅತ್ಯುತ್ಕೃಷ್ಟ ಮನಃಶಾಸ್ತ್ರಜ್ಞರಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಾಗುತ್ತದೆ. ಮಂಗಳೂರು ವಿಶ್ವವಿದ್ಯಾಲಯದಡಿ ತತ್ವಶಾಸ್ತ್ರ ಬೋಽಸುತ್ತಿರುವ ಏಕೈಕ ಕಾಲೇಜೆಂಬ ಹೆಗ್ಗಳಿಕೆ ಅಂಬಿಕಾ ಮಹಾವಿದ್ಯಾಲಯದ್ದು.
    *ಉಚಿತ ಶಿಕ್ಷಣ: ಭಾರತೀಯ ತತ್ವಗಳಲ್ಲಡಗಿರುವ ಜ್ಞಾನದೆಡೆಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ತತ್ವಶಾಸ್ತ್ರ ವಿಷಯ ಸಂಯೋಜನೆ ಹೊಂದಿರುವ ಬಿಎ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
    *ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ : ಅಂಬಿಕಾ ಕಾಲೇಜಿನಲ್ಲಿ ಪದವಿ ಓದುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದ ತೊಡಗಿ ಅಂತಿಮ ವರ್ಷದವರೆಗೂ ಎಸ್‌ಡಿಎ, ಎಫ್‌ಡಿಎ, ಪಿಡಿಒದಂತಹ ಪರೀಕ್ಷೆಗಳಿಗೆ ನಿರಂತರ ತರಬೇತಿ ನೀಡಲಾಗುತ್ತದೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರಿ ಉದ್ಯೋಗಕ್ಕೆ ಕಳುಹಿಸುವ ಇರಾದೆ ಈ ಶಿಕ್ಷಣ ಸಂಸ್ಥೆಯದ್ದು.
    *ಅನುಪಮ ಟಿವಿ ವಿಶೇಷ ಆಕರ್ಷಣೆ: ಪತ್ರಿಕೋದ್ಯಮ ವಿಭಾಗ ಮುನ್ನಡೆಸುತ್ತಿರುವ ಅನುಪಮ ಟಿವಿ ಎಂಬ ಯೂಟ್ಯೂಬ್ ವಾಹಿನಿ ಇದೀಗ ಆಕರ್ಷಣೆಗೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಟಿವಿ ಪತ್ರಿಕೋದ್ಯಮದ ಅರಿವನ್ನು ಮೂಡಿಸುವ ನೆಲೆಯಲ್ಲಿ ಈ ವಾಹಿನಿಯನ್ನು ಆರಂಭಿಸಲಾಗಿದೆ.
    *ಸುದರ್ಶನ ಮಾಸಪತ್ರಿಕೆ: ಪತ್ರಿಕೋದ್ಯಮ ವಿಭಾಗ ಹೊರತರುತ್ತಿರುವ ೩೨ ಪುಟಗಳ ಸುದರ್ಶನ ಮಾಸಪತ್ರಿಕೆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕಲೆಯನ್ನು ಕಲಿಸಿಕೊಡುತ್ತಿದೆ.
    *ಅಭಿನವ ವಾರಪತ್ರಿಕೆ: ವರದಿಗಾರಿಕೆ, ಬರವಣಿಗೆ ಕಲೆಯನ್ನು ತುಂಬುವ ನೆಲೆಯಲ್ಲಿ, ಪುಟ ವಿನ್ಯಾಸದ ಕಲ್ಪನೆ ತರುವಲ್ಲಿ ಅಭಿನವ ವಾರಪತ್ರಿಕೆ ಕೆಲಸ ಮಾಡುತ್ತಿದೆ.
    *ಭಾರತೀಯ ಕಾಲಗಣನೆ, ಪಂಚಾಂಗ ಪದ್ಧತಿ: ಪದವಿ ಮಹಾವಿದ್ಯಾಲಯದಲ್ಲಿ ಭಾರತೀಯ ಪಂಚಾಂಗ ಪದ್ಧತಿಯ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ಭಗವದ್ಗೀತೆ ಪಠಣ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮದಂತಹ ಪಠಣಗಳು, ಯೋಗ ತರಬೇತಿಗಳು ಇಲ್ಲಿ ನಿರಂತರವಾಗಿ ಸಾಗಿಬರುತ್ತಿವೆ.


    ನಟ್ಟೋಜ ಫೌಂಡೇಷನ್ ಟ್ರಸ್ಟ್‌ನ ಹೆಮ್ಮೆಯ ಸಂಸ್ಥೆಗಳು
    *ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ)
    *ಅಂಬಿಕಾ ಪದವಿಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ
    *ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ, ಬಪ್ಪಳಿಗೆ
    *ಅಂಬಿಕಾ ಪದವಿ ಮಹಾವಿದ್ಯಾಲಯ, ಬಪ್ಪಳಿಗೆ
    *ಅಂಬಿಕಾ ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಕೋರ್ಸ್‌ಗಳು
    ಬಿ.ಎ, ಬಿಕಾಂ ಜನರಲ್, ಬಿ.ಕಾಂ ಇಂಟಗ್ರೇಟೆಡ್ (ಸಿಎ/ಐಬಿಪಿಎಸ್)


    ಕಡಿಮೆ ಶುಲ್ಕ
    ತತ್ವಶಾಸ್ತ್ರವನ್ನು ಒಂದು ವಿಷಯವಾಗಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದರೆ ತತ್ವಶಾಸ್ತ್ರಕ್ಕಿಂತ ಹೊರತಾದ ವಿದ್ಯಾರ್ಥಿಗಳಿಗೆ ಮತ್ತು ಕೋರ್ಸ್‌ಗಳಿಗೆ ಅತ್ಯಂತ ಕಡಿಮೆ ಶುಲ್ಕವನ್ನು ವಿಽಸುತ್ತಿದೆ.ಬಡ ವಿದ್ಯಾರ್ಥಿಗಳ ಕೈಗೆಟಕುವ ಶುಲ್ಕವನ್ನಷ್ಟೇ ವಿಽಸುತ್ತಿರುವುದು ಪಾಲಕರಿಗೆ ಸಂತಸ ತಂದಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟ, ಅನುಭವಿ ಶಿಕ್ಷಕ ವೃಂದ, ವಿವಿಧ ಸವಲತ್ತುಗಳು, ಗುಣಮಟ್ಟದ ಆಹಾರದ ಜತೆಗೆ ಉತ್ಕೃಷ್ಟ ಹಾಸ್ಟೆಲ್ ವ್ಯವಸ್ಥೆ, ಅತ್ಯುತ್ತಮ ಗ್ರಂಥಾಲಯವೇ ಮೊದಲಾದ ಅನೇಕ ಸೌಲಭ್ಯಗಳು ವಿಶೇಷತೆಗಳೆನಿಸಿವೆ. ಕಾಲೇಜಿನಲ್ಲಿ ನಿಗದಿತವಾದ ಕೆಲವು ಅವಕಾಶಗಳಷ್ಟೇ ಇದ್ದು, ಆಸಕ್ತ ವಿದ್ಯಾರ್ಥಿಗಳು ತಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ :೯೪೪೮೮೩೫೪೮೮ / ೯೪೪೯೧೦೨೦೮೨.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts