More

    ಭಾರತ vs ಪಾಕಿಸ್ತಾನ ಪಂದ್ಯಕ್ಕೂ ವಿಮಾನದ ಟಿಕೆಟ್ ದರ ಏರುವುದಕ್ಕೂ ಏನಪ್ಪಾ ಸಂಬಂಧ? ಇಲ್ಲಿದೆ ಸಂಪೂರ್ಣ ವಿವರ…

    ನವದೆಹಲಿ: ಅಕ್ಟೋಬರ್‍ 15ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನ ಭಾಗವಾಗಿ ಅಕ್ಟೋಬರ್ ತಿಂಗಳಲ್ಲಿ ಅಹಮದಾಬಾದ್ ನಗರದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೂರು ತಿಂಗಳು ಇರುವಾಗಲೇ, ಆತಿಥೇಯ ನಗರಕ್ಕೆ ಸಂಚರಿಸುವ ವಿಮಾನ ದರಗಳು ಗಗನಕ್ಕೇರಿವೆ.

    ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14ರಂದು ವಿಮಾನ ಟಿಕೆಟ್ ಬುಕ್‍ ಮಾಡಲು ಹೊರಡುವವರಿಗೆ ಶಾಕ್‍ ಕಾದಿದ್ದು ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪ್ರಸ್ತುತ, ದೆಹಲಿಯಿಂದ ಅಹಮದಾಬಾದ್‍ಗೆ ಮತ್ತು ಮುಂಬೈನಿಂದ ಅಹಮದಾಬಾದ್‍ಗೆ ಏಕಮುಖ ನೇರ ವಿಮಾನಕ್ಕೆ 15,000 ರಿಂದ 22,000 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ.

    ಇದನ್ನೂ ಓದಿ: 12 ವರ್ಷಗಳ ಬಳಿಕ ಭಾರತಕ್ಕೆ ಬಂದ ಪಾಕ್​ ವಿದೇಶಾಂಗ ಸಚಿವರಿಗೆ ಜೈ ಶಂಕರ್​ ಸ್ವಾಗತ ಕೋರಿದ್ದು ಹೀಗೆ!

    ಈಸ್ ಮೈಟ್ರಿಪ್‍ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಅಪಾರ ಜನಪ್ರಿಯತೆಯನ್ನು ಎತ್ತಿ ತೋರಿಸಿದ್ದು, “ಅಧಿಕೃತವಾಗಿ ಘೋಷಣೆ ಮಾಡಿದಾಗಿನಿಂದ, ಲಾಡ್ಜ್ ಬಾಡಿಗೆ ದರವೂ ಅಹಮದಾಬಾದ್‍ನಲ್ಲಿ 5 ಪಟ್ಟು ಹೆಚ್ಚಳವಾಗಿದೆ. ಐಷಾರಾಮಿ ಹೋಟೆಲ್‍ಗಳು ಪ್ರತಿ ರಾತ್ರಿಗೆ ₹ 50,000 ವರೆಗೆ ಶುಲ್ಕ ವಿಧಿಸುತ್ತಿವೆ. ಇದು ಹೋಟೆಲ್ ಗಳು ಮಾತ್ರವಲ್ಲ, ವಿಮಾನ ಟಿಕೆಟ್ ಗಳ ಬೆಲೆಯೂ ಗಗನಕ್ಕೇರುತ್ತಿದೆ.

    ಜನರು ಮೂರು ತಿಂಗಳು ಮುಂಚಿತವಾಗಿ ಬುಕ್ ಮಾಡಿದರೂ, ವಿಮಾನ ದರಗಳು ಸಾಮಾನ್ಯಕ್ಕಿಂತ ಆರು ಪಟ್ಟು ದುಬಾರಿಯಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಎಕಾನಮಿ ಕ್ಲಾಸ್ ದೆಹಲಿ-ಅಹಮದಾಬಾದ್ ಟಿಕೆಟ್ ಸುಮಾರು 3000 ರೂ. ಆದರೆ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಅದೇ ಟಿಕೆಟ್ ಬೆಲೆ 20,000 ರೂ ಎಂದು “ಹೇಳಿದ್ದಾರೆ. “ವಿಮಾನ ಟಿಕೆಟ್ಗಳ ಬೇಡಿಕೆ ಮತ್ತು ನಮ್ಮ ವೆಬ್ಸೈಟ್ನಲ್ಲಿ ಹುಡುಕಾಟಗಳು ಗರಿಷ್ಠ ಮಟ್ಟವನ್ನು ತಲುಪಿದೆ.

    ಇದನ್ನೂ ಓದಿ: ಐಸಿಸಿ ದಶಕದ ತಂಡಗಳಿಗೆ ಭಾರತೀಯರದ್ದೇ ಸಾರಥ್ಯ, ಪಾಕ್ ಕ್ರಿಕೆಟಿಗರಿಗೆ ನಿರಾಸೆ!

    ಪಂದ್ಯ ವೀಕ್ಷಿಸಲು ಉತ್ಸುಕರಾಗಿರುವ ಹೆಚ್ಚಿನ ಜನರು ಈಗಾಗಲೇ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿದ್ದಾರೆ” ಎಂದು ಅವರು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts