More

    ಗಂಡ-ಹೆಂಡತಿ ನಡುವೆ ಜಗಳ: ಸಮಸ್ಯೆ ಪರಿಹಾರಕ್ಕೆ ಜ್ಯೋತಿಷಿ ಮೊರೆ ಹೋದವರಿಗೆ ಕಾದಿತ್ತು ಶಾಕ್!​

    ಬೆಂಗಳೂರು: ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೂಡ ಜ್ಯೋತಿಷಿಗಳ ಮಾತು ನಂಬಿ ಮೋಸ ಹೋಗತ್ತಿರುವುದು ವಿಪರ್ಯಾಸವೇ ಸರಿ. ಕುಟುಂಬದಲ್ಲಿ ಏನೇ ಸಮಸ್ಯೆ ಬಂದರೂ ಅದಕ್ಕೆ ಮೂಲ ಕಾರಣ ಕುಟುಂಬದಲ್ಲೇ ಇರುತ್ತದೆ ಮತ್ತು ಅದಕ್ಕೆ ಪರಿಹಾರವನ್ನೂ ಕುಟುಂಬದವರೇ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಸಂಬಂಧವೇ ಇಲ್ಲದ ವ್ಯಕ್ತಿಯ ಬಳಿ ಹೋದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ನಗರದ ಯಲಹಂಕದಲ್ಲಿ ನೆಲೆಸಿರುವ ಕುಟಂಬವೊಂದು ಜ್ಯೋತಿಷಿಯ ಮಾತು ನಂಬಿ ಚಿನ್ನಾಭರಣದ ಜತೆಗೆ ಹಣವನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

    ಇದನ್ನೂ ಓದಿ: ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ

    ಯಲಹಂಕ ಮನೆಗೆ ಭೇಟಿ 

    ಘಟನೆಯ ವಿವರಣೆಗೆ ಬರುವುದಾದರೆ ಯಲಹಂಕ ನಿವಾಸಿ ಇಂದಿರಾ ಎಂಬಾಕೆಯ ಮಗಳು ಮತ್ತು ಅಳಿಯನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕುಟುಂಬದಲ್ಲಿ ನೆಮ್ಮದಿ ಇಲ್ಲದ ಕಾರಣ ಹೊಸಪೇಟೆ ಮೂಲದ ಜ್ಯೋತಿಷಿ ಸುರೇಶ್‌ ಪಾಟೀಲ್ ಮೊರೆ ಹೋಗಿದ್ದರು. ಈ ವೇಳೆ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಬೆಂಗಳೂರಿನ ಯಲಹಂಕ ಮನೆಗೆ ಜ್ಯೋತಿಷಿ ಭೇಟಿ ನೀಡಿದ್ದ.

    ಕದ್ದ ಜಾಗದಲ್ಲಿ ನಿಂಬೆಹಣ್ಣು

    ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ಮಾಡಬೇಕು ಎಂದು ಹೇಳಿ ಕುಟುಂಬಸ್ಥರನ್ನು ದೇವಸ್ಥಾನಕ್ಕೆ ಕಳುಹಿಸಿದ್ದ. ಅತ್ತ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳುತ್ತಿದ್ದಂತೆ ಇತ್ತ ಜ್ಯೋತಿಷಿ ಮನೆಯ ಬೀರುವಿನಲ್ಲಿದ್ದ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜತೆಗೆ ಹಣವನ್ನು ಕದ್ದು ಆ ಜಾಗದಲ್ಲಿ ನಿಂಬೆಹಣ್ಣು ಇಟ್ಟಿದ್ದ.

    ಬಾಗಿಲು ತೆಗೆದ ಕೂಡಲೇ ಶಾಕ್​

    ದೇವಸ್ಥಾನದಿಂದ ವಾಪಸ್​ ಮನೆಗೆ ಬಂದ ಕುಟುಂಬಕ್ಕೆ ಬೀರು ಬಾಗಿಲು ತೆಗೆಯುವಂತೆ ಜ್ಯೋತಿಷಿಯೇ ಸೂಚನೆ ನೀಡಿದ್ದ. ಬಾಗಿಲು ತೆಗೆದ ಕೂಡಲೇ ಅದರಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳುವಾಗಿ, ಆ ಜಾಗದಲ್ಲಿ ನಿಂಬೆಹಣ್ಣು ಇರುವುದನ್ನು ನೋಡಿ ಕುಟುಂಬಸ್ಥರು ಶಾಕ್ ಆದರು.

    ಇದನ್ನೂ ಓದಿ: ಒಂದು ಸಣ್ಣ ತಪ್ಪಿನಿಂದ ಪ್ರಾಣವನ್ನೇ ಕಳ್ಕೊಂಡ ವಿದ್ಯಾರ್ಥಿನಿ: ಚಿಕ್ಕ ಸುಳಿವು ಸಿಕ್ಕಿದ್ದರೂ ಉಳಿಯುತ್ತಿತ್ತು ಜೀವ

    ಮತ್ತೆ ಹಣ ವಸೂಲಿ

    ಇದಾದ ಬಳಿಕ ಮತ್ತೊಂದು ವರಸೆ ತೆಗೆದ ಜ್ಯೋತಿಷಿ, ಇದೆಲ್ಲ ನಿಮ್ಮ ಬೀಗರ ಮನೆಯವರೇ ಮಾಡಿರುವ ಕೆಸಲ. ಚಿಂತಿಸಬೇಡಿ ಕಳ್ಳತನ ಮಾಡಿರುವ ಎಲ್ಲವನ್ನು ನಾನು ವಾಪಸ್ ತರಿಸುತ್ತೇನೆ ಎಂದು ಹೇಳಿ ಕುಟುಂಬಸ್ಥರಿಂದ ಮತ್ತೆ ಹಣ ಪಡೆದುಕೊಂಡು ನನಗೆ ಎರಡು ಅಮಾವಾಸ್ಯೆ ಸಮಯ ಕೊಡಿ ಎಂದು ಹೇಳಿ ಹಣ, ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದಾನೆ.

    ಜ್ಯೋತಿಷಿಯನ್ನು ನಂಬಿ ವಂಚನೆಗೆ ಒಳಗಾಗಿರುವ ಕುಟುಂಬ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಈ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯಕ್ಕೆ ಜ್ಯೋತಿಷಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಆಗಸ್ಟ್​ 1ರಿಂದ ಹಾಲಿನ ದರ ಏರಿಕೆ ಜತೆಗೆ ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯೂ ಶೇ. 10 ಹೆಚ್ಚಳ!

    ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts