

ಅಹಮದಾಬಾದ್: ಈ ವರ್ಷ ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಿರೀಕ್ಷೆ ಗಗನಕ್ಕೇರಿದೆ. ಐಟಿಸಿಯ ವೆಲ್ಕಮ್ ಹೋಟೆಲ್ ಅಕ್ಟೋಬರ್ ರಾತ್ರಿಯ ತಂಗಲು ರೂ 72,000 ಕೇಳುತ್ತಿದೆ ಎಂಬ ವರದಿಗಳು ಹೊರಬೀಳುತ್ತಿದ್ದಂತೆಯೇ ಆ ನಗರದಲ್ಲಿ ಒಂದು ರಾತ್ರಿಯ ಹೋಟೆಲ್ ರೂಮ್‌ಗಳ ಬೆಲೆಗಳು ಸಾಮಾನ್ಯ ದರಕ್ಕಿಂತ 20 ಪಟ್ಟು ಹೆಚ್ಚಾಗಿದೆ
ಆಗಸಕ್ಕೇರಿರುವ ಬೆಲೆಗಳು ಮತ್ತು ಕೊಠಡಿಗಳ ಅಲಭ್ಯತೆಯು ಪ್ರಯಾಣಿಸುವ ಅಭಿಮಾನಿಗಳು ಹೊಸ ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿದಿದ್ದಾರೆ! ಅಹಮದಾಬಾದ್ ಮಿರರ್‌ನ ವರದಿಯ ಪ್ರಕಾರ, ಜನರು ಫುಲ್ ಬಾಡಿ ಸ್ಕ್ಯಾನ್ಗಾಗಿ ಆಸ್ಪತ್ರೆಗಳನ್ನು ಸಂಪರ್ಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್ 15 ರಂದು ರಾತ್ರಿಗೇ ಬುಕ್ ಮಾಡಿಸುತ್ತಿದ್ದಾರೆ.
ಈ ಹೊಸ ವ್ಯವಸ್ಥೆ ಅವಳಿ ಉದ್ದೇಶಗಳನ್ನು ಪೂರೈಸುತ್ತದೆ. ವಸತಿ ಪಕ್ಕಾ ಆದರೆ, ಅದರೊಂದಿಗೆ ಫುಲ್ ಬಾಡಿ ಚೆಕಪ್ ಕೂಡ ನಡೆದುಹೋಗುತ್ತದೆ.
"ಇದು ಆಸ್ಪತ್ರೆಯಾಗಿರುವುದರಿಂದ ಅವರು ಪೂರ್ಣ ದೇಹ ತಪಾಸಣೆ ಮತ್ತು ರಾತ್ರಿಯ ತಂಗುವಿಕೆಗಾಗಿ ಕೇಳುತ್ತಿದ್ದಾರೆ. ಹೀಗಾಗಿ ಅವರ ಲಾಡ್ಜ್ಗಳಿಗೆ ನೀಡುವ ಹಣವನ್ನು ಉಳಿಸುವುದು ಮತ್ತು ಅವರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಎರಡೂ ಉದ್ದೇಶಗಳು ಈಡೇರಿವೆ” ಎಂದು ನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಡಾ. ಪರಾಸ್ ಶಾ ಅವರು ಪ್ರಕಟಣೆಗೆ ತಿಳಿಸಿದರು. (ಏಜೆನ್ಸೀಸ್)