More

    ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!

    ನವದೆಹಲಿ: ಜಾಹ್ನವಿ ಕಪೂರ್, ತನ್ನ ಫೋಟೋವನ್ನು ಎಡಿಟ್‍ ಮಾಡಿ ಸೊಂಟದ ಆಕಾರವನ್ನು ಇನ್ನಷ್ಟು ಸುಂದರವಾಗಿಸಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಎಡಿಟ್‍ ಮಾಡಿದ ಕುರುಹುಗಳನ್ನು ಪತ್ತೆಹಚ್ಚಿದ ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಈ ನಟಿಗೆ ‘ಸೊಂಟದ ವಿಷ್ಯ ಬ್ಯಾಡ’ ಎನ್ನುವವರು ಯಾರೂ ಇಲ್ಲವಾಗಿದ್ದಾರಾ ಎನ್ನುವ ಪ್ರಶ್ನೆ ಫೋಟೊ ನೋಡಿದಾಗ ಮೂಡುವುದಂತೂ ಸುಳ್ಳಲ್ಲ…

    ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!

    ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟು ನಿರ್ದಯವಾಗಿ ಟ್ರೋಲ್ ಮಾಡಲಾಗುತ್ತಿದೆ ಎಂದರೆ ನಟಿಯದ್ದು ಕುದುರೆ ಕಾಲು ಎಂದು ಕಾಲೆಳೆದಿದ್ದಾರೆ. ಜಾಹ್ನವಿ ಕಪೂರ್, ತನ್ನ ಮುಂಬರುವ ಚಿತ್ರ ಬವಾಲ್ ಪ್ರಚಾರದಲ್ಲಿ ನಿರತರಾಗಿದ್ದು ಈ ನಡುವೆಯೇ ಟ್ರೋಲಿಂಗ್‍ಗೆ ಒಳಗಾಗಿದ್ದಾರೆ.

    ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!

    ಚಲನಚಿತ್ರಗಳ ಪ್ರಚಾರ ಮಾಡುವುದು ಎಂದರೆ ಅದರಲ್ಲಿ ದೈನಂದಿನ ಘಟನೆಗಳು ಸೇರುತ್ತವೆ. ಅಂದರೆ ಚಿತ್ರೀಕರಣದ ನಂತರ ಹೊಸ ಉಡುಪುಗಳೊಂದಿಗೆ ಫೋಟೊ ಹೊಡೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದೂ ಒಂದು. ಎಂದಿನಂತೆ, ಅವರು ಇತ್ತೀಚಿನ ಚಿತ್ರೀಕರಣದ ಕೆಲ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಜಾಹ್ನವಿ ಕಪೂರ್ ಅವರ ಸೊಂಟವನ್ನು ಇನ್ನಷ್ಟು ತೆಳ್ಳಗಾಗಿ ಕಾಣುವಂತೆ ಎಡಿಟ್‍ ಮಾಡಲಾಗಿದೆ.

    ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!

    ಪೋಸ್ಟ್ ಮಾಡಿದ್ದ ಮೊದಲಿಗೆ ಹೆಚ್ಚಿನ ಜನರು ನಟಿಯ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡಿದ್ದರು. ಆದರೆ ಕೆಲವರು ನಟಿ ಬಳಸಿದ ಎಡಿಟಿಂಗ್ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದ್ದಾರೆ. ಕೆಲವರು “ಯಾರೋ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ” ಎಂದು ಜಾಹ್ನವ ಕಪೂರ್ ಅವರ ಫೋಟೋವನ್ನು ಪೋಸ್ಟ್ ಮಾಡುವಾಗ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ “ಅವಳ ಕಾಲು ಕುದುರೆಯ ಕಾಲುಗಳಂತೆ ಕಾಣುತ್ತದೆ. ಅವುಗಳು ಕೋಲಿನಂತೆ ತೆಳ್ಳಗಿವೆ” ಎಂದು ನಿರ್ದಯವಾಗಿ ಟ್ರೋಲ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, “ಅವರಿಗೆ ಎಡಿಟಿಂಗ್ ಯಾಕೆ ಬೇಕಿತ್ತು?” ಎಂದು ಪ್ರಶ್ನಿಸಿದ್ದಾರೆ.

    ಫೋಟೊ ಎಡಿಟ್ ಆಗಿದೆ ಎಂದು ತಿಳಿದದ್ದು ಹೇಗೆ?

    ಜಾಹ್ನವಿ ಕಪೂರ್, ತಮ್ಮ ಸೊಂಟವನ್ನು ಇನ್ನಷ್ಟು ಚಿಕ್ಕದಾಗಿ ಕಾಣಿಸುವ ಪ್ರಯತ್ನವನ್ನು ಫೋಟೊಶಾಪ್‍ನಲ್ಲಿ ಮಾಡಿದ್ದಾರೆ. ಆದರೆ ಆ ಸಂದರ್ಭ, ಸೊಂಟದ ಹಿಂಭಾಗದಲ್ಲಿ ಕಾಣಿಸುತ್ತಿರುವ ಸೋಫಾದ ಕಾಲು ಕೂಡ ಬೆಂಡ್ ಆಗಿದೆ. ಸೋಫಾದ ಆ ಕಾಲಿಗೂ ಅದರ ಇನ್ನೊಂದು ಕಾಲು ಇರುವ ರೀತಿಗೂ ಸಾಮ್ಯತೆ ಇಲ್ಲ.

    ಟ್ರೋಲ್‍ ಮಾಡಿ ಪೋಸ್ಟ್ ಮಾಡಿರುವ ಟ್ವೀಟ್‍ಗಳು ಹೀಗಿವೆ ನೋಡಿ:

    ಇನ್ನು ಜಾಹ್ನವಿ ಕಪೂರ್ ಅಪ್ಲೋಡ್‍ ಮಾಡಿದ್ದ ಚಿತ್ರ ಹೀಗಿದೆ ನೋಡಿ:

     

     
     
     
     
     
    View this post on Instagram
     
     
     
     
     
     
     
     
     
     
     

     

    A post shared by Janhvi Kapoor (@janhvikapoor)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts