ಪ್ರವಾಹ ಇಳಿದದ್ದೇ ತಡ ನೀರಾಟವಾಡಿ ಮಜಾ ಮಾಡಿದ ದೆಹಲಿ ಜನರು!

feature dehli img
Published on: 

ನವದೆಹಲಿ: ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ನವದೆಹಲಿ ಯುಮುನೆಯ ಸಿಟ್ಟಿಗೆ ಬಹುತೇಕ ಮುಳುಗಿ ಹೋಯಿತೋ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಇದೀಗ ನೀರಿನ ಮಟ್ಟ ಇಳಿಯುತ್ತಿದ್ದಂತೆಯೇ, ಮನೆಗಳಿಂದ ಹೊರ ಬಿದ್ದಿರುವ ದೆಹಲಿ ಜನರು ರಸ್ತೆ ಮಧ್ಯದಲ್ಲೇ ಹರಿಯುವ ನೀರಿಗೆ ಮೈಯೊಡ್ಡಿ ಮಜಾ ಮಾಡುತ್ತಿದ್ದಾರೆ.

ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರೂ ಹೀಗೆ ನೀರಾಟ ಆಡುವುದನ್ನು ಕಂಡ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಕೆಲವರು ಮಕ್ಕಳ ಆರೋಗ್ಯದ ಬಗ್ಗೆ ಚಿಂತಿತರಾದರೆ ಇನ್ನೂ ಕೆಲವರು, ಜನರ ಜೀವನೋತ್ಸಾಹ ಕಂಡು ಖುಷಿ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‍ಅಲ್ಲಿ ಈ ವಿಡಿಯೋವನ್ನು ‘ಗಬ್ಬರ್’ ಎನ್ನುವ ಹ್ಯಾಂಡಲ್‍ನಿಂದ ಅಪ್ಲೋಡ್‍ ಮಾಡಲಾಗಿದ್ದು ಭಾರಿ ವೈರಲ್‍ ಆಗುತ್ತಿದೆ. ಅದಕ್ಕೆ "ಭಾರತೀಯರಿಗೆ ಉಚಿತ ಮನರಂಜನೆ ಬೇಕಾಗುತ್ತದೆ. ಅವರು ಮೋಜಿಗಾಗಿ ರಸ್ತೆಯಲ್ಲಿ ಹರಿಯುವ ನೀರಿಗೆ ಇಳಿಯಲೂ ಸಿದ್ಧರಾಗಿದ್ದಾರೆ" ಎಂದು ಅವರು ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ವೀಡಿಯೊದಲ್ಲಿ ಜನರು ನೀರಿನಲ್ಲಿ ಕುಳಿತು ಮಲಗಿರುವುದನ್ನು ತೋರಿಸುತ್ತದೆ. ಮುಖದ ಮೇಲೆ ನಗು ಅರಳಿರುವುದು ಕಾಣಿಸುತ್ತಿದೆ.

ಅಪ್ಲೋಡ್ ಮಾಡಿದ ನಂತರ, ಈ ವೀಡಿಯೊ 342 ಸಾವಿರ ವೀಕ್ಷಣೆಗಳನ್ನು ಪಡೆದಿದ್ದು ವೈರಲ್ ಆಗಿದೆ. "ಉತ್ತರ ಭಾರತದ ಪ್ರವಾಸಿಗರನ್ನು ವಿಶೇಷವಾಗಿ ದೆಹಲಿ, ಹರಿಯಾಣ, ಯುಪಿ, ಬಿಹಾರದಿಂದ ನಿಷೇಧಿಸಬೇಕು, ಅವರು ಇದಕ್ಕಿಂತ 10 ಪಟ್ಟು ಕೆಟ್ಟದಾಗಿ ವರ್ತಿಸಿ ಸ್ಥಳಗಳನ್ನು ಕಲುಷಿತಗೊಳಿಸುತ್ತಾರೆ" ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.

ಇನ್ನೊಬ್ಬ ವ್ಯಕ್ತಿಯು, "ಈ ಮಕ್ಕಳು ವಿದ್ಯಾವಂತ ಮಧ್ಯಮ ವರ್ಗದ ವರ್ಗಕ್ಕೆ ಸೇರಿದವರೇ? ನೈರ್ಮಲ್ಯ ಜ್ಞಾನ ಪಠ್ಯಕ್ರಮದ ಒಂದು ಭಾಗವಾಗಿರಬೇಕು” ಎಂದು ಬರೆದಿದ್ದಾರೆ.